ವಸತಿ ನಿವೇಶನ ನಿರಾಶ್ರಿತರಿಗೆ ಸರಕಾರದಿಂದ ಕೊಡಮಾಡುವ ಆಶ್ರಯ ಯೋಜನೆ ಅಡಿಯಲ್ಲಿ ಸುಳ್ಯ ನಗರಕ್ಕೆ ಸಂಬಂಧಿಸಿ ನಗರ ಆಡಳಿತಕ್ಕೆ ನಿವೇಶನಕ್ಕೆ ಬೇಕಾಗಿ ಅರ್ಜಿ ಸಲ್ಲಿಸಿದ ಬಡ ಫಲಾನುಭವಿಯರೆಗೆ ವರುಷಗಳು 15 ಕಳೆದರೂ ಯಾವುದೇ ನಿವೇಶನ ದೊರಕಿಲ್ಲ ಎಂದು ಆಶ್ರಯ ಯೋಜನೆ ನಿವೇಶನ ಹಕ್ಕು ಹೋರಾಟ ಸಮಿತಿ ಅಧ್ಯಕ್ಷರ ರಶೀದ್ ಜಟ್ಟಿಪ್ಪಳ್ಳ ಹೇಳಿದರು .
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸುಳ್ಯನಗರದಲ್ಲಿ ನಿವೇಶನ ರಹಿತರಿಗೆ ಪ್ರತಿ ವರ್ಷ ನೀಡಬೇಕಾದ ನಿವೇಶನ ನೀಡದೇ ಇದ್ದು ನಿವೇಶನ ರಹಿತರು ಹೋರಾಟ ಸಮಿತಿ ರಚಿಸಿ ಸಮಿತಿ ಮುಖಾಂತರ ನಗರ ಆಡಳಿತ ಮತ್ತು ಸ್ಥಳೀಯ ಜನಪ್ರಗತಿ ನಿಧಿಗಳಿಗೆ ಒತ್ತಡ ಹಾಕುತ್ತಾ ಬಂದರೂ ನಿವೇಶನ ಹಂಚಲು ಫಲಾನುಭವಿಯರನ್ನು ಹಿಂದಕ್ಕೆ ಕಳುಹಿಸಿ ನಿರಾಶೆಗೆ ಒಳಪಡಿಸುತ್ತಿದ್ದರು, ಈ ಪರಿಸ್ಥಿತಿಯಲ್ಲಿ ಹೋರಾಟ ಸಮಿತಿಯು ಸರಕಾರದಿಂದ ವಸತಿ ಯೋಜನೆಯಡಿಯಲ್ಲಿ ಸುಳ್ಯ ನಗರಕ್ಕೆ ಸಂಬಂಧಿಸಿದ ಸರ್ವೆ ನಂಬ್ರ 94/1A1 ಮತ್ತು ಸರ್ವೆ ನಂಬ್ರ 374/2 ಎರಡೂ ಸರಕಾರಿ ನಿವೇಶನಗಳ ಭೂ ದಾಖಲಾತಿಯನ್ನು ಅಧಾರ ಸಹಿತ ತಾಲೂಕು ಕಛೇರಿಗೆ ನೀಡಿ ಆಗಿನ ತಹಶೀಲ್ದಾರರಾದ ಅನಿತಾಲಕ್ಷ್ಮಿಯವರು ಪರಿಶೀಲಿಸಿ ಸರ್ವೆಯರ್ ಆದ ಜಗದೀಶ್ ಅವರಲ್ಲಿ ಸರ್ವೆಯನ್ನು ಮಾಡಿಸಿ, ಕಂದಾಯ ಇಲಾಖೆಯ ಕೆಲಸವನ್ನು ಮುಗಿಸಿ ನಗರ ಪಂಚಾಯತ್ ಆಡಳಿತಕ್ಕೆ ಮುಂದಿನ ಕ್ರಮ ಕೈಗೊಳ್ಳಲು ಆದೇಶಿಸಿರುತ್ತಾರೆ. ಸಂಬಂಧಿಸಿ ಫಲಾನುಭವಿಯರು ಅನೇಕ ಸಲ ನಗರ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಸುಳ್ಯ ನಗರ ಭಾಗದಲ್ಲಿ ಸರಕಾರಿ ಜಾಗ ಇಲ್ಲ ಎಂಬ ಸಮಜಾಯಿಷಿ ಕೊಡುತ್ತಾ ಸತಾಯಿಸಿ ಅಲ್ಲಿನ ಮುಖ್ಯಾಧಿಕಾರಿಗಳನ್ನು ವಿಚಾರಿಸಿದಾಗ ಕಾರ್ಯ ಪ್ರಗತಿಯಲ್ಲಿದ್ದು, ಮುಂದೆ ಎರಡು ಸರ್ವೆ ನಂಬ್ರಗಳ ಸ್ಥಳಗಳನ್ನು ಸಮತಟ್ಟು ಮಾಡಲು ಈಗಾಗಲೇ ಟೆಂಡರ್ ಕರೆದಿದ್ದು, ಒಂದು ವಾರದೊಳಗೆ ಸಮತಟ್ಟಿನ ಕೆಲಸ ಆರಂಭಿಸಿ, ಅಲ್ಲಿ ಎಷ್ಟು ನಿವೇಶನ ಕೊಡಬಹುದು ಎಂಬ ನಿಟ್ಟಿನಲ್ಲಿ ನಾವು ಕಾರ್ಯ ಯೋಜನೆ ಮಾಡುತ್ತಿದ್ದೇವೆ. ಆದರೂ ನೂತನ ಶಾಸಕರ ಉಪಸ್ಥಿತಿಯಲ್ಲಿ ಆಶ್ರಯ ಸಮಿತಿಯನ್ನು ರಚಿಸಿ, ಹಂಚುವ ವಿಧಾನವನ್ನು ತಿಳಿಸಿರುತ್ತಾರೆ. ಆದ್ದರಿಂದ ಮಾನ್ಯ ಶಾಸಕರು ಆದಷ್ಟು ಬೇಗನೆ ಆಶ್ರಯ ಸಮಿತಿಯನ್ನು ರಚಿಸಲು ಸರ್ಕಾರವನ್ನು ಒತ್ತಾಯಿಸಿ, ಸುಮಾರು 20 ವರ್ಷದಿಂದ ಮೇಲ್ಪಟ್ಟು ನಿವೇಶನಕ್ಕೆ ಬೇಕಾಗಿ 455 ಅರ್ಜಿಗಳು ಕೆಲವು ವರ್ಷಗಳಿಂದ ವಿಲೇವಾರಿಯಾಗದೇ ಬಾಕಿ ಉಳಿದಿದ್ದು, ಇದನ್ನು ಕಾಯುತ್ತಾ ಬಾಡಿಗೆ ಮನೆಯಲ್ಲಿ ವಾಸಿಸುವ ಆನೇಕ ಫಲಾನುಭವಿಗಳಿಗೆ ಆದಷ್ಟು ಬೇಗನೆ ನಿವೇಶನ ದೊರಕಿಸುವ ನಿಟ್ಟಿನಲ್ಲಿ ಮಾನ್ಯ ಶಾಸಕರಿಗೂ ಮತ್ತು ಸರಕಾರಕ್ಕೂ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು .
ನಿವೇಶನ ರಹಿತಾ ಸಮಿತಿಯ ಸದಸ್ಯೆ ಕವಿತಾ ಆಶೋಕ್ ಜಟ್ಟಿಪ್ಪಳ್ಳ ಮಾತನಾಡುತ್ತಾ ನಾವು ಬಾಡಿಗೆ ಮನೆಯಲ್ಲಿ ಇದ್ದೆವೆ ನಮ್ಮ ಕಷ್ಟ ಕೇಳುವವರು ಯಾರು ಇಲ್ಲಾ ನಮಿಗೆ ಬಾಡಿಗೆ ನೀಡಲು ಮಾತ್ರ ದುಡಿಯುವ ಅನಿವಾರ್ಯ ಎದುರಾಗಿದೆ ನಮಗೆ ಇನ್ನಾದರು ನಗರ ಪಂಚಾಯತ್ ಸೂಚಿಸಿದ ಸ್ಥಳದಲ್ಲಿ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪದ್ಮನಾಭ ನಾಯಕ್ ಜಟ್ಟಿಪ್ಪಳ್ಳ , ಸುಮಿತ್ರ ಶಿವಶಂಕರ್ ಜಟ್ಟಿಪ್ಪಳ್ಳ , ಮಮತಾ ಪೂಜಾರಿ , ರಾಜು ಜೂನಿಯರ್ ಕಾಲೇಜ್ ಉಪಸ್ಥಿತರಿದ್ದರು.
- Thursday
- November 21st, 2024