- Thursday
- November 21st, 2024
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಸುಳ್ಯದ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನೆ ಮಾಡಿ ಸರಕಾರದ ಗಮನ ಸೆಳೆದಿದ್ದಾರೆ. ಈ ಭಾಗದಲ್ಲಿ ಅಡಿಕೆ ಕೃಷಿಗೆ ಹಳದಿರೋಗ ಭಾದೆಯಿಂದ ಕೃಷಿಕರು ಕಂಗಾಲಾಗಿದ್ದು ಈ ಬಗ್ಗೆ ಸೂಕ್ತ ಕ್ರಮಕ್ಕೆ ಕೈಗೊಳ್ಳಲು ಮನವಿ ಮಾಡಿದ್ದಾರೆ.
ರಾಜ್ಯಾದ್ಯಂತ ಇದೀಗ ಚುನಾವಣಾ ಆಯೋಗವು ಚುನಾವಣಾ ಗುರುತಿನ ಚೀಟಿಯಲ್ಲಿ ಡಬಲ್ ಎಂಟ್ರಿ ಹಾಗೂ ಶೇಕಡವಾರು ಕಡಿಮೆ ಮತದಾನ ಆಗುತ್ತಿರುವ ಹಿನ್ನಲೆಯಲ್ಲಿ ಇದೀಗ ಮೇಜರ್ ಸರ್ಜರಿಗೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಈ ರೀತಿಯ ಕೆಲವೊಂದು ಪ್ರಕರಣಗಳು ಕಂಡು ಬರುತ್ತಿವೆ. ಇದಕ್ಕೆ ಕಾರಣಗಳು ಏನು ಗೊತ್ತೆ ಇಲ್ಲಿದೆ ಸಂಪೂರ್ಣ ಮಾಹಿತಿ. ಸುಳ್ಯದ ವ್ಯಕ್ತಿಯನ್ನು ಹೋಲುವ ಗುರುತಿನ ಚೀಟಿಯು ಜಮ್ಮುವಿನಲ್ಲಿ...
ಜಮ್ಮು ಕಾಶ್ಮೀರಕ್ಕೆ ಒಮ್ಮೆಯೋ ಕಾಲಿರಿಸದ ಸುಳ್ಯದ ವ್ಯಕ್ತಿಯೊಬ್ಬರ ದಾಖಲೆ ಬಳಸಿ ಜಮ್ಮು ಕಾಶ್ಮೀರದಲ್ಲಿ ನಕಲಿ ದಾಖಲೆ. ಹೌದು ಸುಳ್ಯದ ನಗರದ ಕುರುಂಜಿಗುಡ್ಡೆ ನಿವಾಸಿಯೊಬ್ಬರ ಹೆಸರಿನಲ್ಲಿ ಜಮ್ಮು ಕಾಶ್ಮೀರದಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಮತ್ತೊಂದು ಓಟರ್ ಐಡಿ ಪಡೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸುಳ್ಯ ಕುರುಂಜಿಭಾಗ್ ನಿವಾಸಿ ಸಂತೋಷ್ ನಾಯರ್ ಎನ್ನುವವರ ಓಟರ್ ಐಡಿ ಬಳಸಿ, ತದ್ರೂಪ್...
ಗುತ್ತಿಗಾರಿನ ಬ್ಲೆಸ್ಡ್ ಕುರಿಯಾಕೋಸ್ ಪ್ರೌಢಶಾಲೆಯಲ್ಲಿ ಡಿ.16 ರಂದು ಸಂಜೆ 21 ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ. ಸಿಎಂಸಿ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ಅಧ್ಯಕ್ಷರಾದ ಮೆರ್ಲಿನ್ ಸಿಎಂಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ ಮೂಕಮಲೆ, ಗುತ್ತಿಗಾರು ಸೈಂಟ್ ಮೇರಿಸ್ ಚರ್ಚ್...
ಇಮೇಜ್ ಕಂಸಲ್ವೆಂಟ್ ಆಯೋಜಿಸಿದ್ದ ಮಿಸ್ಟರ್, ಮಿಸ್ ಹಾಗೂ ಮಿಸಸ್ ಕರ್ನಾಟಕ ಸ್ಪರ್ಧೆಯ ಕರ್ನಾಟಕ ಸ್ಟೈಲ್ ಐಕಾನ್ -2023 ರಲ್ಲಿ ಮಂಗಳೂರಿನ ಅನನ್ಯ ಶೆಟ್ಟಿ ಅವರು ಬೆಸ್ಟ್ ಐಸ್ ಆಫ್ ಕರ್ನಾಟಕ ಟೈಟಲ್ ಮುಡಿಗೇರಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಅನನ್ಯ ಶೆಟ್ಟಿ ಅವರು ಮಂಗಳೂರಿನ ಅಡ್ಯಾರಿನವರು. ಇವರು ಮಂಗಳೂರು ನಗರದ ಪ್ರತಿಷ್ಠಿತ ಬಂಟ್ಸ್ ಹಾಸ್ಟೆಲ್ ಶಾಲೆ ಹಾಗೂ ಕಾಲೇಜಿನಲ್ಲಿ...
ಕು. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿತನನ್ನು ನ್ಯಾಯಾಲಯವು ನಿರ್ದೋಷಿ ಎಂದು ತೀರ್ಪಿನ ಬಳಿಕ ಮತ್ತೆ ಕರಾವಳಿ ಜಿಲ್ಲೆಗಳಾದಿಯಾಗಿ ರಾಜ್ಯ ಹಾಗೂ ದೇಶದ ನಾನ ಕಡೆಗಳಲ್ಲಿ ಪ್ರತಿಭಟನಾ ಸಭೆ, ಬ್ಯಾನರ್ ಗಳು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತ್ಯಕ್ಷವಾಗುತ್ತಿದ್ದು ಇದೀಗ ಇದೇ ಮಾದರಿಯಲ್ಲಿ ಸುಳ್ಯ ತಾಲೂಕಿನ ನಾನಾ ಕಡೆಗಳಲ್ಲಿ ಇಂತಹ ಬ್ಯಾನರ್ ಗಳು ಕಂಡು ಬರುತ್ತಿದ್ದು ಅವುಗಳಲ್ಲಿ...