- Monday
- November 25th, 2024
"ಶಿಕ್ಷಣವೇ ಸುಳ್ಯದ ಅಭಿವೃದ್ಧಿಗೆ ಬೇಕಾದ ಪ್ರಮುಖ ಮೂಲಸೌಕರ್ಯ ಎಂಬುದನ್ನು ಅರಿತ ಡಾ. ಕುರುಂಜಿ ಅವರ ದೂರದೃಷ್ಟಿ ಮತ್ತು ಕೊಡುಗೆಗಳು ಅಪಾರ, ಈ ನೆಲದ ದಣಿವರಿಯದ ಧೀಮಂತ ವ್ಯಕ್ತಿಯಾದ ಇವರು ನಮ್ಮೆಲ್ಲರ ಪ್ರಾತಃ ಸ್ಮರಣೀಯರು " ಎಂದು ಸಂಪನ್ಮೂಲ ವ್ಯಕ್ತಿಗಳಾಗಿದ ಶ್ರೀ ಕೆ.ಆರ್. ಗೋಪಾಲಕೃಷ್ಣ ಇವರು ತಿಳಿಸಿದರು. ಇವರು ದಿನಾಂಕ 16-12.2023 ರಂದು ಕೆ.ವಿ.ಜಿ ಸುಳ್ಯ ಹಬ್ಬ...
ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಐವರು ಆರೋಪಿಗಳು ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮನವಿ ಮಾಡಿದೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಇಂಡಿಯಾ ಸಂಘಟನೆಗೆ ಸೇರಿದವರಾದ ಬೆಳ್ಳಾರೆಯ ಬೂಡು ನಿವಾಸಿ ಎಂ.ಡಿ.ಮುಸ್ತಫ, ನೆಕ್ಕಿಲಾಡಿ...
ಸಂಪಾಜೆ ಬಳಿ ಬೈಕ್ ಸವಾರ ಸ್ಕಿಡ್ ಆಗಿ ಬಿದ್ದ ಘಟನೆ ನಿನ್ನೆ ಸಂಜೆ ನಡೆದಿದೆ. ಗಾಯಗೊಂಡ ಸವಾರನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಗೊಂಡ ವ್ಯಕ್ತಿ ಕೂತ್ಕುಂಜ ಗ್ರಾಮದ ನಾಗತೀರ್ಥ ನಿವಾಸಿ ನವೀನ ಡಿ.ಎಸ್. ಎಂದು ತಿಳಿದುಬಂದಿದೆ. https://youtu.be/-8edJK9NkMc?si=57g95_pXamSMIVNq
ಬಳ್ಪ ಸಮೀಪದ ಬೇಂಗನಡ್ಕ ವಿಠಲ ನಿವಾಸದ ಸಂತೋಷ್ ಕುಮಾರ್ ಹಾಗೂ ಅನುಷಾ ರೈ ದಂಪತಿಯ 10 ವರ್ಷದ ಪುತ್ರಿ ಸಂತೃಪ್ತಿ ರೈ ಕಳೆದ 3 ತಿಂಗಳಿನಿಂದ ರಕ್ತಕ್ಕೆ ಸಂಬಂಧಿಸಿದ(High Risk Acute Myeloid Leukaemia) ತೀವ್ರ ಕಾಯಿಲೆಯಿಂದ ಬಳಲುತ್ತಿದ್ದು, ಎಲ್ಲಾ ಮಕ್ಕಳಂತೆ ತನ್ನ ಸಹಪಾಠಿಗಳೊಂದಿಗೆ ಆಡಿ ನಲಿಯಬೇಕಿದ್ದ ಬಾಲಕಿ ಇದೀಗ ಮಂಗಳೂರಿನ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್...
ಕರ್ನಾಟಕದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇವರುಗಳ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ೦ತಹ ಕಾಂಗ್ರೆಸ್ ಸರಕಾರವು ತನ್ನ ಪ್ರಣಾಳಿಕೆಯಲ್ಲಿ ಪ್ರತಿ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳಿಗೆ ಯಜಮಾನಿಯ ಖಾತೆಗೆ ರೂಪಾಯಿ 2000/- ದಂತೆ ಜಮೆ ಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆ ಈಗಾಗಲೇ ಕಾಂಗ್ರೆಸ್ ಸರಕಾರವು...
ಶ್ರೀ ಸಾಸ್ತವೇಶ್ವರ ದೇವಸ್ಥಾನ ಅಜ್ಜಾವರ ಕರ್ಲಪ್ಪಾಡಿ ಇಲ್ಲಿನ ಜಾತ್ರೋತ್ಸವ ಹಿನ್ನಲೆಯಲ್ಲಿ ಶ್ರಮದಾನ ಸೇವೆಯನ್ನು ಇಂದು ಚೈತ್ರ ಯುವತಿ ಮಂಡಲ ( ರಿ)ಅಜ್ಜಾವರ ಮತ್ತು ಧರ್ಮಸ್ಥಳ ಒಕ್ಕೂಟ "ಎ" ಅಜ್ಜಾವರ ಇದರ ಸದಸ್ಯರಿಂದ ನಡೆಯಿತು ಈ ಸಂದರ್ಭದಲ್ಲಿ ದೇವಾಲಯದ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿಷ್ಠಿತ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಗೆ ದಿನ ನಿಗದಿಯಾಗಿದ್ದು ಮತ್ತೆ ರಾಜಕೀಯ ಸಂಚಲನ ಸೃಷ್ಟಿಸಲಿದೆಯೋ ಕಾದು ನೋಡಬೇಕಿದೆ. ಮಾ. 11ರಂದು ಆಡಳಿತ ಮಂಡಳಿಯ ಚುನಾವಣೆಗೆ ದಿನ ನಿಗದಿಯಾಗಿದೆ. ಚುನಾವಣೆಗೆ ಸಂಬಂಧಿಸಿ ಸದಸ್ಯ ಸಹಕಾರಿ ಸಂಘಗಳ ಡೆಲಿಗೇಟ್ ನಮೂನೆ ಮತ್ತಿತರ ದಾಖಲೆಗಳನ್ನು ಸ್ವೀಕರಿಸಲು ಹಾಗೂ ಪರಿಶೀಲಿಸಲು ಜ.4 ರಂದು ಪುತ್ತೂರಿನ ಶಿವರಾಯ...
ಸಂಪಾಜೆ ಗ್ರಾಮ ಪಂಚಾಯತ್ ಹಾಗೂ ಗ್ರಾಮ ಸ್ವಚ್ಛತಾ ಸಮಿತಿ ನೇತೃತ್ವದಲ್ಲಿ ಕಲ್ಲುಗುಂಡಿ ಪೇಟೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಕಸದ ತೊಟ್ಟಿ ಇಡುವ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು, ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾರವರು ಸ್ವಚ್ಛತೆ ಬಗ್ಗೆ ತಿಳಿಸಿ ಎಲ್ಲರ ಸಹಕಾರ ಕೋರಿದರು. ಕಾರ್ಯಕ್ರಮವನ್ನು ನವಮಿ ಸ್ಟೋರ್ ಬಳಿ ಕಸದ ತೊಟ್ಟಿ ಅಳವಡಿಸುವ ಮೂಲಕ...
ಎಲಿಮಲೆಯಲ್ಲಿ ಕಳೆದ ವರ್ಷ ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿ ಶಮಂತ್ ಎಂಬಾತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಇವರು ಚೊಕ್ಕಾಡಿಯವರಾಗಿದ್ದು, ಪ್ರಸ್ತುತ ನೆಲ್ಲೂರು ಕೆಮ್ರಾಜೆ ಗ್ರಾಮದ ಹೊಟ್ಟುಚೋಡಿಯಲ್ಲಿ ನೆಲೆಸಿರುವ ದಿ| ವಾಸುದೇವ ಎಂಬವರ ಪುತ್ರ, ಶಮಂತ್ ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ. ಇಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಮನೆಯಿಂದ...
ಸುಳ್ಯ ನಗರದ ಹೃದಯ ಭಾಗವಾದ ಸುಳ್ಯ ಜ್ಯೋತಿ ವೃತ್ತದಿಂದ ಹಿಡಿದು ಗಾಂಧಿನಗರದ ವರೆಗೆ ನಗರ ಪಂಚಾಯತ್ ಮತ್ತು ಪೋಲೀಸ್ ಇಲಾಖೆಯು ಜಂಟಿಯಾಗಿ ಎಡ ಹಾಗೂ ಬಲ ಬದಿ ಎಂಬಂತೆ ದಿನಕ್ಕೊಂದು ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಆದರೆ ವಾಹನ ಸವಾರರು ಮಾತ್ರ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡುತ್ತಿದ್ದು ಎರಡು ಬದಿಗಳಲ್ಲಿ ನಿಲ್ಲಿಸುತ್ತಿರುವ ಹಿನ್ನಲೆಯಲ್ಲಿ ರಸ್ತೆಯಲ್ಲಿ ಓಡಾಡಲು ಕಷ್ಟ...
Loading posts...
All posts loaded
No more posts