ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮ ಪಂಚಾಯತ್ ವತಿಯಿಂದ ಕೇಂದ್ರ ಸರಕಾರದ ವಿಕಸಿತ ಭಾರತ್ ರಥಯಾತ್ರೆಯ ಸಭಾ ಕಾರ್ಯಕ್ರಮವು ಅಜ್ಜಾವರ ಅಂಬೇಡ್ಕರ್ ಭವನ ಮೇನಾಲದಲ್ಲಿ ನಡೆಯಿತು .
ಮಾಜಿ ಶಾಸಕರಾದ ನಂದೀಶ್ ರೆಡ್ಡಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ 2047ರ ಸಂದರ್ಭದಲ್ಲಿ ದೇಶವು ಅಭಿವೃದ್ಧಿ ಹೊಂದಿದ ವಿಶ್ವಕ್ಕೆ ಹಿರಿಯ ಅಣ್ಣನಾಗಿ ಬೆಳೆದ ರಾಷ್ಟ್ರವಾಗಬೇಕು ಎಂದರು ಅಲ್ಲದೇ ಆರೋಗ್ಯ ಇಲಾಖೆಯ ಅಭಿವೃದ್ಧಿ ಕುರಿತಾಗಿ ಮಾಹಿತಿ , ಅಟಲ್ ಪಿಂಚಣಿ ಸೇರಿದಂತೆ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು ಕನಿಷ್ಠ ಒಂದು ಗ್ರಾಮದಲ್ಲಿ 500ರಷ್ಟು ಜನತೆ ವಿಕಸಿತ ಭಾರತದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು . ಅಲ್ಲದೇ ಇದೇ ಕಾರ್ಯಕ್ರಮದ ಸ್ಥಳದಲ್ಲಿಯೇ ನೇರವಾಗಿ ಅಪ್ಲಿಕೇಷನ್ ನಲ್ಲಿ ಹಾಕಿದ್ದಲ್ಲಿ ಹತ್ತು ದಿನಗಳಲ್ಲಿ ಐದು ದಿನಗಳ ತರಬೇತಿ ಪಡೆದ ಬಳಿಕ ಸಾಲ ಸೌಲಭ್ಯ ಸಿಗಲಿದೆ ಎಂದರು .
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡುತ್ತಾ ಡಿಜಿಟಲ್ ಇಂಡಿಯಾ ಕುರಿತಾಗಿ ಹೇಳಿದರು , ಪ್ರಧಾನಿ ಮೋದಿಯು ತನ್ನ ತಾಯಿಯ ಕಷ್ಟವನ್ನು ಕಂಡು ಉಜ್ವಲ ಯೋಜನೆಯನ್ನು ಇನ್ನು ಉಳಿದ ತಾಯಂದಿರು ಎಂದು ಸೌದೆ ಒಲೆಯ ಬಳಿಯಲ್ಲಿ ಕುಳಿತು ಕಣ್ಣೀರು ಹರಿಸುವುದು ಬೇಡ ಎಂಬ ನೆಲೆಯಲ್ಲಿ ಜಾರಿಗೆ ತಂದರು ಅದೇ ರೀತಿಯಲ್ಲಿ ಪ್ರಧಾನಿ ಮೋದಿ ಮಣ್ಣಿನಲ್ಲಿ , ಹೆಣ್ಣಿನಲ್ಲಿ ತಾಯಿಯನ್ನು ಕಂಡು ಮಹಿಳಾ ಸಭಾಲೀಕರಣ ಮಾಡುತ್ತಿದ್ದಾರೆ ಎಂದರು ಅಲ್ಲದೇ ಪ್ರತಿ ಗ್ರಾಮ ಪಂಚಾಯತ್ ಇದನ್ನು ಗಂಭೀರವಾಗಿ ಪರಿಗಣಿಸಿ ಜನತೆಗೆ ಮಾಹಿತಿ ಮತ್ತು ಇದರ ಸದುಪಯೋಗಳ ಕುರಿತಾಗಿ ಮಾಹಿತಿ ನೀಡಿದ್ದಲ್ಲಿ ಕೇದ್ರದ ಯೋಜನೆ ನೇರವಾಗಿ ನಿಮ್ಮ ಖಾತೆಗೆ ಜಮೆ ಆಗಲಿದೆ ಅಲ್ಲದೆ ದಲ್ಲಾಳಿಗಳ ಹಾವಳಿಗಳನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು. ಅಲ್ಲದೇ ಈ ಯೋಜನೆಯನ್ನು ಗ್ರಾಮ ಪಂಚಾಯತ್ ಪರಿಣಾಮಕಾರಿಯಾಗಿ ಬ್ಯಾಂಕ್ ಜೊತೆಗೆ ಕೈ ಜೋಡಿಸಿ ಕೆಲಸ ಮಾಡಬೇಕು ಸದಸ್ಯರುಗಳು ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು . ಸಭಾ ವೇದಿಕೆಯಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕ , ಹರೀಶ್ ಕಂಜಿಪಿಲಿ , ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತ್ಯವತಿ ಬಸವನಪಾದೆ , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜಯಮಾಲ ಎ ಕೆ , ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಯೂನಿಯನ್ ಬ್ಯಾಂಕ್ ಮೇನೆಜರ್ ಅಜಯ್ ಕುಮಾರ್ , ಗ್ರಾಮ ಪಂಚಾಯತ್ ಸದಸ್ಯರುಗಳಾದ ರವಿರಾಜ , ದಿವ್ಯ, ಗೀತಾ ಉಪಸ್ಥಿತರಿದ್ದರು . ವಿನಯ್ ಕುಮಾರ್ ಕಂದಡ್ಕ ಮತ್ತು ಅಜಯ್ ಕುಮಾರ್ ಮಾಹಿತಿ ನೀಡಿದರು . ಕಾರ್ಯಕ್ರಮದಲ್ಲಿ ಕೃಷಿ , ಕ್ರೀಡೆ , ದೇಶಸೇವೆ , ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು . ಕಾರ್ಯಕ್ರಮವನ್ನು ಬಾಲಕೃಷ್ಣ ಮೇನಾಲ ನಿರೂಪಿಸಿದರು.