
ದೊಡ್ಡತೋಟ ಮರ್ಕಂಜ ರಸ್ತೆಯ ಕೊರತ್ತೋಡಿಯಲ್ಲಿ ಚಿರತೆಯೊಂದು ರಿಕ್ಷಾ ಚಾಲಕನಿಗೆ ಕಾಣಸಿಕ್ಕಿರುವ
ಬಗ್ಗೆ ವರದಿಯಾಗಿದೆ. ದೊಡ್ಡತೋಟದಲ್ಲಿ ರಿಕ್ಷಾ ಚಾಲಕರಾಗಿರುವ ಗಂಗಾಧರ ಅವರಿಗೆ ಕೊರತ್ತೋಡಿ ಬಳಿಯ ಕಾಡಿನಿಂದ ಚಿರತೆಯೊಂದು ರಸ್ತೆ ದಾಟಿ ಬೊಳ್ಳಾಜೆ ಕಡೆಯ ಕಾಡಿಗೆ ಹೋಗಿದೆ ಎನ್ನಲಾಗಿದೆ. ಇದೀಗ ಚಿರತೆ ಕಾಣಸಿಕ್ಕಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಮರ್ಕಂಜದ ಕಟ್ಟಕ್ಕೋಡಿ ಚೀಮಾಡು ಪರಿಸರದಲ್ಲಿ ವಾರದ ಹಿಂದೆ ಚಿರತೆ ಕರುವನ್ನು ಹೊತ್ತೊಯ್ಯಿದ್ದಿತ್ತು. ( ಚಿತ್ರ : ಫೈಲ್)