ಸುಳ್ಯ 110 ಕಾಮಗಾರಿಯ ಅಭಿವೃದ್ಧಿ ಕಾರ್ಯಗಳ ಸ್ಥಳ ಮತ್ತು ಕಾಮಗಾರಿಯ ಬಗ್ಗೆ ಸುಳ್ಯ ಕಾಂಗ್ರೆಸ್ ನೇತೃತ್ವದ ನಿಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಳ್ಯದ ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ನೇತೃತ್ವದ ಸಮಿತಿಯು ಸುಳ್ಯದಲ್ಲಿ ಇದೀಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಅಲ್ಲಿ ಹಳೆಯದಾಗಿ ಇದ್ದ ಕ್ವಾಟರ್ಸ್ ರೂಮ್ ಗಳನ್ನು ನೆಲಸಮ ಗೊಳಿಸಿ ನೆಲಸಮತಟ್ಟು ಕಾರ್ಯನಡೆಯುತ್ತಿದ್ದು ಸುಮಾರು 7 ಅಡಿಗಳನ್ನು ಮಣ್ಣು ಹಾಕಿ ಸಮತಟ್ಟು ಗೊಳಿಸಬೇಕಾಗಿದ್ದು ಕೂಡಲೇ ಅಧಿಕಾರಿಗಳು ಮತ್ತು ಟೆಂಡರ್ ದಾರರು ಶೀಘ್ರವಾಗಿ ಕೆಲಸ ಮುಗಿಸಬೇಕು ಎಂದು ಹೇಳಿದರು .
ಪವರ್ ಮ್ಯಾನ್ ಗಳ ಕೊರತೆ ನಿವಾರಿಸಲು ಸಚಿವರ ಗಮನಕ್ಕೆ ತಂದು ನೀವಾರಣೆ ಮಾಡಲಾಗುವುದು ಅಲ್ಲದೇ ಮಳೆಯ ಸಂದರ್ಭದಲ್ಲಿ ಸುಳ್ಯದಲ್ಲಿ ವಿಧ್ಯುತ್ ವ್ಯತ್ಯವವಾಗುತ್ತಿದ್ದು ಅವಗಳನ್ನು ನೀವಾರಿಸಲು ಇದೀಗ ಕೇಲವೇ ಕೆಲವು ಪವರ್ ಮ್ಯಾನ್ ಗಳು ಇದ್ದು ಸುಮಾರು 80 ಪವರ್ ಮ್ಯಾನ್ ಗಳು ಬೇಕಾಗಿದ್ದು ಅದನ್ನು ಕೂಡಲೇ ಸಚಿವರ ಗಮನಕ್ಕೆ ತಂದು ಬಗೆಹರಿಸುವ ಭರವಸೆಯನ್ನು ನೀಡಿದರು ಈ ಸಂದರ್ಭದಲ್ಲಿ ಎ ಇ ಹರೀಶ್ ನಾಯ್ಕ್ , ಕಾಂಗ್ರೆಸ್ ಮುಖಂಡರಾದ ಪಿ ಎಸ್ ಗಂಗಾಧರ , ರಾಧಕೃಷ್ಣ ಬೊಳ್ಳುರು , ಧರ್ಮಪಾಲ ಕೊಯಿಂಗಾಜೆ , ಸುಮತಿ ಶಕ್ತಿಮೇಲು , ಎಸ್ ಕೆ ಹನೀಫ್ , ಸೇರಿದಂತೆ ಇತರರು ಉಪಸ್ಥಿತರಿದ್ದರು.