ಶ್ರೀ ಶಾಸ್ತವೇಶ್ವರ ದೇವಸ್ಥಾನ ಕರ್ಲಪ್ಪಾಡಿ ಅಜ್ಜಾವರ ಕಾಲವಧಿ ಜಾತ್ರೋತ್ಸವ ಕಾರ್ಯಕ್ರಮವು 08-12-2023 ರಂದು ಮುಹೂರ್ತದ ಗೊನೆ ಕಡಿಯುವ ಮೂಲಕ ಪ್ರಾರಂಭಗೊಂಡು ದಿನಾಂಕ 15 ರಂದು ದೇವರಿಗೆ ಶುದ್ದಿಕಲಶ 16 ರಂದು ಉಗ್ರಾಣ ತುಂಬಿಸುವ ಮೂಲಕ ವೈದಿಕ ಕಾರ್ಯಕ್ರಮಗಳಿಗೆ ಚಾಲನೆಗೊಂಡು ರಾತ್ರಿ ದೇವರ ಭೂತಬಲಿ ನಡೆಯಲಿದೆ. ಇದೀಗ ಸ್ಥಳೀಯ ಪ್ರತಿಭೆಗಳಿಂದ ಶ್ರೀ ಶಾಸ್ತರ ಸಭಾ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ಹಾಗೂ ಪುತ್ತೂರಿನ ಗಾನಸಿರಿ ಕಲಾಕೇಂದ್ರ ಸುಳ್ಯ ವಿಭಾಗದ ವಿಧ್ಯಾರ್ಥಿಗಳಿಂದ ಮಧುರ ಗೀತಾ ಸಂಗಮ ಕಾರ್ಯಕ್ರಮಗಳು ಜರುಗುತ್ತಿದ್ದು ಕಿಕ್ಕಿರಿದು ಸಾಂಸ್ಕೃತಿಕ ಸಭಾ ವೇದಿಕೆಯ ಮುಂಭಾಗಲ್ಲಿ ಜನತೆ ನೆರೆದಿದ್ದು ಜಾತ್ರೋತ್ಸವ ಹಿನ್ನಲೆಯಲ್ಲಿ ಅಜ್ಜಾವರ ವಿಶ್ವಹಿಂದು ಪರಿಷದ್ ಮತ್ತು ಭಜರಂಗದಳ ನೇತ್ರತ್ವದಲ್ಲಿ ಗೋ ಪೋಜೆ ಮತ್ತು ಗೀರು ಮತ್ತು ಗಿಡ್ಡ ತಳಿಯ ಗೋವಿನ ಪ್ರದರ್ಶನ ನಡೆಯುತ್ತಿದೆ.
- Thursday
- November 21st, 2024