
ಸುಳ್ಯದ ಶ್ರೀ ಶಾರದ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ ಇವರು ಅನೀಮಿಯ ಪೌಷ್ಟಿಕ ಕಾರ್ಯಕ್ರಮದಡಿಯಲ್ಲಿ ಮಕ್ಕಳ ರಕ್ತಹೀನತೆ ತಪಾಸಣೆ ಮತ್ತು ಚಿಕಿತ್ಸೆ ಕಾರ್ಯಕ್ರಮ ನಡೆಯಿತು. ಸುಳ್ಯದ ವೈದ್ಯಾಧಿಕಾರಿ ಡಾ. ಭವ್ಯ, ನೇತ್ರಾಧಿಕಾರಿ ರೋಹಿತ್ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಕ್ರಿಸ್ತಲ್ ಕ್ರಾಸ್ ರಕ್ತ ಪರೀಕ್ಷೆ ಹಾಗೂ ತಪಾಸಣೆಯನ್ನು ನೆರವೇರಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ಬಾಲಚಂದ್ರ ಹಾಗೂ ಉಪನ್ಯಾಸಕಿ ಸ್ವಾತಿ ಸಹಕರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ದಯಾಮಣಿ. ಕೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.