
ಪ್ರತಿಷ್ಠಿತ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಗೆ ದಿನ ನಿಗದಿಯಾಗಿದ್ದು ಮತ್ತೆ ರಾಜಕೀಯ ಸಂಚಲನ ಸೃಷ್ಟಿಸಲಿದೆಯೋ ಕಾದು ನೋಡಬೇಕಿದೆ. ಮಾ. 11ರಂದು ಆಡಳಿತ ಮಂಡಳಿಯ ಚುನಾವಣೆಗೆ ದಿನ ನಿಗದಿಯಾಗಿದೆ. ಚುನಾವಣೆಗೆ ಸಂಬಂಧಿಸಿ ಸದಸ್ಯ ಸಹಕಾರಿ ಸಂಘಗಳ ಡೆಲಿಗೇಟ್ ನಮೂನೆ ಮತ್ತಿತರ ದಾಖಲೆಗಳನ್ನು ಸ್ವೀಕರಿಸಲು ಹಾಗೂ ಪರಿಶೀಲಿಸಲು ಜ.4 ರಂದು ಪುತ್ತೂರಿನ ಶಿವರಾಯ ಸಹಕಾರ ಸದನದಲ್ಲಿ ವ್ಯವಸ್ಥೆ ಮಾಡಲಾಗುವುದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.