ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವು ಡಿ.26 ರಂದು ಸಂಘದ ಕಛೇರಿಯಲ್ಲಿ ನಡೆಯಿತು. ನಿವೃತ್ತ ಉಪನ್ಯಾಸಕರಾದ ಕೇಶವ ಭಟ್ ಅವರು ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಇಲಾಖೆ ಪುತ್ತೂರು ಇಲ್ಲಿನ ಅಸಿಸ್ಟೆಂಟ್ ರಿಜಿಸ್ಟರ್ ಶ್ರೀಮತಿ ತ್ರಿವೇಣಿ ರಾವ್, ನಿವೃತ್ತ ಪ್ರಾಂಶುಪಾಲರಾದ ಅಶೋಕ್ ಮೂಲೆಮಜಲು, ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಶಿವಾಲ, ಕೆ.ಎಸ್.ಎಸ್.ಟಿ ಮಾಸ್ಟರ್ ಪ್ಲಾನ್ ಸಮಿತಿಯ ಮಾಜಿ ಸದಸ್ಯರಾದ ಶಿವರಾಮ ರೈ ಹಾಗೂ ಕಿಶೋರ್ ಕುಮಾರ್ ಕೂಜುಗೋಡು, ಕೃಷಿಕರಾದ ಉಮೇಶ್ ಕಜ್ಜೋಡಿ, ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಸುರೇಶ್ ಉಜಿರಡ್ಕ, ಸುಬ್ರಹ್ಮಣ್ಯ ರಾವ್, ಶ್ರೀಮತಿ ಭಾರತಿ ದಿನೇಶ್, ಶ್ರೀಮತಿ ಆಶಾ ಕುಮಾರಿ, ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ
ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಕಾಶ್.ಕೆ.ಎಸ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದು ಕೃಷಿಗೆ ಸಂಬಂಧಿಸಿದ ಮಾಹಿತಿಗಳಾದ ಕೃಷಿ ಕೆಲಸಕ್ಕಾಗಿ ವಿಶೇಷ ದಿನಗಳು, ಸಾಲ ತೀರಿಸಲು ಮತ್ತು ಬಂಗಾರ ಖರೀದಿಸಲು ವಿಶೇಷ ಮುಹೂರ್ತದ ದಿನಾಂಕಗಳು, ಜೀವಾಮೃತ, ಗೋಕೃಪಾಮೃತ, ವೇಸ್ಟ್ ಡೀ ಕಂಪೋಸರ್, ಸತ್ತ ಪ್ರಾಣಿಗಳ ಗೊಬ್ಬರ ತಯಾರಿಸುವ ಬಗ್ಗೆ ಮಾಹಿತಿಗಳು ಸೇರಿದಂತೆ ಹಲವು ಮಾಹಿತಿಗಳನ್ನೊಳಗೊಂಡ ಕ್ಯಾಲೆಂಡರ್ ಗೆ ಎಲ್ಲರೂ ಶುಭ ಹಾರೈಸಿದರು.
ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಸ್ವಾಗತಿಸಿ, ಉಪಾಧ್ಯಕ್ಷರಾದ ಮಾಧವ.ಡಿ ಧನ್ಯವಾದ ಸಮರ್ಪಿಸಿದರು.