
ಐವರ್ನಾಡಿನ ಪ್ರಗತಿಪರ ಕೃಷಿಕರಾದ ಸಿ.ಕೆ.ನವೀನ್ ಜಾತುಬಾಯಿ ಅವರಿಗೆ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯ ಸಂದರ್ಭದಲ್ಲಿ ಸಾಧಕ ರೈತ ಪುರಸ್ಕಾರ ಮಾಡಿ ಗೌರವಿಸಲಾಯಿತು.
ಈ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಟಿ.ಜೆ. ರಮೇಶರವರು ಆಯೋಜಿಸಿದ್ದು, ಕೆ.ವಿ.ಕೆ.ಯ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಕುಮಾರ್ ಅಧ್ಯಕ್ಷತೆಯನ್ನು ವಹಿಸಿ ದ್ದರು. ಡಾ. ಕೇದಾರನಾಥ್ ಮತ್ತು ಕೆವಿಕೆಯ ವಿಜ್ಞಾನಿಗಳು, ಸಿಬ್ಬಂದಿಗಳು ಹಾಗೂ ರೈತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಜನ ಪ್ರಗತಿಪರ ರೈತರಾದ ಉಳ್ಳಾಲ ತಾಲೂಕಿನ ಹರೇಕಳ ಮೈಮೂನ,ಸುಳ್ಯ ತಾಲೂಕಿನ ಸಿ.ಕೆ. ನವೀನ್ ಚಂದ್ರ ಮತ್ತು ಬಂಟ್ವಾಳ ತಾಲೂಕಿನ ಶ್ರೀಮತಿ ವಿಲ್ಮಾ ಪ್ರಿಯ ಇವರುಗಳನ್ನು ಆಯ್ಕೆ ಮಾಡಿ ಪುರಸ್ಕರಿಸಲಾಯಿತು.