ನೈಜ ಹಿಂದುತ್ವಕ್ಕೆ ದಕ್ಕಿದ ಗೆಲುವು – ಕಂಜಿಪಿಲಿ.
ಮೋದಿ ಆಡಳಿದ ವೈಖರಿಗೆ ಹಾಗೂ ಕಾರ್ಯಕರ್ತರ ಶ್ರಮದ ಗೆಲುವು – ಭಾಗೀರಥಿ ಮುರುಳ್ಯ.
ಸುಳ್ಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಲ್ಲಿ ಒಂದಾದ ಸಿಎ ಬ್ಯಾಂಕ್ ಚುನಾವಣೆಯು ದ.೩೧ರಂದು ರೋಟರಿ ಶಾಲೆಯಲ್ಲಿ ಮುಂಜಾನೆ ೯ ರಿಂದ ೪ ರ ವರೆಗೆ ನಡೆಯಿತು ನಂತರದ ಮತ ಎಣಿಕೆ ಪ್ರಾರಂಭಿಸಿದ ಕೆಲವೇ ನಿಮಿಷಗಳಲ್ಲಿ ಸಹಕಾರ ಭಾರತಿಗೆ ಮೊದಲ ಗೆಲುವು ದಾಖಲಾಯಿತು ಬಳಿಕ ಒಂದರ ಹಿಂದೆ ಒಂದು ಗೆಲುವುಗಳನ್ನು ಕಾಣುತ್ತಾ ೧೩ ಸದಸ್ಯ ಬಲದ ಎಲ್ಲಾ ಸ್ಥಾನಗಳನ್ನು ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವಿನ ಮೂಲಕ ಮತ್ತೆ ಸಿ ಎ ಬ್ಯಾಂಕ್ ನಲ್ಲಿ ಪಾರುಪತ್ಯ ಮೆರೆಯಿತು .
ವಿಜಯೋತ್ಸವದಲ್ಲಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತನಾಡುತ್ತಾ ಇದು ಹಿರಿಯರು ಈ ಹಿಂದೆ ಕಾರ್ಯಕರ್ತರ ಸಹಾಯದಿಂದ ಕಟ್ಟಿ ಬೆಳೆಸಿದ ಸಂಸ್ಥೆ ಇದರಲ್ಲಿ ನೈಜ ಹಿಂದುತ್ವ ಗೆದ್ದಿದೆ ಇಲ್ಲಿ ಯಾವುದೇ ಕಾರಣಕ್ಕು ಡೋಂಗಿಗಳಿಗೆ ಸ್ಥಾನವಿಲ್ಲ ಎಂದು ಹೇಳಿದರು . ಈ ಹಿಂದೆ ರಾಧಾಕೃಷ್ಣ ಬೊಳ್ಳುರು ಬಿಜೆಪಿಯಲ್ಲಿ ಇದ್ದು ಡಬಲ್ ಗೇಮ್ ಮಾಡುತ್ತಿದ್ದರು ಈಗ ಅವರು ಕಾಂಗ್ರೆಸ್ ಸೇರಿದ್ದಾರೆ ಅಷ್ಟೇ ಎಂದು ಬೊಳ್ಳುರು ವಿರುದ್ದ ಕಿಡಿಕಾರಿ ಗೆಲುವಿಗೆ ಹಗಲಿರುಳು ಶ್ರಮಿಸಿದ ದೇವ ದರ್ಲಭ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು .
ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಮತನಾಡುತ್ತಾ ಮೋದಿ ಆಡಳಿದ ವೈಖರಿಗೆ ಹಾಗೂ ಕಾರ್ಯಕರ್ತರ ಶ್ರಮದ ಗೆಲುವು ಇಂದು ಆಗಿದೆ ಅಲ್ಲದೆ ಇದು ನಮ್ಮ ಕಾರ್ಯಕರ್ತರ ಒಗ್ಗಟ್ಟಿನ ಫಲವಾಗಿ ಎಲ್ಲ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ ಎಂದು ಹೇಳಿ ಗೆದ್ದ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ , ಹರೀಶ್ ಬೂಡುಪನ್ನೆ , ವಿನಯ ಕುಮಾರ್ ಕಂದಡ್ಕ , ಅಶೋಕ್ ಅಡ್ಕಾರು , ಸುನಿಲ್ ಕೇರ್ಪಳ್ಳ , ಸಂತೋಶ್ ಕುತ್ತಮೊಟ್ಟೆ , ಶಶಿಕಲಾ , ಸತ್ಯವತಿ ಸೇರಿದಂತೆ ನಗರ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಸದಸ್ಯರುಗಳು ಭಾಗವಹಿಸಿದ್ದರು.