ಪಂಜದಲ್ಲೊಂದು ವಿನೂತನ ಕಾರ್ಯಕ್ರಮ “ಬೇಸಾಯದ ಪಾಠ ಕೆಸರಿನ ಆಟ.” ಸುಬ್ರಹ್ಮಣ್ಯ, ಡಿ.28: ಇಂದು ಗದ್ದೆ ಬೇಸಾಯ ನಶಿಸಿ ಹೋಗುತ್ತಿರುವುದರಿಂದ ಮಕ್ಕಳಿಗೆ ಬೇಸಾಯದ ಬಗ್ಗೆ ಅರಿವು ಮೂಡಿಸುವುದು ಹಾಗೂ ಕೆಸರು ಗದ್ದೆ ಆಟದ ಮಹತ್ವವನ್ನು ತಿಳಿಸುವುದು ಅತಿ ಅಗತ್ಯವಾಗಿದೆ. ಆ ಮೂಲಕ ಗದ್ದೆ ಬೇಸಾಯ, ನೇಜಿ ನಡುವುದು ,ಕೆಸರಿನ ಆಟ, ಮುಂತಾದವುಗಳನ್ನು ಸ್ವತಃ ಮಕ್ಕಳನ್ನು ಗದ್ದೆಗೆ ಇಳಿಸಿ ತೋರಿಸುವುದು ಒಳ್ಳೆಯದು ಎಂದು ಪಂಜ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ತೀರ್ಥಾನಂದ ಕೊಡಿಂಕೇರಿ ಅವರು ನುಡಿದರು. ಅವರು ಡಿಸೆಂಬರ್ 28 ಗುರುವಾರ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ “ಬೇಸಾಯದ ಪಾಠ ,ಕೆಸರಿನ ಆಟ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸೋಮಶೇಖರ ನೇರಳ ವಹಿಸಿದ್ದರು .ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯಲಕ್ಷ್ಮಿ ಜಳಕದ ಹೊಳೆ, ಪಂಜ ಪಂಚಶ್ರೀ ಜೇಸಿ ರಜತ ವರ್ಷದ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಪಂಚ ಶ್ರೀ ಜೇಸಿ ಸ್ಥಾಪಕ ಅಧ್ಯಕ್ಷ ದೇವಿ ಪ್ರಸಾದ್ ಜಾಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಲೀಲಾ ಕುಮಾರಿ .ಟಿ. ಸ್ವಾಗತಿಸಿದರು. ಸಹ ಶಿಕ್ಷಕ ಹರೀಶಕುಮಾರ್ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಭುವನೇಶ್ವರಿ ಕಂಬಳ ವಂದಿಸಿದರು. ಶಾಲೆಯ ಎಲ್ಲಾ ಮಕ್ಕಳು ಗದ್ದೆಯಲ್ಲಿ ವಿವಿಧ ಆಟಗಳನ್ನು ಆಡಿ ಸಂಭ್ರಮಿಸಿದರು. ಶಾಲಾ ಶಿಕ್ಷಕರಂದದವರು, ಸಹಕರಿಸಿದರು .ಪೋಷಕರು, ವಿದ್ಯಾಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.