ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ(ರಿ.) ಸುಳ್ಯ ಇದರ ವತಿಯಿಂದ ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟರಮಣ ಗೌಡರ 95ನೇ ಜನ್ಮದಿನದ ಸವಿ ನೆನಪಿಗೆ ಕೆವಿಜಿ ಸುಳ್ಯ ಹಬ್ಬವನ್ನು ಡಿ. 25 ಮತ್ತು 26ರ ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ತಿಳಿಸಿದರು.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಡಿ. 25ರಂದು ನಡೆಯುವ ತಾಲೂಕು ಮಟ್ಟದ ಕೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನೆಯನ್ನು ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾದ ಡಾ. ಹರಪ್ರಸಾದ ತುದಿಯಡ್ಕರವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು, ಗೌರವ ಉಪಸ್ಥಿತಿಯಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾದ ಡಾ. ಕೆ.ವಿ. ಚಿದಾನಂದರವರು, ಹಾಗೂ ಕ್ರೀಡಾಕೂಟಕ್ಕೆ ಸ.ಪ್ರ ದರ್ಜೆ ಕಾಲೇಜು ಸುಳ್ಯ ಪ್ರಾಂಶುಪಾಲರಾದ ಸತೀಶ್ ಕೊಯಿಂಗಜೆಯವರು ಚಾಲನೆಯನ್ನು ನೀಡಲಿದ್ದಾರೆ.
ಯುವ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಮನೋರಂಜನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಅವರು ವಹಿಸಲಿದ್ದಾರೆ. ಅಂತರರಾಷ್ಟ್ರೀಯ ವ್ಯಕ್ತಿ ವಿಕಸನ ತರಬೇತುದಾರರಾದ ರಾಜೇಂದ್ರ ಭಟ್ ಅವರು ಅಭಿನಂದಿಸಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಡಾ. ನಿತಿಶ್ ಪ್ರಭು-ಪಶು ವೈದ್ಯಕೀಯ, ಹರಿಕೃಷ್ಣ ರೈ- ಇಂಜಿನಿಯರಿಂಗ್ ಕ್ಷೇತ್ರ, ಅರವಿಂದ್ ಚೊಕ್ಕಾಡಿ-ಶಿಕ್ಷಣ ಮತ್ತು ಸಾಹಿತ್ಯ, ಎಸ್. ಆರ್. ಕೇಶವ- ಉದ್ಯಮ, ತೇಜಸ್ವಿ ಕಡಪಳ- ಸಾಂಸ್ಕೃತಿಕ ಸಂಘಟನೆ, ಡಾ, ತಾರಾ ನಂದನ್- ವೈದ್ಯಕೀಯ ಹೀಗೆ ಯುವ ಸಾಧಕರಿಗೆ ಅಭಿನಂದನೆಯನ್ನು ಮಾಡಲಾಗುತ್ತದೆ. ಅಲ್ಲದೇ ಕಾರ್ಯಕ್ರಮದ ಆರಂಭದಲ್ಲಿ ರೋಟರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಲಿದ್ದು , ಡಿ. 26ರಂದು ಕೆವಿಜಿ ಸಂಸ್ಮರಣೆ ಮತ್ತು ಕೆವಿಜಿ ಸಾಧನಾಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಆರಂಭಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನೋರಂಜನೆ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾದ ಡಾ. ಕೆ.ವಿ. ಚಿದಾನಂದರವರು ವಹಿಸಲಿದ್ದಾರೆ. ಮಂಗಳೂರು ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಎಂ. ಬಿ. ಪುರಾಣಿಕ್ ಮುಖ್ಯ ಅತಿಥಿ ಹಾಗೂ ಸಂಸ್ಮರಣಾ ಭಾಷಣವನ್ನು ಮಾಡಲಿದ್ದಾರೆ. ಸುಳ್ಯದ ಖ್ಯಾತ ವೈದ್ಯರಾದ ಡಾ. ರಘುರಾಮ ಮಾಣಿಬೆಟ್ಟು ಮತ್ತು ಬೆಂಗಳೂರು ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಶಂಭಯ್ಯ ಕೊಡಪಾಲ ಅವರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಿದೆ.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ (ರಿ.) ಇದರ ಸಮಾಜ ಸೇವಾ ಕಾರ್ಯಕ್ರಮದಡಿಯಲ್ಲಿ ನೀಡುವ ರೂ.1 ಲಕ್ಷ ಸಹಾಯಧನದೊಂದಿಗೆ ಪ್ರಕೃತಿ ವಿಕೋಪದಲ್ಲಿ ಹಾನಿಗೀಡಾದ ಶ್ರೀಮತಿ ಸರೋಜಾ ಆರ್. ಚೆಂಡೆಮೂಲೆ ಜಯನಗರ ಇವರಿಗೆ ಮನೆ ಹಸ್ತಾಂತರಿಸುವ ಕಾರ್ಯಕ್ರಮ ಡಿ. 26ರಂದು ನಡೆಯಲಿದ್ದು, ಸುಳ್ಯ ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್ ಅವರು ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್‌ನ ಮುಖ್ಯಾಧಿಕಾರಿಯಾದ ಸುಧಾಕರ ಎಂ. ಎಚ್, ಹಾಗೂ ಸುಳ್ಯ ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ ಉಪಸ್ಥಿತರಿರಲಿದ್ದಾರೆ.
ಡಿ.25ರಂದು ರಾತ್ರಿ ಕುಮಾರ ಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ವಿದ್ಯಾರ್ಥಿಗಳಿಂದ ಕುಮಾರ ವೈಭವ ಸಾಂಸ್ಕೃತಿಕ ವೈವಿದ್ಯಮಯ ಕಾರ್ಯಕ್ರಮ ಹಾಗೂ ಡಿ.26ರಂದು ರಾತ್ರಿ ‘ಜಾನಪದ ವೈಭವ’ ಕಲಾಮಯಂ ಉಡುಪಿ ಇವರಿಂದ ಜನಪದ ಕಲೆಗಳ ಅನಾವರಣ ಜಾನಪದ ನೃತ್ಯ ಸಂಗೀತ ಮತ್ತು ವಾದ್ಯ ಪರಿಕರಗಳ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕೋಶಾಧಿಕಾರಿ ಜಜನಾರ್ದನ ನಾಯ್ಕ್, ಡಾ| ಎನ್.ಎ.ಜ್ಞಾನೇಶ್, ಚಂದ್ರಾ ಕೋಲ್ಚಾರ್, ರಾಜು ಪಂಡಿತ್, ಪ್ರಭಾಕರನ್ ನಾಯರ್ ಸಿ.ಹೆಚ್. ಹರೀಶ್ ಬಂಟ್ವಾಳ, ಚಂದ್ರಶೇಖರ ನಂಜೆ ಮತ್ತಿತರರು ಉಪಸ್ಥಿತರಿದ್ದರು.