Ad Widget

ಮರ್ಕಂಜ; ಚಿರತೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಆತಂಕ!!


ಮರ್ಕಂಜ ಗ್ರಾಮದ ಕಟ್ಟಕೋಡಿ, ಚೀಮಾಡು ಜನಬಿಡಿ ಪ್ರದೇಶಗಳಲ್ಲಿ ಕಳೆದ ವಾರದಿಂದ ಚಿರತೆಯೂ ಓಡಾಡುತ್ತಿದ್ದು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ.

ಚೀಮಾಡಿನಲ್ಲಿರುವ ಗಿರೀಶ ಕುದ್ಕುಳಿ ರವರ ಮನೆಯ ಪಕ್ಕದ ದನದ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಚಿರತೆ ಹೊತ್ತೊಯ್ದ ಘಟನೆ ಡಿ.5 ರಂದು ರಾತ್ರಿ ನಡೆದಿದೆ. ಹಾಗೂ ಅಡ್ತಲೆ ಸಮೀಪದ ಗಿರೀಶ್ ರವರ ನಾಯಿಯನ್ನು ಎಳೆದೊಯ್ಯಲು ಪ್ರಯತ್ನಿಸಿದ ಎಂದು ತಿಳಿದು ಬಂದಿದೆ.


ಡಿ.12 ರಂದು ಮುಂಜಾನೆ ಕಟ್ಟಕೋ ಡಿ ಚಂದ್ರಶೇಖರ ಎಂಬವರ ರಬ್ಬರ್ ತೋಟದಲ್ಲಿ ಚಿರತೆಯು ಕಾಣ ಸಿಕ್ಕಿದೆ. ಹಾಗಾಗಿ ಕಟ್ಟಕೋಡಿ, ಚೀಮಾಡಿನ ಸುತ್ತಮುತ್ತಲು ಚಿರತೆ ಹಿಡಿಯಲು ಅರಣ್ಯ ಇಲಾಖೆ ಕ್ರಮವಹಿಸಿ ಜನರಲ್ಲಿ ಕಾಡುತ್ತಿರುವ ಭಯವನ್ನು ದೂರ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading