
ಹನುಮ ರಥ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ರಾಮ ಮಂದಿರದ ನಿರ್ಮಾಣದ ಹಿಂದಿರುವ ಹೋರಾಟದ ಇತಿಹಾಸವನ್ನು ಪ್ರಚುರಪಡಿಸುವ ಹಿನ್ನೆಲೆಯಲ್ಲಿ ನಮೋ ಬ್ರಿಗೇಡ್ ನೇತೃತ್ವದಲ್ಲಿ ಚಿಕ್ಕಮಗಳೂರಿನಿಂದ ಹೊರಟಿರುವ ಹನುಮ ರಥ ವನ್ನು ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಮಾಲಾರ್ಪಣೆಗೈದು ಸ್ವಾಗತಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹರೀಶ್ ಕಂಜಿಪಿಲಿ, ಶುಭೋದ್ ಶೆಟ್ಟಿ ಮೇನಾಲ, ಮಹೇಶ್ ಕುಮಾರ್ ಮೇನಾಲ, ಲೋಕೇಶ್ ಕೆರೆಮೂಲೆ, ವಿನಯ್ ಕುಮಾರ್ ಕಂದಡ್ಕ, ವಸಂತ ನಡುಬೈಲು, ಚನಿಯ ಕಲ್ತಡ್ಕ, ಅಶೋಕ್ ಅಡ್ಕರ್, ಚಿದಾನಂದ ಕೊಡಿಯಾಲಬೈಲು, ಗಿರೀಶ್ ಕಲ್ಲಗದ್ದೆ ಹಾಗೂ ಹಿಂದೂ ಬಂಧುಗಳು, ಕಾರ್ಯಕರ್ತರು ಪರಿವಾರ ಸಂಘಟನೆಯ ಜವಾಬ್ದಾರಿಯ ಕಾರ್ಯಕರ್ತರು ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.