
ಕಾರು ಹಾಗೂ ಲಾರಿ ಮಧ್ಯೆ ಪರಸ್ಪರ ಅಪಘಾತ ಸಂಭವಿಸಿ, ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ದ.ಕ. ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಡಿ.6ರಂದು ಸಂಜೆ ಸಂಭವಿಸಿದೆ. ಕಲ್ಲುಗುಂಡಿಯ ಶಿವಪ್ಪ ಬೊಳುಗಲ್ಲು ಎಂಬವರು ತನ್ನ ಕಾರಿನಲ್ಲಿ ಸಂಪಾಜೆಯಿಂದ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಗೂನಡ್ಕದಲ್ಲಿ ಕಾರಿಗೆ ಲಾರಿ ಢಿಕ್ಕಿ ಹೊಡೆದಿದ್ದು, ಚಾಲಕ ಶಿವಪ್ಪ ಅವರು ಗಾಯಗೊಂಡರೆನ್ನಲಾಗಿದೆ.
ತಕ್ಷಣ ಅವರನ್ನು ಸ್ಥಳೀಯರು ಅವರನ್ನು ಕಾರಿನಿಂದ ಹೊರಗೆಳೆದು ಸುಳ್ಯ ಆಸ್ಪತ್ರೆಗೆ ಕರೆತಂದು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ ಕೆ ಹಮೀದ್ ತಿಳಿಸಿದ್ದಾರೆ.