Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರೋತ್ಸವಕ್ಕೆ ಭರದ ಸಿದ್ಧತೆ : ಡಿ.12 ರಂದು ಲಕ್ಷದೀಪೋತ್ಸವ ಲಕ್ಷ ಹಣತೆಗಳ ಸಾಲು – ಡಿ.18 ರಂದು ಚಂಪಾಷಷ್ಠಿ ಮಹಾರಥೋತ್ಸವ

ಸುಬ್ರಹ್ಮಣ್ಯ, ಡಿ.5: ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಚಂಪಾ ಷಷ್ಟಿ ಮಹೋತ್ಸವ ದಿನಾಂಕ 9/12/2023 ರಂದು ಶನಿವಾರ ಮೂಲಮೃತಿಕ ಪ್ರಸಾದ ತೆಗೆದು ವಿತರಣೆ ಆಗುವುದರೊಂದಿಗೆ ಆರಂಭವಾಗಿ ದಿನಾಂಕ. 24/12/2023 ರಂದು ಕೊಪ್ಪರಿಗೆ ತಿಳಿಯುವ ಮೂಲಕ ರಾತ್ರಿ ನೀರು ಬಂಡಿ ಉತ್ಸವ ಹಾಗೂ ದೈವಗಳ ನಡಾವಳಿ ನಡೆದು ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಬಾರಿ ಜಾತ್ರೋತ್ಸವಕ್ಕೆ ಕರೆ ಕಾಣಿಕೆ ಸಲ್ಲಿಸುವ ಬಗ್ಗೆ ಸುಳ್ಯ ಪುತ್ತೂರು ಹಾಗೂ ಕಡಬ ತಾಲೂಕಿನ ಹೆಚ್ಚಿನಲ್ಲ ದೇವಸ್ಥಾನಗಳಿಗೆ ಸುತ್ತೋಲೆ ಕಳಿಸಿದ್ದೇವೆ ಹಾಗೂ ಹೊರೆ ಕಾಣಿಕೆ ತರುವ ದಿನ ಕೂಡ ನಿಗದಿಪಡಿಸಲಾಗಿದೆ ಅಲ್ಲದೆ ಸ್ಥಳೀಯ ಸಾರ್ವಜನಿಕರಿಗೆ ಕೂಡ ಹೊರೆ ಕಾಣಿಕೆ ಸಮರ್ಪಿಸಲು ಕಾಣಿಕೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಈ ಬಾರಿ ಜಾತ್ರೆಯೋತ್ಸವದಲ್ಲಿ ಸೇವೆ ಸಲ್ಲಿಸಲು ಸ್ಥಳೀಯ ಶಾಲಾ ಕಾಲೇಜುಗಳಲ್ಲದೆ 1035 ಸ್ವಯಂಸೇವಕರ ಅರ್ಜಿ ಕೂಡ ಬಂದಿರುತ್ತದೆ. ಎಲ್ಲೆಲ್ಲಿ ಸ್ವಯಂಸೇವಕರನ್ನ ನಿಯೋಜನೆ ಮಾಡಬೇಕೆಂದು ಪರಿಶೀಲಿಸಿ ಅವಕಾಶವನ್ನು ನೀಡಲಾಗುವುದು. ಈ ಬಾರಿ ಹಸಿರು ಪಟಾಕಿ ಸಿಡಿಮದನ್ನೇ ಬಳಸಲಾಗುವುದೆಂದು ಜಿಲ್ಲಾಧಿಕಾರಿಯವರು ಈ ಬಗ್ಗೆ ಈ ಹಿಂದೆ ತಿಳಿಸಿರುತ್ತಾರೆ ಅದೇ ರೀತಿ ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ. ಈ ಸಲ ಲಕ್ಷ ದೀಪೋತ್ಸವದಂದು ಒಂದು ಲಕ್ಷ ಹಣತೆಗಳನ್ನು ಉರಿಸುವ ಬಗ್ಗೆ ಸಿದ್ಧತೆಗಳು ನಡೀತಾ ಇದೆ ,ಅಲ್ಲದೆ ಆ ದಿನ ಕುಣಿತ ಭಜನೆ ಕೂಡ ನಡೆಯುತ್ತದೆ. ಈಗಾಗಲೇ 139 ತಂಡಗಳು ಭಾಗವಹಿಸುವುದಾಗಿ ತಮ್ಮ ಹೆಸರನ್ನು ನೋಂದಾಯಿಸ್ತಿರುತ್ತವೆ. ನಮ್ಮ ಯೋಜನೆ ಸುಮಾರು200 ತಂಡಗಳು ಬರಬಹುದೆಂದು . ಎಲ್ಲಾ ತಂಡಗಳಿಗೂ ಅವಕಾಶ ಕಲ್ಪಿಸಲಾಗುವುದು ಇಂದು ಅವರು ತಿಳಿಸಿದರು. ಈ ಬಾರಿ ವಾಹನ ಪಾರ್ಕಿಂಗ್ ಬಗ್ಗೆ ವ್ಯವಸ್ಥಿತವಾಗಿ ಮಾಡಬೇಕೆಂದು ನಮ್ಮ ಆಲೋಚನೆ ಇದೆ ಆ ಬಗ್ಗೆ ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆಯ ಉಪನಿರೀಕ್ಷಕರನ್ನು ಕೂಡ ಮಾತನಾಡಿಸಿದ್ದೇವೆ. ಎಲ್ಲೆಲ್ಲಿ ಘನ ವಾಹನಗಳು ಲಘುವಾನಗಳು ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಬೇಕೆಂದು ಅವರು ನಿರ್ಧರಿಸಿ ಕ್ರಮ ಕೈಗೊಳ್ಳಲಿರುವರು. ಅಲ್ಲದೆ ಅಲ್ಲಲ್ಲಿ ಫ್ಲೇಕ್ಸ್ ಗಳನ್ನ ಹಾಕಿ ಮಾಹಿತಿಗಳನ್ನ ನೀಡುವ ಬಗ್ಗೆ ಕೂಡ ಕ್ರಮ ವಹಿಸಲಾಗುವುದು ಎಲ್ಲೆಲ್ಲಿ ಲಾಡ್ಜಿಂಗ್ ವ್ಯವಸ್ಥೆ ಇದೆ ಸೌಚಾಲಯ ವ್ಯವಸ್ಥೆ ವಸತಿಗೃಹ ದ ಬಗ್ಗೆ ಅಲ್ಲಲ್ಲಿ ಫ್ಲೆಕ್ಸ್ ಮೂಲಕ ಮಾಹಿತಿ ನೀಡಲಾಗುವುದು ಎಂದವರು ತಿಳಿಸಿದರು. ಪಂಚಮಿ ದಿನದಂದು ನಾಲ್ಕು ಚಕ್ರದ ವಾಹನಗಳು ಕುಮಾರದಾರ ದ್ವಾರದಿಂದ ಮುಂದೆ ಬರಬೇಕಾದರೆ ಪಾಸುಗಳನ್ನು ತೋರಿಸಬೇಕಾಗುತ್ತದೆ. ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ ಹಾಗೂ ಆರೋಗ್ಯ ಚಿಕಿತ್ಸಾ ವ್ಯವಸ್ಥೆಯನ್ನು 24 ಗಂಟೆಯೂ ಸೇವೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಹಾಗೆಯೇ ಎಲ್ಲರ ಸಹಕಾರದಿಂದ ಈ ಬಾರಿಯ ಜಾತ್ರೋತ್ಸವವು ಯಶಸ್ವಿಯಾಗಿ ನಡೆಯಲಿ ಎಂದು ಅವರು ವಿನಂತಿಸಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ಪ್ರಸನ್ನ ದರ್ಬೆ ,ವನಜ ವಿ ಭಟ್, ಶೋಭಾ ಗಿರಿಧರ್ ಹಾಗೂ ಲೋಕೇಶ್ ಮುಂಡೋಕಜೆ ಉಪಸ್ಥಿತರಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!