
ಸುಳ್ಯದ ಗ್ಯಾರೇಜ್ ನಲ್ಲಿ ಕೇರಳ ಮೂಲದ ಉದ್ಯೋಗಿ ಕುಸಿದು ಬಿದ್ದು ಸಾವನನಪ್ಪಿದ ಘಟನೆ, ಸುಳ್ಯದ ಮೆಸ್ಕಾಂ ಕಚೇರಿಯ ಎದುರುಗಡೆ ಇರುವ ಭಗವತಿ ಗ್ಯಾರೇಜ್ ನಲ್ಲಿ ನಡೆಯಿತು.
ಕೇರಳದ ಕೊಲ್ಲಂ ನಿವಾಸಿ ಮಣಿ ಎಂಬವರು ತಾನು ಕೆಲಸ ಮಾಡುತ್ತಿದ್ದ ಗ್ಯಾರೇಜ್ ನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಗ್ಯಾರೇಜ್ ನಲ್ಲಿ ಆರು ತಿಂಗಳ ಹಿಂದೆ ಪೈಂಟಿಂಗ್ ಕೆಲಸಕ್ಕೆ ಸೇರಿದ್ದರು. ಡಿ.3 ರಂದು ರಾತ್ರಿ ಕೆಲಸ ಮುಗಿಸಿ ಗ್ಯಾರೇಜ್ ನಲ್ಲಿ ಕುಳಿತಿರುವಾಗ ಸಡನ್ನಾಗಿ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. ಅವರ ಮೃತದೇಹ ಸುಳ್ಯ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಕೊಲ್ಲಂ ನಿಂದ ಅವರ ಮನೆಯವರು ಬಂದು ಮೃತದೇಹವನ್ನು ಕೊಲ್ಲಂ ಗೆ ಸಾಗಿಸಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.