
2023-24 ನೇ ಸಾಲಿನ ಚಿಣ್ಣರ ವನ ದರ್ಶನ ಕಾರ್ಯಕ್ರಮವನ್ನು ಸಂಪಾಜೆ ವಲಯದ ವತಿಯಿಂದ ಡಿ.12ರಂದು ಆಯೋಜಿಸಲಾಯಿತು. ನಾಗರಹೊಳೆ, ಹಾರಂಗಿ ಹಿನ್ನೀರು, ಮಡಿಕೇರಿ ರಾಜಶೀಟ್ ಮುಂತಾದ ಸ್ಥಳಗಳಿಗೆ ಪೆರಾಜೆ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪೆರಾಜೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಪೆರಾಜೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆ ಪೆರಾಜೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಮೆಚೂರ್ ಪೆರಾಜೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಡಿ ಪೆರಾಜೆ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭೇಟಿ ನೀಡಿದರು. ವಲಯ ಅರಣ್ಯಾಧಿಕಾರಿಗಳಾದ ಡೆನ್ಸಿ ದೇಚಮ್ಮ ರವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ವಿಜೇಂದ್ರ ಕುಮಾರ್ ಎಂ. ಗಸ್ತು ಅರಣ್ಯ ಪಾಲಕರಾದ ಜನಾರ್ಧನ, ಪುನೀತ್, ನಾಗರಾಜ್ ಮತ್ತು ಸಿಬ್ಬಂದಿಗಳು ಸಹಕಾರ ನೀಡಿದರು.