ನಾಗಪಟ್ಟನದಲ್ಲಿ ಸುಳ್ಯ ನಗರ ಪಂಚಾಯತಿನವರು ಪಯಸ್ವಿನಿ ನದಿ ತೀರದಲ್ಲಿ ಕಸ ತ್ಯಾಜ್ಯ ಹಾಕಿ ಪ್ರಕರಣ ಮಾಸುವ ಮುನ್ನ ಮತ್ತೊಂದು ಪ್ರಕರಣ ಆಲೆಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನಗಪಟ್ಟನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕೇಂದ್ರ ಇದ್ದು, ಕೇಂದ್ರದ ಹಿಂಭಾಗ ಕಳೆದ ಸುಮಾರು ವರ್ಷಗಳಿಂದ ಸಾರ್ವಜನಿಕರು ಕಸ ತ್ಯಾಜ್ಯ ಹಾಕುತ್ತಿದ್ದು ಇದನ್ನು ತೆಗೆಸುವಂತೆ ಇಂದು ಆಲೆಟ್ಟಿ ಗ್ರಾಮ ಪಂಚಾಯತಿಗೆ ದೂರು ದಾಖಲಾಗಿದೆ . ಅ ವಾರ್ಡಿನ ಸದಸ್ಯರಲ್ಲಿ, ಪಂಚಾಯತಿನಲ್ಲಿ ಎಷ್ಟು ದೂರು ನೀಡಿದ್ದರೂ ಇದುವರೆಗೆ ಏನೂ ಪ್ರಯೋಜನ ಆಗಿರುವುದಿಲ್ಲ.
ಆ ವಾರ್ಡಿನ ಪಂಚಾಯತ್ ಸದಸ್ಯರು ಹಾಗೂ ಉಪಾಧ್ಯಕ್ಷರು ಅದೇ ಪರಿಸರದವರು ಆಗಿದ್ದು ಕಸ ಹಾಕುವ ವಿಚಾರ ತಿಳಿದಿದ್ದರು ಇದರ ಬಗ್ಗೆ ಗಮನ ಹರಿಸದೆ ಇರುವುದು ಆ ಪರಿಸರದ ನಿವಾಸಿಗಳಿಗೆ ಬೇಸರ ತಂದಿದ್ದು, ಇಂದು ಅ ಭಾಗದ ಸಾರ್ವಜನಿಕರು ಸೇರಿ ಫೋಟೋ ತೆಗೆದು ದೂರನ್ನು ನೀಡಿರುತ್ತಾರೆ. ಅಂಗನವಾಡಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿಯನ್ನು ಇಡಬೇಕಾದ ಶಿಸು ಮತ್ತು ಕಲ್ಯಾಣ ಇಲಾಖೆಯ ಸಿಡಿಪಿಒ ಅಧಿಕಾರಿಗಳು, ಮೇಲ್ವಿಚಾರಕರು ಅಂಗನವಾಡಿ ಕೇಂದ್ರದ ಸುತ್ತಮುತ್ತ ಕೂಡ ವೀಕ್ಷಣೆ ಮಾಡಿ ಗಮನ ಹರಿಸದೆ ಇರುವುದು ಇಂದಿನ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.