
ಗುತ್ತಿಗಾರಿನ ಬ್ಲೆಸ್ಡ್ ಕುರಿಯಾಕೋಸ್ ಪ್ರೌಢಶಾಲೆಯಲ್ಲಿ ಡಿ.16 ರಂದು ಸಂಜೆ 21 ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ. ಸಿಎಂಸಿ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ಅಧ್ಯಕ್ಷರಾದ ಮೆರ್ಲಿನ್ ಸಿಎಂಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ ಮೂಕಮಲೆ, ಗುತ್ತಿಗಾರು ಸೈಂಟ್ ಮೇರಿಸ್ ಚರ್ಚ್ ಇದರ ರೆ.ಫಾ. ಆದರ್ಶ ಜೋಸೆಫ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ., ಪಿಟಿಎ ಕಮಿಟಿ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ್, ಶೈಕ್ಷಣಿಕ ಕೌನ್ಸಿಲರ್ ಪ್ರೆಸಿರೋಸ್ ಸಿಎಂಸಿ, ಪ
ಸ್ಥಳೀಯ ವ್ಯವಸ್ಥಾಪಕ ಪವನ ಸಿಎಂಸಿ, ಪಿಟಿಎ ಅಧ್ಯಕ್ಷ ಲಿಜೋ ಜೋಸ್ ಉಪಸ್ಥಿತರಿರಲಿದ್ದಾರೆ.