ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರು ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಬರುವ ಬೇಳೆಯಲ್ಲಿ ಕೊಳೆತ ಬೇಳೆ ಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇತ್ತ ಸರಕಾರವು ಅಕ್ಷರ ದಾಸೋಹ ಎಂಬ ಯೋಜನೆಯ ಅಡಿಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದೀಗ ಕೊಳೆತ ಮಾದರಿಯ ಬೇಳೆ ಕಾಳುಗಳ ಪ್ಯಾಕಟ್ ಗಳು ಬಂದಿದ್ದು ಇದನ್ನು ಅಕ್ಷರ ದಾಸೋಹ ಇಲಾಖೆ ಸಿಬ್ಬಂದಿಗಳಿಗೆ ತಿಳಿಸಿದಾಗ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳ ಮೇಲೆ ರೇಗಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬೇಳೆ ಕಾಳುಗಳ ಕುರಿತಾಗಿ ಶಿಕ್ಷಣ ಇಲಾಖೆ ಮತ್ತು ಅಕ್ಷರ ದಾಸೋಹ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಈ ಕುರಿತು ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಿದೆ.
ಅಕ್ಷರ ದಾಸೋಹ ಇಲಾಖೆಯವರು ಉತ್ತಮವಾದ ಬೇಳೆಯನ್ನು ಕಳುಹಿಸಿ ಕೊಟ್ಟಿದ್ದು ಇದು ಅಡುಗೆ ಸಿಬ್ಬಂದಿಗಳ ಅಜಾಗರುಕತೆಯಿಂದ ಇಂತಹ ತಪ್ಪುಗಳು ಆಗಿದೆ ಎಂದು ಶಾಲೆಯ ಮುಖ್ಯಶಿಕ್ಷಕರಾದ ಚಿನ್ನಸ್ವಾಮಿ ಶೆಟ್ಟಿ ತಿಳಿಸಿದ್ದಾರೆ.