- Thursday
- November 21st, 2024
ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ ಇದರ ಆಶ್ರಯದಲ್ಲಿ ಸ್ಪಂದನ ಗೆಳೆಯರ ಬಳಗ ಅಡ್ತಲೆ ಇದರ ನೇತೃತ್ವದಲ್ಲಿ ಯುವಕ-ಯುವತಿ ಮಂಡಲಗಳ ಸಹಯೋಗದೊಂದಿಗೆ ಯಶಸ್ಸು ಕನಸಲ್ಲ ಎಂಬ ವಿಷಯದ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಅರಂತೋಡು ಗ್ರಾಮ ಪಂಚಾಯತ್ ಅಮೃತ ಸಭಾಂಗಣದಲ್ಲಿ ಡಿ. 17 ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪ್ರವೀಣ್ ಕುಮಾರ್...
ದೊಡ್ಡತೋಟ ಮರ್ಕಂಜ ರಸ್ತೆಯ ಕೊರತ್ತೋಡಿಯಲ್ಲಿ ಚಿರತೆಯೊಂದು ರಿಕ್ಷಾ ಚಾಲಕನಿಗೆ ಕಾಣಸಿಕ್ಕಿರುವ ಬಗ್ಗೆ ವರದಿಯಾಗಿದೆ. ದೊಡ್ಡತೋಟದಲ್ಲಿ ರಿಕ್ಷಾ ಚಾಲಕರಾಗಿರುವ ಗಂಗಾಧರ ಅವರಿಗೆ ಕೊರತ್ತೋಡಿ ಬಳಿಯ ಕಾಡಿನಿಂದ ಚಿರತೆಯೊಂದು ರಸ್ತೆ ದಾಟಿ ಬೊಳ್ಳಾಜೆ ಕಡೆಯ ಕಾಡಿಗೆ ಹೋಗಿದೆ ಎನ್ನಲಾಗಿದೆ. ಇದೀಗ ಚಿರತೆ ಕಾಣಸಿಕ್ಕಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಮರ್ಕಂಜದ ಕಟ್ಟಕ್ಕೋಡಿ ಚೀಮಾಡು ಪರಿಸರದಲ್ಲಿ ವಾರದ ಹಿಂದೆ ಚಿರತೆ ಕರುವನ್ನು...
ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ಡಿ.16 ರಂದು ತ್ಯಾಜ್ಯ ಎಸೆದ ಕುಕ್ಕುಜಡ್ಕ ನಿವಾಸಿ ಮೋಹಿತ್ ಎಂಬವರಿಗೆ ರೂ 5000.00 ದಂಡ ವಿಧಿಸಿದ ಘಟನೆ ಡಿ.18 ರಂದು ನಡೆದಿದೆ. ಡಿ.16 ರಂದು ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದಿದ್ದನ್ನು ಪತ್ತೆ ಹಚ್ಚಿದ ಪಂಚಾಯತ್ ಸಿಬ್ಬಂದಿ ಪುರುಷೋತ್ತಮ ಗೌಡರು ತ್ಯಾಜ್ಯ ತುಂಬಿದ್ದ ಬ್ಯಾಗ್ ಪರಿಶೀಲಿಸಿ ದಿನಾಂಕ: 18/12/2023 ರಂದು...
ನಾಲ್ಕೂರು ಗ್ರಾಮದ ಮರಕತ ಕುಡಿಯುವ ನೀರಿನ ಡ್ಯಾಮ್ ನಲ್ಲಿ ಮಳೆಗಾಲದಲ್ಲಿ ಬೃಹತ್ತಾದ ಮರಗಳು ಬಂದು ತುಂಬಿಕೊಂಡಿದ್ದು, ಅದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಇದರ ಸ್ವಯಂಸೇವಕರು ತೆರವುಗೊಳಿಸಿದ್ದು, ಸಂಯೋಜಕ ಹರಿಶ್ಚಂದ್ರ ಕುಳ್ಳಂಪ್ಪಾಡಿ, ಪ್ರತಿನಿಧಿ ಸತೀಶ್, ಸ್ವಯಂಸೇವಕರಾದ ಕಾರ್ತಿಕ್, ಲೋಹಿತ್, ಅಶ್ವಥ್, ಪ್ರಜ್ವಲ್, ದೀಪಕ್, ಶೇಷಪ್ಪ ನಾಯ್ಕ್, ಚಂದ್ರಶೇಖರ, ಭರತ್, ಕರುಣಾಕರ್ ಭಾಗವಹಿಸಿದ್ದರು....
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಸರಕಾರಿ ಪ್ರೌಢಶಾಲೆ ಹರಿಹರ ಪಲ್ಲತ್ತಡ್ಕದಲ್ಲಿ ಡಿ.16 ಶನಿವಾರದಂದು ವಿಜಯ ದಿವಸ್ ಆಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ರಾಮಚಂದ್ರ ಪಳಂಗಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗುರುವ ಕಟ್ಟ, ನಿವೃತ್ತ ಪ್ರಾಚಾರ್ಯರಾದ ಪ್ರಭಾಕರ ಕಿರಿಭಾಗ,...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಬ್ರಹ್ಮಣ್ಯ ವಲಯದ ವತಿಯಿಂದ ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಡಾಕ್ಟರ್ ಚಂದ್ರಶೇಖರ ಕಿರಿ ಭಾಗ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಅಂದು ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಹರಿಹರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ಅಂಙಣ ಕಾರ್ಯಕ್ರಮಕ್ಕೆ...
ವಿದ್ಯಾರ್ಜನೆಗಾಗಿ ವಸತಿ ನಿಲಯಗಳಿಗೆ ಬರುವ ನಿಲಯಾರ್ಥಿಗಳಿಗೆ ವಸತಿ ನಿಲಯಗಳು ತಮ್ಮ ಮನೆ ಇದ್ದ ಹಾಗೆ. ಅಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ತಂದೆ ತಾಯಿಯರಂತೆ 24*7 ತಮ್ಮ ಸೇವೆಯಲ್ಲಿ ನಿರತರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ನಿಲಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ತಾವು ನೆಲೆಸಿದ ವಸತಿ ನಿಲಯಗಳಿಗೆ ಒಳ್ಳೆಯ ಹೆಸರು ಹಾಗೂ ಕೀರ್ತಿಯನ್ನು ತಂದು ಕೊಡುವ ಕೆಲಸವನ್ನು ಮಾಡಬೇಕು ಎಂದು...