
ಸುಳ್ಯ ನಗರದ ಹೃದಯ ಭಾಗವಾದ ಸುಳ್ಯ ಜ್ಯೋತಿ ವೃತ್ತದಿಂದ ಹಿಡಿದು ಗಾಂಧಿನಗರದ ವರೆಗೆ ನಗರ ಪಂಚಾಯತ್ ಮತ್ತು ಪೋಲೀಸ್ ಇಲಾಖೆಯು ಜಂಟಿಯಾಗಿ ಎಡ ಹಾಗೂ ಬಲ ಬದಿ ಎಂಬಂತೆ ದಿನಕ್ಕೊಂದು ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಆದರೆ ವಾಹನ ಸವಾರರು ಮಾತ್ರ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡುತ್ತಿದ್ದು ಎರಡು ಬದಿಗಳಲ್ಲಿ ನಿಲ್ಲಿಸುತ್ತಿರುವ ಹಿನ್ನಲೆಯಲ್ಲಿ ರಸ್ತೆಯಲ್ಲಿ ಓಡಾಡಲು ಕಷ್ಟ ಸಾಧ್ಯವಾಗಿದೆ . ಈ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟು ಮಾಲಿಕರು ಹಾಗೂ ಪೋಲೀಸ್ , ನಗರ ಪಂಚಾಯತ್ ಎಚ್ಚೆತ್ತು ಸುಳ್ಯದ ಗಾಂಧಿನಗರ ಸೇರಿದಂತೆ ಇತರೆಡೆಗಳಲ್ಲಿ ಎರಡು ಬದಿಯಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಎಚ್ಚರಿಕೆ ನೀಡಿ ರಸ್ತೆಯಲ್ಲಿ ವಾಹನಗಳ ಇಕ್ಕಟ್ಟಿಗೆ ಎಡೆ ಮಾಡದೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದೇ ಎಂದು ಕಾದು ನೋಡಬೇಕಿದೆ.