Ad Widget

ಸುಳ್ಯದ ಮುಖ್ಯ ರಸ್ತೆಯಲ್ಲಿ ಪೊಲೀಸ್ ಅಪರಾಧ ತಡೆ ಮಾಸಾಚರಣೆ ಹಿನ್ನಲೆ ಜಾಗೃತಿ ಜಾಥಾ , ವಿಧ್ಯಾರ್ಥಿಗಳು ಸಂಘ ಸಂಸ್ಥೆಗಳು ಭಾಗಿ

. . . . . . .

ಸುಳ್ಯ ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಜಾಗೃತಿ ಜಾಥವು ಸುಳ್ಯದಲ್ಲಿ ನಡೆಯಿತು. ಸುಳ್ಯ ಜ್ಯೋತಿ ವೃತ್ತದಿಂದ ಗಾಂಧಿನಗರ ತನಕ ಜಾಥಾ ನಡೆದು ಅಪರಾಧ ತಡೆಗೆ ಜಾಗೃತಿ ಮೂಡಿಸಲಾಯಿತು. ಜ್ಯೋತಿ ವೃತ್ತದಿಂದ ಆರಂಭಗೊಂಡ ಜಾಗೃತಿ ಜಾಥಾಕ್ಕೆ ಸುಳ್ಯ ವೃತ್ತ ನಿರೀಕ್ಷಕರಾದ ಮೋಹನ್ ಕೊಠಾರಿ ಚಾಲನೆ ನೀಡಿದರು.

ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಈರಯ್ಯ ದೂಂತೂರು, ಉಪನಿರೀಕ್ಷಕರಾದ ಸರಸ್ವತಿ, ಸುಳ್ಯ ಕೈಗಾರಿಕೆ ಮತ್ತು ವಾಣೀಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ‌ ರೈ, ಕಾರ್ಯದರ್ಶಿ ಡಿ.ಎಸ್.ಗಿರೀಶ್, ದ.ಕ.ಜಿಲ್ಲಾ ಮೀಫ್ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ಗಿರೀಶ್ ನಾರ್ಕೋಡು, ಪ್ರಮುಖರಾದ ಸಿಎ ಗಣೇಶ್ ಭಟ್ ಪಿ, ಅಬ್ದುಲ್ ಹಮೀದ್ ಜನತಾ,ಗಿರಿಜಾ ಶಂಕರ‌‌ ತುದಿಯಡ್ಕ, ಮುಕು‌ಂದ ನಾರ್ಕೋಡು, ಶಿವಪ್ರಕಾಶ್, ರಿಕ್ಷಾ ಚಾಲಕ‌‌ ಮಾಲಕ ಸಂಘದ ಪದಾಧಿಕಾರಿಗಳಾದ ರಾಧಾಕೃಷ್ಣ ಬೈತ್ತಡ್ಕ, ವಿಜಯಕುಮಾರ್ ಉಬರಡ್ಕ , ಶಾಲಾ ಕಾಲೇಜು ವಿಧ್ಯಾರ್ಥಿಗಳು ಜಾಥದಲ್ಲಿ ಭಾಗವಹಿಸಿದ್ದರು ವಿಧ್ಯಾರ್ಥಿಗಳಿಗೆ ಠಾಣೆಯ ಬಳಿಯಲ್ಲಿ ಜನಸ್ನೇಹಿ ಪೋಲೀಸ್ ಕುರಿತಾಗಿ ಮಾಹಿತಿ ನೀಡಿದರು ಬಳಿಕ ಲಘು ಉಪಾಹರವನ್ನು ನೀಡಲಾಯಿತು.

Related Posts

error: Content is protected !!