ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಚಾಲಕರನ್ನು ಗುತ್ತಿಗೆದಾರರು ಕೈಬಿಟ್ಟಿರುವುದನ್ನು ಖಂಡಿಸಿ ನಾಳೆ ಚಾಲಕರು ಬೀದಿಗಿಳಿದು ಪ್ರತಿಭಟನೆ ಸಲ್ಲಿಸಲಿದ್ದಾರೆ. ಇದರಿಂದ ನಾಳೆ ಸುಳ್ಯದಲ್ಲಿ ಸ್ಥಳೀಯ ಸರಕಾರಿ ಬಸ್ ಗಳ ಸಂಚಾರಕ್ಕೆ ಅಡ್ಡಿಯಾಗಲಿದ್ದು, ತಾಲೂಕಿನ ವಿವಿಧ ಕಡೆ ಸಂಚರಿಸುವ ಜನಸಾಮಾನ್ಯರು ಪರದಾಡುವಂತಾಗಲಿದೆ.
ಗುತ್ತಿಗೆ ಆಧಾರದಲ್ಲಿ ಗ್ರಾಮೀಣ ಭಾಗದಲ್ಲಿ ಓಡಾಡುವ ಬಸ್ ಗಳಿಗೆ ಕೆಎಸ್‌ಆರ್ ಟಿಸಿ ಹಲವಾರು ಚಾಲಕರನ್ನು ನೇಮಿಸಿತ್ತು. ಇದರ ನೇಮಕಾತಿ ಮಾಡುವ ಜವಾಬ್ದಾರಿಯನ್ನು ಮೈಸೂರಿನ ಪನ್ನಗ ಎಂಬ ಸಂಸ್ಥೆಗೆ ನೀಡಲಾಗಿತ್ತು. ಈ ಸಂಸ್ಥೆ ಈಗ ಚಾಲಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಚಾಲಕರಿಗೆ ವಂಚಿಸಿದ್ದಾರೆ. ಗುತ್ತಿಗೆ ಅವಧಿ ಮುಗಿಯದಿದ್ದರೂ ಅವರನ್ನು ಕೆಲಸದಿಂದ ವಜಾ ಮಾಡಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ನೇಮಕಗೊಂಡ ಚಾಲಕರು ಎಂಬ ಕಾರಣಕ್ಕೆ ಈಗಿನ ಸರಕಾರ ಅವರನ್ನು ವಜಾ ಮಾಡಿದೆಯೇ ಎಂಬ ಅನುಮಾನ ಮೂಡಿಸಿದೆ.