ಸುಳ್ಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಗಳಲ್ಲಿ ಒಂದಾದ ಸುಳ್ಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿ ಮಂಡಳಿಗೆ ನಡೆಯುವ ಚುನಾವಣಾ ಕಣ ಭಾರಿ ರಂಗೇರಿದ್ದು ಕಳೆದ ಕೆಳ ವರುಷಗಳಿಂದ ಅವಿರೋಧ ಮತ್ತು ಕೆಲ ಸ್ಥಾನವನ್ನು ಚುನಾವಣೆಯ ಮೂಲಕ ಆಡಳಿತ ಮಂಡಳಿಯ 13 ಸ್ಥಾನಗಳನ್ನು ಸಹಕಾರಿ ಭಾರತಿ ತನ್ನದಾಗಿಸಿಕೊಳ್ಳುತ್ತಿದ್ದವು ಆದರೆ ಈ ಭಾರಿ ಕಾಂಗ್ರೆಸ್ ಮತ್ತು ಬಿಜೆಪಿಯ ರೆಬೆಲ್ ನಾಯಕರು ಸೇರಿಕೊಂಡು ಸಹಕಾರಿ ರಂಗ ಸ್ಥಾಪಿಸಿ ಅದರ ಮುಖೇನ ಚುನಾವಣಾ ಕಣಕ್ಕೆ ಧುಮುಕಿದ್ದು ಇದೀಗ ಚುನಾವಣೆ ಕದನ ಕಣ ಭಾರಿ ರಂಗೇರಿದೆ . ಇಂದು ನಾಮಪತ್ರ ಹಿಂಪಡೆದುಕೊಳ್ಳಲು ಕೊನೆಯ ದಿನವಾಗಿದ್ದು ಇಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಎಲ್ಲರು ಚುನಾವಣಾ ಕಣದಿಂದ ಹಿಂದೆ ಸರಿದ ಪರಿಣಾಮ ಇದೀಗೆ ಸಿ ಎ ಬ್ಯಾಂಕ್ ಚುನಾವಣೆಯು ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ .
ಅಭ್ಯರ್ಥಿಗಳ ವಿವರ ಈ ಕೆಳಗಿನಂತಿವೆ . ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ 6 ಸ್ಥಾನಗಳಿಗೆ 12 ಅಭ್ಯರ್ಥಿಗಳಿದ್ದು ಅವರ ಹೆಸರು ಈ ಕೆಳಗಿನಂತಿವೆ ಕರುಣಾಕರ ಎ.ಯಸ್, ಪ್ರಭೋದ್ ಶೆಟ್ಟಿ ಎಂ, ರವೀಶ ಎಂ, ರಾಮಚಂದ್ರ ಎನ್.ಎ, ರಾಮಚಂದ್ರ ಪಿ, ರಾಹುಲ್ ಎ.ಕೆ, ವಾಸುದೇವ ನಾಯಕ್ ಪಿ, ವಿಕ್ರಂ ಎ.ವಿ, ವಿಶ್ವನಾಥ ಪಿ.ಎಸ್, ವೆಂಕಟ್ರಮಣ ಎಂ, ಶಶಿಧರ ಪಿ.ಆರ್, ಶಿವರಾಮ ಕೆ.
ಸಾಲಗಾರ ಕ್ಷೇತ್ರ 2 ಮಹಿಳಾ ಮೀಸಲು ಸ್ಥಾನಕ್ಕೆ 4 ಮಂದಿ ಕಣದಲ್ಲಿದ್ದು ಈ ಅಭ್ಯರ್ಥಿಗಳ ವಿವರ ಈ ಕೆಳಗಿನಂತಿವೆ: ಜಯಂತಿ ಕೆ.ಜಿ, ನವ್ಯ ಎ.ಸಿ, ಲೀಲಾ ಮನಮೋಹನ್, ಹರಿಣಾಕ್ಷಿ ಬಿ. ಇಲ್ಲಿ ಓರ್ವ ಮತದಾರರನಿಗೆ ಎರಡು ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ
ಸಾಲಗಾರರ ಕ್ಷೇತ್ರ ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು 1 ಸ್ಥಾನಕ್ಕೆ ಬಾಲಗೋಪಾಲ ಎಸ್, ವಿಜಯಕುಮಾರ್ ಪಡ್ಪು ನೇರ ಹಣಾಹಣಿ ನಡೆಯಲಿದೆ .
ಸಾಲಗಾರ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಸ್ಥಾನ: ಕೇಶವ ಸಿ.ಎ, ಬಾಬು ಮುಗೇರ ಪಿ ಹಾಗೆಯೇ
ಸಾಲಗಾರಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು ಸ್ಥಾನ ಚಂದ್ರಶೇಖರ ಡಿ.ಕೆ, ವಿಶ್ವನಾಥರ ಮಧ್ಯೆ ನೇರಾ ಹಣಾಹಣಿ ನಡೆಯಲಿದೆ .
ಸಾಲಗಾರರಲ್ಲದ 1 ಕ್ಷೇತ್ರಕ್ಕೆ ಚಂದ್ರಶೇಖರರ ವಿರುದ್ಧ ಲತೀಶ್ ಕುಮಾರ್ ಕೆ.ಪಿ ನೇರ ಸ್ಪರ್ಧೆ ಎರ್ಪಟ್ಟಿದ್ದು ಕದಕಣ ಇದೀಗ ರಂಗೇರಿದೆ .
ಚುನಾವಣಾ ದಿನಾಂಕ 31-12-2023 ಸಾಲಗಾರರ ಕ್ಷೇತ್ರದಲ್ಲಿ ಓರ್ವ ಮತದಾರನಿಗೆ 12 ಮತಗಳು ಚಲಾಯಿಸುವ ಅವಕಾಶ ಕಲ್ಪಿಸಲಾಗಿದೆ . ಸಾಲಗಾರರಲ್ಲದ ಕ್ಷೇತ್ರದಲ್ಲಿ ಓರ್ವನಿಗೆ ಒಂದೇ ಮತ ಚಲಾಯಿಸಲು ಅವಕಾಶವಿದೆ .
ಬ್ಯಾಲೆಟ್ ಪೇಪರ್ ಗಳು ಈ ರೀತಿಯಲ್ಲಿ ಇರಲಿದೆ
ಸಾಲಗಾರ ಸಾಮನ್ಯ 12 ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆ ಇದರಲ್ಲಿ ಓರ್ವ ಮತದಾರನಿಗೆ 6 ಮತಗಳನ್ನು ಚಲಾಯಿಸಲು ಅವಕಾಶ ಇರಲಿದೆ.
ಮಹಿಳಾ ಮೀಸಲು ಸ್ಥಾನದಲ್ಲಿ 4 ಅಭ್ಯರ್ಥಿಗಳು ಕಣದಲ್ಲಿದ್ದು ನಾಲ್ಕು ಅಭ್ಯರ್ಥಿಗಳ ಹೆಸರು ಚಿಹ್ನೆ ಇರಲಿದ್ದು ಓರ್ವ ಮತದಾರನಿಗೆ 2 ಮತಗಳ ಚಲಾವಣೆಗೆ ಅವಕಾಶ
ಮೀಸಲು ಸ್ಥಾನಗಳ ಪೈಕಿ ಎಲ್ಲಾ ಬ್ಯಾಲೆಟ್ ಪೇಪರ್ ಗಳು ಪ್ರತ್ಯೇಕವಾಗಿ ಇರಲಿದ್ದು ಹಿಂದುಳಿದ ವರ್ಗ ಎ , ಹಿಂದುಳಿದ ವರ್ಗ ಬಿ , ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಸಾಲಗಾರರಲ್ಲದ ಕ್ಷೇತ್ರದಲ್ಲಿಯು ನೇರಾ ಹಣಾಹಣಿ ಇದ್ದು ಇವುಗಳಲ್ಲಿ ಓರ್ವ ಮತದಾರನಿಗೆ ಒಂದೊಂದು ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಅಲ್ಲದೇ ಚುನಾವಣೆ ಮುಗಿದ ಬಳಿಕ ಅದೇ ದಿನ ಮತೆಣಿಕೆ ನಡೆಯಲಿದೆ ಎಂದು ಎಂದು ಚುನಾವಣಾ ಅಧಿಕಾರಿ ಶಿವಲಿಂಗಯ್ಯ ಎಂ ಮತ್ತು ಮುಖ್ಯ ಕಾರ್ಯನಿರ್ವಾನ ಅಧಿಕಾರಿಗಳಾದ ಸುದರ್ಶನ್ ತಿಳಿಸಿದ್ದಾರೆ .