ಗ್ರಾಮ ಪಂಚಾಯತ್ ದೇವಚಳ್ಳ, ಲಯನ್ಸ್ ಕ್ಲಬ್ ಸುಳ್ಯ, ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು, ಆರೋಗ್ಯ ಉಪ ಕೇಂದ್ರ ಎಲಿಮಲೆ ಮತ್ತು ಕಂದ್ರಪ್ಪಾಡಿ, ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ, ಅಮರ ಸಂಘಟನಾ ಸಮಿತಿ(ರಿ.) ಸುಳ್ಯ, ಗ್ರಾಮ ಒನ್ ಮಾವಿನಕಟ್ಟೆ, ಭಾರತೀಯ ಅಂಚೆ ಇಲಾಖೆ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಡಿ.10 ಆದಿತ್ಯವಾರದಂದು ಬೆಳಿಗ್ಗೆ 9:00 ರಿಂದ ಮದ್ಯಾಹ್ನ 1:00 ಗಂಟೆಯವರೆಗೆ ದೇವಚಳ್ಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ನೋಂದಣಿ ಕಾರ್ಯಕ್ರಮ, ಬಯೋಮೆಟ್ರಿಕ್ ನೋಂದಣಿ, ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ 10 ವರ್ಷಗಳ ಹಿಂದಿನ ಆಧಾರ್ ಕಾರ್ಡ್ ನವೀಕರಣ, ಹೊಸ ನೋಂದಣಿ, ವಿಳಾಸ ಬದಲಾವಣೆ, ಹೆಸರು ಬದಲಾವಣೆ, ಜನನ ದಿನಾಂಕ ಬದಲಾವಣೆ, ಮೊಬೈಲ್ ನಂಬರ್ ಬದಲಾವಣೆ ಹಾಗೂ 5 ವರ್ಷ & 15 ವರ್ಷ ಪೂರ್ಣಗೊಳಿಸಿದ ಮಕ್ಕಳ ಬಯೋಮೆಟ್ರಿಕ್ ನೋಂದಣಿ ಹಾಗೂ ಪರಿಷ್ಕರಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
• 10 ವರ್ಷಗಳ ಹಿಂದಿನ ಆಧಾರ್ ಕಾರ್ಡ್ ನವೀಕರಣಕ್ಕಾಗಿ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪಾಸ್ ಪೋರ್ಟ್ ತರತಕ್ಕದ್ದು.
• ಹೊಸ ನೋಂದಣಿಗಾಗಿ ಹೆಸರು ಮತ್ತು ಜನ್ಮದಿನಾಂಕಕ್ಕೆ ದಾಖಲೆ, ವಿಳಾಸ ದಾಖಲೆ, ಪಂಚಾಯತ್ ವಿಳಾಸ ದೃಢೀಕರಣ ಪತ್ರ, ಪಡಿತರ ಚೀಟಿ, ಮಹಾನಗರ ಪಾಲಿಕೆ ವಿಳಾಸ, ದೃಢೀಕರಣ ಪತ್ರ, ತಹಶೀಲ್ದಾರ್ ಅಥವಾ ಗೆಜೆಟೆಡ್ ಆಫೀಸರ್ ಸರ್ಟಿಫಿಕೇಟ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್ ತರತಕ್ಕದ್ದು.
• ಹೆಸರು ಬದಲಾವಣೆಗಾಗಿ ಜನನ ಪ್ರಮಾಣ ಪತ್ರ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್, ಎಸ್.ಎಸ್.ಎಲ್.ಸಿ ಅಂಕಪಟ್ಟಿ ತರತಕ್ಕದ್ದು.
• ಜನನ ದಿನಾಂಕ ಬದಲಾವಣೆಗಾಗಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಜನನ ಪ್ರಮಾಣ ಪತ್ರ, ಪಾಸ್ ಪೋರ್ಟ್ ತರತಕ್ಕದ್ದು.
• 5 ಹಾಗೂ 15 ವರ್ಷ ಪೂರ್ಣಗೊಳಿಸಿದ ಮಕ್ಕಳ ಕಡ್ಡಾಯ ಬಯೋಮೆಟ್ರಿಕ್ ನೋಂದಣಿ ಹಾಗೂ ಬಯೋಮೆಟ್ರಿಕ್ ಪರಿಷ್ಕರಣೆಗಾಗಿ ಈಗಾಗಲೇ ಹೊಂದಿರುವ ಆಧಾರ್ ಕಾರ್ಡ್ ನ ಮೂಲ ಪ್ರತಿ ತರತಕ್ಕದ್ದು.
• ಮೊಬೈಲ್ ನಂಬರ್ ತಿದ್ದುಪಡಿಗಾಗಿ ಈಗಾಗಲೇ ಹೊಂದಿರುವ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಫೋನ್ ತರತಕ್ಕದ್ದು ಎಂದು ತಿಳಿಸಲಾಗಿದ್ದು, ಒದಗಿಸಬೇಕಾದ ಎಲ್ಲಾ ದಾಖಲೆಗಳ ಮೂಲ ಪ್ರತಿಯನ್ನು ಪರಿಶೀಲನೆಗಾಗಿ ತರತಕ್ಕದ್ದು. ಸೇವೆಯನ್ನು ಪಡೆಯಲು ಇಚ್ಛಿಸುವವರು ಬೆಳಿಗ್ಗೆ 9:30 ಕ್ಕೆ ಸರಿಯಾಗಿ ಟೋಕನ್ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.