ಸುಳ್ಯ ತಾಲೂಕಿನ ಸುಳ್ಯ ನಗರ ಮತ್ತು ಅಜ್ಜಾವರ ಗ್ರಾಮಕ್ಕೆ ಸಂಭದಿಸಿದಂತೆ ಕೃಷಿ ಪತ್ತಿನ ಸಹಕಾರ ಸಂಘದ ಅಧಿಕೃತ ಅಭ್ಯರ್ಥಿಗಳನ್ನು ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಪ್ರಕಟಿಸಿದರು.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಸುಳ್ಯದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾಗಿದ್ದು ಇಲ್ಲಿ ಕೃಷಿಕರಿಗೆ ತಾಲೂಕಿನಲ್ಲಿ ಪ್ರಥಮಭಾರಿಗೆ ಡಿವಿಡೆಂಟ್ ಶೇ 15 ನೀಡಲಾಗಿದೆ ಎಂದರು .
ಸಹಕಾರಿ ಭಾರತ್ ಅಭ್ಯರ್ಥಿಗಳ ವಿವರ ಈ ಕೆಳಗಿನಂತಿವೆ
ಕೇಶವ ಮಾಸ್ತರ್ ಪರಿಶಿಷ್ಟ ಜಾತಿ ಮೀಸಲು ಚಂದ್ರಶೇಖರ ಡಿ ಕೆ ಪರಿಶಿಷ್ಟ ಪಂಗಡ ಮಿಸಲು , ಹಿಂದುಳಿದ ವರ್ಗ ಎ ಮೀಸಲು ಹೇಮಂತ್ ಕಂದಡ್ಕ , ಹಿಂದುಳಿದ ವರ್ಗ ಬಿ ಮೀಸಲು ಬಾಲಗೋಪಾಲ ಸೇರ್ಕಜೆ , ಮಹಿಳಾ ಕೋಟದಲ್ಲಿ ನವ್ಯ ಚಂದ್ರಶೇಖರ , ಹರಿಣಾಕ್ಷಿ ರೈ ಬೇಲ್ಯ , ಸಾಮಾನ್ಯ ವರ್ಗದಲ್ಲಿ ಎನ್ ಎ ರಾಮಚಂದ್ರ , ವೆಂಕಟ್ರಮಣ ಮುಳ್ಯ , ವಾಸುದೇವ ನಾಯ್ಕ್ ಪ್ರಬೊದ್ ಶೆಟ್ಟಿ ಮೇನಾಲ , ಶಿವರಾಮ ಕೇರ್ಪಳ್ಳ , ವಿಕ್ರಂ ಅಡ್ಪಂಗಾಯ ಅಭ್ಯರ್ಥಿಯಾಗಿದ್ದರೆ ಸಾಲಗಾರರಲ್ಲದ ಕ್ಷೇತ್ರದಲ್ಲಿ ಚಂದ್ರಶೇಖರ ನಡುಮನೆ ಅಭ್ಯರ್ಥಿಯಾಗಿದ್ದಾರೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಪ್ರಮುಖರಾದ ಎ ವಿ ತೀರ್ಥರಾಮ , ಎಸ್ ಎನ್ ಮನ್ಮಥ , ವೆಂಕಟ್ ದಂಬೆಕೋಡಿ , ಸುಬೋದ್ ಶೆಟ್ಟಿ ಮೇನಾಲ , ಜಿನ್ನಪ್ಪ ಪೂಜಾರಿ , ಚೆನಿಯ ಕಲ್ತಡ್ಕ, ವಿನಯ ಕುಮಾರ್ ಕಂದಡ್ಕ, ಎನ್ ಎ ರಾಮಚಂದ್ರ , ಬಾಲಗೋಪಾಲ್ ಸೇರ್ಕಜೆ, ಹರೀಶ್ ಬೂಡುಪನ್ನೆ , ಸುನೀಲ್ ಕೇರ್ಪಳ್ಳ ಸೇರಿದಂತೆ ಸಹಕಾರಿ ಭಾರತ್ ಅಭ್ಯರ್ಥಿಗಳು ಉಪಸ್ಥಿತರಿದ್ದರು