ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವಳದ ಆಡಳಿತಕ್ಕೊಳಪಟ್ಟ ಎಸ್‌ಎಸ್‌ಪಿಯು ಕಾಲೇಜಿನಿಂದ ಹಸಿರು ಕಾಣಿಕೆಯನ್ನು ಬುಧವಾರ ಶ್ರೀ ದೇವಳಕ್ಕೆ ಅರ್ಪಿಸಲಾಯಿತು.ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಮತ್ತು ಸಿಬ್ಬಂಧಿ ವರ್ಗ ಒದಗಿಸಿದ ಸುವಸ್ತುಗಳನ್ನು ಸಿಂಗರಿಸಿದ ವಾಹನಗಳಲ್ಲಿ ದೇವಳಕ್ಕೆ ಕೊಂಡೊಯ್ಯಲಾಯಿತು.
ವಿದ್ಯಾರ್ಥಿಗಳ ಸೇವೆ:
೧೫೦೦ ಕೆಜಿ(೧೫ ಕ್ವಿಂಟಾಲ್) ಸೋನಾಮಸೂರಿ ಅಕ್ಕಿ, ೧೭೦೦ ತೆಂಗಿನಕಾಯಿ, ೩೦೦ ಕೆಜಿ ಬೆಲ್ಲ, ೩೦೦ ಕೆಜಿ ಸಕ್ಕರೆ, ೮೫ ಸೀಯಾಳ, ೨೫೦ ಅಡಿಕೆ, ೨೦ ಬಾಳೆಗೊನೆ, ೩೫೦ ಬಾಳೆ ಎಲೆ, ೪೫ ಹಿಂಗಾರ, ೪೦ ಕುಂಬಳಕಾಯಿ,ಸೇರಿದAತೆ ತೊಂಡೆಕಾಯಿ, ಚೀನಿಕಾಯಿ, ಸೌತೆ, ಏಲಕ್ಕಿ, ಕಾಳು ಮೆಣಸು, ಕಬ್ಬು,ಹಲಸಿನ ಗುಜ್ಜೆ ಸೇರಿದಂತೆ ೩೦ ಕೆಜಿ ತರಕಾರಿಗಳನ್ನು ಶ್ರೀ ದೇವರಿಗೆ ಅರ್ಪಿಸಲಾಯಿತು.
ವಿದ್ಯಾರ್ಥಿಗಳ ಸೇವೆ:
ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಮೂಲಕ ತಮ್ಮ ಮನೆಯಿಂದ ತಂದ ಸುವಸ್ತುಗಳನ್ನು ಶ್ರೀ ದೇವರಿಗೆ ಅರ್ಪಿಸಿದರು.ಅಲ್ಲದೆ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂಧಿ ವರ್ಗ ಕೂಡಾ ಸೇವೆ ನೆರವೇರಿಸಿದರು. ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಹಾಗೂ ಸಿಬ್ಬಂಧಿ ವರ್ಗ ನೀಡಿದ ಕಾಣಿಕೆಯಲ್ಲಿ ಅಕ್ಕಿ, ಬೆಲ್ಲ, ಸಕ್ಕರೆ ಖರೀದಿಸಿ ತರಲಾಯಿತು.
ಪ್ರಾರ್ಥನೆ:
ಕಾಲೇಜಿನಿಂದ ಹಸಿರು ಕಾಣಿಕೆ ಹೊರಡುವ ಮೊದಲು ರಂಗ ಮಂದಿರದಲ್ಲಿ ಎಲ್ಲಾ ಸುವಸ್ತುಗಳನ್ನು ಒಟ್ಟಾಗಿ ಇರಿಸಲಾಯಿತು.ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್ ದೀಪ ಬೆಳಗಿ ದೇವತಾ ಪ್ರಾರ್ಥನೆ ಮಾಡಿದರು.ಬಳಿಕ ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ ಶ್ರೀಕ್ಷೇತ್ರ ಮಹಾತ್ಮೆ ಮತ್ತು ಹಸಿರು ಕಾಣಿಕೆಯ ಮಹತ್ವ ತಿಳಿಸಿದರು. ನಂತರ ಹೂ, ತಳಿರು ತೋರಣ ಮತ್ತು ಬಾಳೆಯಿಂದ ಅಲಂಕರಿಸಿದ ವಾಹನದಲ್ಲಿ ಹಸಿರು ಕಾಣಿಕೆಯನ್ನು ಶ್ರೀ ದೇವಳಕ್ಕೆ ಕೊಂಡೊಯ್ಯಲಾಯಿತು. ಈ ಸಂದರ್ಭ ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಹಿರಿಯ ಶಿಕ್ಷಕ ಎಂ.ಕೃಷ್ಣ ಭಟ್, ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು. ಉಪನ್ಯಾಸಕಿ ಭವ್ಯಶ್ರೀ ಕುಲ್ಕುಂದ ದೇವತಾ ಸ್ತುತಿ ಹಾಡಿದರು.ಉಪನ್ಯಾಸಕರಾದ ರತ್ನಾಕರ.ಎಸ್, ಮನೋಜ್ ಕುಮಾರ್ ಬಿ.ಎಸ್ ಹಸಿರು ಕಾಣಿಕೆ ವ್ಯವಸ್ಥೆಯ ಜವಬ್ದಾರಿ ವಹಿಸಿಕೊಂಡಿದ್ದರು.
ದೇವಳಕ್ಕೆ ಹಸ್ತಾಂತರ:
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಅವರು ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ಹಸಿರು ಕಾಣಿಕೆಯನ್ನು ತಾಂಬೂಲ ನೀಡುವ ಮೂಲಕ ಹಸ್ತಾಂತರಿಸಿ ಶ್ರೀ ದೇವಳಕ್ಕೆ ಸಮರ್ಪಿಸಿದರು. ಬಳಿಕ ಶ್ರೀ ದೇವಳದಿಂದ ಪ್ರಸಾದ ನೀಡಲಾಯಿತು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀವತ್ಸ ಬೆಂಗಳೂರು, ಶ್ರೀ ದೇವಳದ ಶಿವಸುಬ್ರಹ್ಮಣ್ಯ ಭಟ್, ಎನ್.ಸಿ ಸುಬ್ಬಪ್ಪ, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್, ಕಾರ್ಯದರ್ಶಿ ಉಪನ್ಯಾಸಕ ರತ್ನಾಕರ.ಎಸ್, ಉಪನ್ಯಾಸಕರಾದ ಗಿರೀಶ್, ಜಯಪ್ರಕಾಶ್ ಆರ್, ಮನೋಜ್ ಕುಮಾರ್ ಬಿ.ಎಸ್, ರಾಧಾಕೃಷ್ಣ ಚಿದ್ಗಲ್, ಶ್ರೀಧರ್ ಪುತ್ರನ್,ಯೋಗಣ್ಣ, ಪ್ರಜ್ವಲ್.ಜೆ, ಉಪನ್ಯಾಸಕಿಯರಾದ ಸವಿತಾ ಕೈಲಾಸ್, ಸೌಮ್ಯಾ ದಿನೇಶ್, ಸಿಬ್ಬಂದಿ ಮೋಹನ್.ಎಂ.ಮಠ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- Saturday
- November 23rd, 2024