ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿನೇ ದಿನೇ ಕಸ ತ್ಯಾಜ್ಯ ಎಸೆದು ಬಿಸಾಡುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ. ಆಲೆಟ್ಟಿ ಗ್ರಾಮದ ನಾಗಪಟ್ಟನ ಸೇತುವೆ ಬಳಿಯಲ್ಲಿ ಬಹಳಷ್ಟು ಕಸವನ್ನು ರಾತ್ರೋ ರಾತ್ರಿ ಸುರಿಯಲಾಗಿತ್ತು ಅದನ್ನು ನಾಗರೀಕರ ಒತ್ತಡದ ಮೇರೆಗೆ ಹಾಕಿದವರಿಂದಲೇ ತೆರವು ಮಾಡಲಾಗಿತ್ತು ಇತ್ತ ಇದೀಗ ಮತ್ತೆ ಆಲೆಟ್ಟಿ ಗ್ರಾಮದ 3 ನೇ ವಾರ್ಡಿನ ಕುಡೆಕಲ್ಲು ಸಾರ್ವಜನಿಕ ಪಿ ಡಬ್ಲ್ಯೂ ಡಿ ರಸ್ತೆ ಬದಿಯಲ್ಲಿ ಕಸ ಬಿಸಾಡಿರುವುದರಿಂದ ಅ ಭಾಗದ ಜನರಿಗೆ ಗಬ್ಬು ವಾಸನೆಯಿಂದ ಸಮಸ್ಯೆಯಾಗುತ್ತದೆ ಮತ್ತು ಕೂಡಲೇ ಆಲೆಟ್ಟಿ ಗ್ರಾಮದ ಪಂಚಾಯತ್ ಅದ್ಯಕ್ಷರು, ಉಪಾಧ್ಯಕ್ಷರು, ವಾರ್ಡಿನ ಸದಸ್ಯರು, ಪಿಡಿಒರವರು ಸ್ಥಳ ಪರಿಶೀಲನೆ ನಡೆಸಿ ಕಸ ವಿಲೇವಾರಿ ಮಾಡಿಸುವಂತೆ ದಿನಾಂಕ 09/11/2023 ರಂದು ಅ ಪರಿಸರದವರು ಆಲೆಟ್ಟಿ ಗ್ರಾಮ ಪಂಚಾಯತಿಗೆ ದೂರನ್ನು ನೀಡಿದ್ದರು. ಇದುವರೆಗೆ ಕೂಡ ಆಲೆಟ್ಟಿ ಗ್ರಾಮ ಪಂಚಾಯತಿನ ಅದ್ಯಕ್ಷರು/ಉಪಾಧ್ಯಕ್ಷರು/ವಾರ್ಡಿನ ಸದಸ್ಯರು/ಪಿಡಿಒರವರು ಇಂದಿನವರೆಗೆ ಕಸ ತ್ಯಾಜ್ಯ ಎಸೆದ ಸ್ಥಳಕ್ಕೆ ಬೇಟಿ ನೀಡಿರುವುದಿಲ್ಲ ಎಂದು ತಮ್ಮ ನೋವನ್ನು ಅಮರ ಸುದ್ದಿಯೊಂದಿಗೆ ಹೇಳಿಕೊಂಡಿತ್ತಾರೆ.
ಈ ರೀತಿಯಾಗಿ ಸಾರ್ವಜನಿಕ ಸ್ಥಳದಲ್ಲಿ ಕಸ ತ್ಯಾಜ್ಯ ಎಸೆದು ಪರಿಸರ ಹಾಳು ಮಾಡುತ್ತಿರುವ ಮತ್ತು ನೇರವಾಗಿ ದೂರನ್ನು ಲಿಖಿತವಾಗಿ ನೀಡಿದ್ದರೂ ಪ್ರಭಾವಿ ರಾಜಕೀಯ ವ್ಯಕ್ತಿಗಳ ಒತ್ತಡದಿಂದ ಸಂಬಂಧಪಟ್ಟವರು ಬೇಟಿ ನೀಡುತ್ತಿಲ್ಲ ಎಂದು ಅ ಭಾಗದ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ನಮಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ ಎಂದು ಆಡಿಕೊಳ್ಳುತ್ತಿದ್ದು ಇದೀಗ ಎಲ್ಲೆಡೆ ವೈರಲ್ ಫಿವರ್ ಗಳು ಹೆಚ್ಚಾಗುತ್ತಿದ್ದು ಆರೋಗ್ಯದ ಬಗ್ಗೆ ಸರಕಾರಗಳು ಮತ್ತು ಆರೋಗ್ಯ ಇಲಾಖೆ ಕಾಳಜಿವಹಿಸುತ್ತಿರುವಾಗ ಇಲ್ಲಿನ ಆಡಳಿ ವರ್ಗವು ಮಾತ್ರ ತ್ಯಾಜ್ಯ ಎಸೆಯುತ್ತಿದ್ದರು ಕೂಡ ಗಾಢ ನಿದ್ದೆಯಲ್ಲಿದ್ದು ಇನ್ನಾದರು ಗ್ರಾಮದ ಹಿತವನ್ನು ಕಾಪಾಡುವ ಸಲುವಾಗಿ ಅಧ್ಯಕ್ಷರು ಮತ್ತು ಆಡಳಿತದ ವರ್ಗವನ್ನು ಈ ಪ್ರಕರಣದ ಕುರಿತಂತೆ ಪ್ರತಿಕ್ರಿಯೆ ಪಡೆದುಕೊಳ್ಳಲು ದೂರವಾಣಿ ಮುಖೇನ ಸಂಪರ್ಕಿಸಿದಾಗ ಸಂಪರ್ಕಕ್ಕೆ ಲಭ್ಯವಾಗಿಲ್ಲಾ . ಈ ವರದಿಯ ಬಳಿಕವಾದರು ಆಡಳಿತ ಮಂಡಳಿ ಮತ್ತು ಆಡಳಿತಾಧಿಕಾರಿಗಳು ಎಚ್ಚೆತ್ತು ತ್ಯಾಜ್ಯ ಎಸೆಯುವವರ ವಿರುಧ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡ ಬೇಕಿದೆ.