ಸುಳ್ಯ ತಾಲೂಕಿನ ಸುಳ್ಯ ನಗರ ಮತ್ತು ಅಜ್ಜಾವರ ಗ್ರಾಮಕ್ಕೆ ಸಂಭದಿಸಿದಂತೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಡಿ. ೩೧ ರಂದು ನಡೆಯಲಿದ್ದು ಇದೀಗ ಸಹಕಾರಿ ಭಾರತಿಯು ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು ಇವರ ವಿರುದ್ದವಾಗಿ ಸ್ಪರ್ಧಿಸಲು ಅಭ್ಯರ್ಥಿಗಳು ಸಹಕಾರಿ ರಂಗ ಸ್ಥಾಪಿಸಿ ಇದೀಗ ರಂಗವನ್ನು ಅಸ್ತಿತ್ವಕ್ಕೆ ತಂದಿದ್ದು ಸಹಕಾರಿ ರಂಗದ ಪರವಾಗಿ ಇಂದು ನಾಮಪತ್ರ ಸಲ್ಲಿಕೆಗಳು ಕೂಡ ನಡೆದಿವೆ .
ಸಹಕಾರಿ ರಂಗದ ಅಭ್ಯರ್ಥಿಗಳ ವಿವರ ಈ ಕೆಳಗಿನಂತಿವೆ
ಬಾಬು ಮುಗೇರ ಪರಿಶಿಷ್ಟ ಜಾತಿ ಮೀಸಲು ಸ್ಥಾನ, ವಿಶ್ವನಾಥ ಕುರುಂಜಿಗುಡ್ಡೆ ಪರಿಶಿಷ್ಟ ಪಂಗಡ ಮಿಸಲು ಸ್ಥಾನ , ಹಿಂದುಳಿದ ವರ್ಗ ಎ ಸ್ಥಾನ ಮೀಸಲು ರಾಮಣ್ಣ ಪೂಜಾರಿ ಪೊಡಂಬು , ಹಿಂದುಳಿದ ವರ್ಗ ಬಿ ಮೀಸಲು ಸ್ಥಾನ ವಿಜಯ ಕುಮಾರ್ ಪಡ್ಪು , ಮಹಿಳಾ ಕೋಟದಡಿಯಲ್ಲಿ ಜಯಂತಿ ಕೆ ಜಿ , ಲೀಲಾ ಮನಮೋಹನ್ , ಸಾಮಾನ್ಯ ವರ್ಗಗಳಲ್ಲಿ ರಾಹುಲ್ ಅಡ್ಪಂಗಾಯ, ರವೀಶ್ ಮಾವಿನಪಳ್ಳ , ವಿಶ್ವನಾಥ ಮುಳ್ಯ ಮಠ , ಮೋಹನ್ ಮುಳ್ಯ , ರಾಮಚಂದ್ರ ಪೆಲ್ತಡ್ಕ , ಕರುಣಾಕರ ಅಡ್ಪಂಗಾಯ (ಚಂದನ) ನಾಮಪತ್ರ ಸಲ್ಲಿಸಿದ್ದು ಸಾಲಗಾರರಲ್ಲದ ಕ್ಷೇತ್ರದಲ್ಲಿ ಲತೀಶ್ ಕುಮಾರ್ ರಾವ್ ಹಳಗೇಟು ಅಭ್ಯರ್ಥಿಯಾಗಿದ್ದಾರೆ ಎಂದು ತಿಳಿದುಬಂದಿದೆ . ಅಲ್ಲದೇ ಇದರಲ್ಲಿ ಕೆಲವೊಂದು ವ್ಯತ್ಯಾಸಗಳು ಮುಂದಿನ ದಿನಗಳಲ್ಲಿ ನಡೆಯಬಹುದು ಅಭ್ಯರ್ಥಿಗಳು ಬದಲಾಗಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಸಹಕಾರಿ ರಂಗದ ಅಭ್ಯರ್ಥಿಗಳಾಗಿ ಇದೀಗ ಇವರು ಉಮೇದುವಾರಿಕೆ ಸಲ್ಲಿದ್ದಾರೆ ಇನ್ನು ಪಕ್ಷೇತರ ಅಭ್ಯರ್ಥಿಗಳ ನಡೆಯು ಕುತೂಹಲ ಮೂಡಿಸಿದೆ ಅವರು ಸಹಕಾರಿ ರಂಗ ಸೇರುವರೋ ಅಥವಾ ಸಹಕಾರಿ ಭಾರತಿ ಪರವಾಗಿ ತಾವು ಸಲ್ಲಿಸಿದ ನಾಮಪತ್ರಗಳನ್ನು ಹಿಂಪಡೆಯುವರೋ ಎಂದು ಕಾದು ನೋಡಬೇಕಿದ್ದು ಅಂತಿಮ ಕಣವು ದಿನಾಂಕ 25-12-2023 ರಂದು ಸ್ಪಷ್ಟವಾಗಿ ತಿಳಿಯಲಿದೆ.