ಪಶುಪಾಲನಾ ಇಲಾಖೆ ಮತ್ತು ಹಾಲು ಪಶು ಉತ್ಪಾದಕರ ಒಕ್ಕೂಟಗಳ ವಿವಿಧ ಯೋಜನೆಗಳಲ್ಲಿ ವಿಮೆಗೆ ಒಳಪಟ್ಟಿರುವ ರೈತರ ಜಾನುವಾರುಗಳು ಮರಣ ಹೊಂದಿದ್ದಲ್ಲಿ ವಿಮಾ ಮೊತ್ತವು ರೈತರಿಗೆ ಸಲ್ಲಿಕೆಯಾಗಿರುತ್ತದೆ. ಆದರೆ ಯಾವುದೇ ವಿಮಾ ಯೋಜನೆಗಳಲ್ಲಿ ವಿಮೆಗೆ ಒಳಪಡದ ಜಾನುವಾರುಗಳು ಆಕಸ್ಮಿಕವಾಗಿ ಮರಣ ಹೊಂದಿದ್ದಲ್ಲಿ ರೈತರಿಗೆ ಯಾವುದೇ ಸಹಾಯಧನ ಅಥವಾ ಪರಿಹಾರ ದೊರಕುವುದಿಲ್ಲ. ಆದ್ದರಿಂದ 2023-24ನೇ ಸಾಲಿನಲ್ಲಿ ಅನುಗ್ರಹ ಯೋಜನೆಯಡಿಗೆ ಆಕಸ್ಮಿಕ ಮರಣಹೊಂದಿದ ಕುರಿ ಮತ್ತು ಮೇಕೆಗಳಿಗೆ ತಲಾ ಗರಿಷ್ಠ ರೂಪಾಯಿ 5,000 ದಂತೆ ಹಾಗೂ ದನ ಮತ್ತು ಎಮ್ಮೆಗಳಿಗೆ ತಲಾ ಗರಿಷ್ಠ ರೂಪಾಯಿ 10,000 ದಂತೆ ಪರಿಹಾರವನ್ನು ಕರ್ನಾಟಕ ಸರ್ಕಾರವು ಘೋಷಿಸಿರುತ್ತದೆ.
ಜಾನುವಾರು ಮಾಲಿಕರು ಸದ್ರಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಮೃತಪಟ್ಟ ಜಾನುವಾರನ್ನು ಪಶು ವೈದ್ಯರಿಗೆ ಹಾಜರುಪಡಿಸಿ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳೀಯ ಪಶುವೈದ್ಯರ ದೃಢೀಕರಣದ ನಂತರವೇ ಈ ಸೌಲಭ್ಯವನ್ನು ಪಡೆಯಬಹುದು.
ಈ ಸೌಲಭ್ಯವನ್ನು ರೈತರು ಬಳಸಿಕೊಂಡು ಜಾನುವಾರು ಮರಣದಿಂದಾಗುವ ಆರ್ಥಿಕ ನಷ್ಟ ಕಡಿಮೆ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ಪರಿಹಾರ ಪಡೆಯಲು ಸತ್ತ ಜಾನುವಾರಿನ ಮರಣೋತ್ತರ ಪರೀಕ್ಷೆ ಕಡ್ಡಾಯ ಮತ್ತು ಮರಣಕ್ಕೂ ಮುಂಚಿತವಾಗಿ ಜಾನುವಾರಿಗೆ ಕಿವಿ ಓಲೆ ಹಾಕಿರಬೇಕು ಮತ್ತು ಈ ಮಾಹಿತಿ ಇನಾಫ್ ತಂತ್ರಾಂಶದಲ್ಲಿ ನಮೂದಾಗಿರಬೇಕು
ಹೆಚ್ಚಿನ ಮಾಹಿತಿಗಾಗಿ: ಡಾ||ನಿತಿನ್ ಪ್ರಭು ಕೆ ಮುಖ್ಯ ಪಶು ವೈದ್ಯಾಧಿಕಾರಿ ಪಶು ಆಸ್ಪತ್ರೆ ಸುಳ್ಯ ಮೊ: 9844995078, ಡಾ. ಸೂರ್ಯನಾರಾಯಣ ಬಿ ಕೆ ಮುಖ್ಯ ಪಶು ವೈದ್ಯಾಧಿಕಾರಿ ಪಶು ಚಿಕಿತ್ಸಾಲಯ ಬೆಳ್ಳಾರೆ ಮೊ:9880092033/9448177566, ಡಾ.ವೆಂಕಟಾಚಲಪತಿ ಜೆ ಎನ್ ಮುಖ್ಯ ಪಶು ವೈದ್ಯಾಧಿಕಾರಿ ಪಶು ಚಿಕಿತ್ಸಾಲಯ ಗುತ್ತಿಗಾರು ಮೊ: 9449778338/ 9482994154, ಡಾ. ಮೇಘಶ್ರೀ ಸಿ ಎಸ್ ಪಶು ವೈದ್ಯಾಧಿಕಾರಿ ಪಶು ಚಿಕಿತ್ಸಾಲಯ ಕಳಂಜ ಮೊ: 8095350456/ 8618150305, ಶ್ರೀ ಕೆ ಪುಷ್ಪರಾಜ್ ಶೆಟ್ಟಿ ಜಾನುವಾರು ಅಭಿವೃದ್ದಿ ಅಧಿಕಾರಿ ಪಶು ವೈದ್ಯ ಆಸ್ಪತ್ರೆ ಸುಳ್ಯ ಮೊ: 9449639889, ಶ್ರೀ ದೇವರಾಜ ಯು ಬಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಪಶು ಆಸ್ಪತ್ರೆ ಸುಳ್ಯ ಮೊ: 9448152478 ಮತ್ತು ಶ್ರೀ ಪಾಲಾಕ್ಷ . ಬಿ ಎ ಪಶು ವೈದ್ಯಕೀಯ ಪರೀಕ್ಷಕರು ಪಶು ಚಿಕಿತ್ಸಾಲಯ ಅರಂತೋಡು ಮೊ: 9449245074/ 8310727772 ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಶುಸಖಿಯರನ್ನು ಸಂಪರ್ಕಿಸಬಹುದು.
ಪರಿಹಾರ ಪಡೆಯಲು ಬೇಕಾಗುವ ದಾಖಲಾತಿಗಳು
1. ಆಧಾರ್ ಕಾರ್ಡು
2. ರೇಷನ್ ಕಾರ್ಡು
3. ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ
4. ಮರಣೋತ್ತರ ಪರೀಕ್ಷೆಯ ನಂತರ ಸತ್ತ ಜಾನುವಾರಿನೊಂದಿಗೆ ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯರು ಮತ್ತು ಜಾನುವಾರು ಮಾಲಿಕ ನಿಂತಿರುವ ಫೋಟೋ
5. ಫಲಾನುಭವಿಯ FRUITS ಸಂಖ್ಯೆ
6. ಪಶುವೈದ್ಯರು ನೀಡಿದ ಮರಣೋತ್ತರ ಪರೀಕ್ಷಾ ವರದಿ
ಇವೆಲ್ಲವುದರ 2 ಪ್ರತಿಗಳನ್ನು ಸಲ್ಲಿಸಬೇಕು ಎಂದು ಪಶು ವೈಧ್ಯಾಧಿಕಾರಿ ಡಾ.ನಿತಿನ್ ಪ್ರಭು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
- Thursday
- November 21st, 2024