
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಶಿಕ್ಷಣ ವಿಭಾಗದ ನಿರ್ದೇಶಕಿ ಸಿಂಧೂ.ಬಿ.ರೂಪೇಶ್ ಭೇಟಿ ನೀಡಿದರು. ಶ್ರೀ ದೇವರ ದರುಶನ ಮಾಡಿದ ಅವರಿಗೆ ದೇವಳದ ಅರ್ಚಕರು ಶಾಲು ಹೊದಿಸಿ ಪ್ರಸಾದ ನೀಡಿದರು.ಬಳಿಕ ಅವರನ್ನು ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಶಾಲು ಹೊದಿಸಿ ಗೌರವಿಸಿದರು.ಈ ಸಂದರ್ಭ ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಉಪಸ್ಥಿತರಿದ್ದರು. ಸಿಂಧೂ.ಬಿ.ರೂಪೇಶ್ ಅವರು ಈ ಹಿಂದೆ ದ.ಕದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.