Ad Widget

ಸುಬ್ರಹ್ಮಣ್ಯದಲ್ಲಿ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

. . . . .

ಸುಬ್ರಹ್ಮಣ್ಯ, ಡಿ 3: ಕುಕ್ಕೆ ಫ್ರೆಂಡ್ಸ್ ಸುಬ್ರಹ್ಮಣ್ಯ ಹಾಗೂ ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಆಹ್ವಾನಿತ ಆರು ತಂಡಗಳ ಲೀಗ್ ಮಾದರಿಯ ಹೊನ್ನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಟವು ಶನಿವಾರ ಕಾಶಿ ಕಟ್ಟೆ ಬಳಿಯ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು.

ವಾಲಿಬಾಲ್ ಪಂದ್ಯಾಟದ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಫ್ರೆಂಡ್ಸ್ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಭವಿಷ್ಯ ವಹಿಸಿದ್ದರು. ಪಂದ್ಯಾಟದ ಉದ್ಘಾಟನೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀ ವತ್ಸ ಅವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಅವರು ಮಾತನಾಡಿ ಗ್ರಾಮೀಣ ಪ್ರದೇಶದ ಸುಬ್ರಹ್ಮಣ್ಯದಲ್ಲಿ ಯುವಕರು ಸಂಘಟಿಸಿ ನಡೆಸ್ತಕಂತ ಈ ವಾಲಿಬಾಲ್ ಪಂದ್ಯಾಟ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕಡಬ ತಾಲೂಕ್, ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ರಾವ್ ರಾಮಕುಂಜ ಮಾತನಾಡಿ ಗ್ರಾಮೀಣ ಕ್ರೀಡೆ ಅದರಲ್ಲೂ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶವನ್ನು ನೀಡುವಂತಹ ವಾಲಿಬಾಲ್ ಪಂದ್ಯಾಟ ಇಲ್ಲಿಯ ಯುವಕರ ಸಂಘಟಿತ ಪ್ರಯತ್ನ. ಇಲ್ಲಿಯೇ ಇರತಕ್ಕಂಥ ಆಸುಪಾಸಿನ ತಂಡಗಳನ್ನ ರಚಿಸಿ ಲೀಗ್ ಮಾದರಿಯ ಮ್ಯಾಚ್ ಮಾಡತಕ್ಕದ್ದು ಶ್ಲಾಘನೀಯ ಎಂದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್ಎಲ್ ವೆಂಕಟೇಶ್, ತಾಲೂಕು ಪಂಚಾಯತ್ ನಿಕಟ ಪೂರ್ವ ಸದಸ್ಯ ಅಶೋಕ್ ನೇ ಕ್ರಾಜೆ, ಉದ್ಯಮಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಹಿಂಜಾಡಿ ,ಸಮಾಜ ಸೇವಕರಾದ ಡಾl ರವಿ ಕಕ್ಕೆ ಪದವು ,ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮುಖ್ಯೋಪಾಧ್ಯಾಯ ಮಾಧವ ಎಂ ಉಪಸ್ಥಿತರಿದ್ದು ಪಂದ್ಯಾಟಕ್ಕೆ ಶುಭವನ್ನ ಹಾರೈಸಿರುವರು .ಇದೇ ಸಂದರ್ಭದಲ್ಲಿ ಎಸ್ ಎಸ್ ಪಿ ಯು ಸಿ ಕಾಲೇಜಿನ ವಿದ್ಯಾರ್ಥಿನಿ ಗುಡ್ಡಗಾಡು ಓಟದಲ್ಲಿ ಎರಡನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶ್ರದ್ಧ ಅವರನ್ನು ಸನ್ಮಾನಿಸಲಾಯಿತು. ಲೀಗ್ ಮಾದರಿಯ ಪಂದ್ಯಾಟದಲ್ಲಿ ಉಮೇಶ ಕೆಎನ್ ಮಾಲಕತ್ವದ ಪ್ರಶಾಂತ ಸ್ಪೋರ್ಟ್ಸ್ ಕ್ಲಬ್, ಸುಬ್ರಹ್ಮಣ್ಯ ಜೀವನ್ ಮಾಲಕತ್ವದ ತತ್ವಿಕ ಫ್ರೆಂಡ್ಸ್ ಸುಬ್ರಹ್ಮಣ್ಯ, ಆಕಾಶ್ ಮಾಲಕತ್ವದ ಬೆಳ್ಳಿ ಫ್ರೆಂಡ್ಸ್ ಸುಬ್ರಹ್ಮಣ್ಯ ,ವಿಜಯಕುಮಾರ್ ಸೊರಕೆ ಮಾಲಕತ್ವದ ಮಂಗಳ ಬಾರ್ ಅಂಡ್ ರೆಸ್ಟೋರೆಂಟ್ ಹರಿಹರ ಪಳ್ಳೆತಡ್ಕ , ಯೋಗೀಶ್ ಮಾಲಕತ್ವದ ಪ್ರಕೃತಿ ವಾರಿಯರ್ಸ್ ಹರಿಹರ ಪಳ್ಳತಡ್ಕ ಹಾಗೂ ಉದಯ ಶಂಕರ ಭಟ್ ಮಾಲಕತ್ತದ ಶ್ರೀ ರಕ್ಷಾ ಸುಬ್ರಹ್ಮಣ್ಯ ತಂಡಗಳು ಭಾಗವಹಿಸಿದ್ದವು. ಕುಕ್ಕೆ ಫ್ರೆಂಡ್ಸ್ ಸುಬ್ರಹ್ಮಣ್ಯ ಇದರ ಕಾರ್ಯದರ್ಶಿ ರಶಿನ್ ಸುಬ್ರಮಣ್ಯ ಸ್ವಾಗತಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಶ್ರಾಂತ ಉಪನ್ಯಾಸಕ ವಿಶ್ವನಾಥ ನಡು ತೋಟ ನಿರೂಪಿಸಿ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!