ಹೃದಯರಕ್ತನಾಳದ ಕಾಯಿಲೆ, ವಿಶೇಷವಾಗಿ ಹೃದಯಾಘಾತವು ವಿಶ್ವದಲ್ಲೇ ಅತ್ಯಂತ ಮಾರಣಾಂತಿಕ ಕಾಯಿಲೆ ಎನಿಸಿಕೊಂಡಿದೆ. ಭಾರತೀಯರಲ್ಲಿ ಪಾಶ್ಚಿಮಾತ್ಯರಿಗಿಂತ ಸುಮಾರು 10 ರಿಂದ 15 ವರ್ಷಗಳಷ್ಟು ಮುಂಚೆಯೇ ಹೃದಯಾಘಾತ ಅಭಿವೃದ್ಧಿಗೊಳ್ಳುವ ಅಪಾಯ ಹೆಚ್ಚಿದೆ. ಈಗಿನ ಅಂಕಿಅಂಶಗಳ ಪ್ರಕಾರ 4೦ ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾದವರ ಪ್ರಮಾಣ ಶೇ 4೦ ರಷ್ಟಿದೆ.
ಹೃದಯಾಘಾತವು ಜೀವನಶೈಲಿಯಿಂದ ಉಂಟಾಗುತ್ತಿರುವ ಕಾಯಿಲೆಯಾಗಿದೆ. ಮುಖ್ಯವಾಗಿ ಹೃದಯ ಸ್ನಾಯುಗಳಿಗೆ ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುವುದರಿಂದ ಹೃದಯಾಘಾತ ಸಂಭವಿಸುತ್ತದೆ. ಕೊಬ್ಬಿನ ಶೇಖರಣೆಯ ಈ ಪ್ರಕ್ರಿಯೆಯು ನಮಗೆ 20 ವರ್ಷಗಳಾದ ಬಳಿಕ ಪ್ರಾರಂಭವಾಗುತ್ತದೆ ಮತ್ತು ಈ ಪ್ರಕ್ರಿಯೆಯು ಮುಂದುವರಿಯುತ್ತದೆಯೋ ಅಥವಾ ಕಡಿಮೆಯಾಗುತ್ತದೆಯೋ ಎಂಬುದು ನಮ್ಮ ಜೀವನಶೈಲಿ ಮತ್ತು ನಾವು ಸೇವಿಸುವ ಅಪಾಯಕಾರಿ ಅಂಶಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ ಹೃದಯಾಘಾತವನ್ನು ತಡೆಗಟ್ಟುವ ಕ್ರಮಗಳು ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭವಾಗಬೇಕು. ಅದಕ್ಕೆ ಗಮರ್ನಹವಾದ ಜೀವನಶೈಲಿ ಬದಲಾವಣೆಗಳು ಮತ್ತು ಜಾಗೃತಿಯ ಅಗತ್ಯವಿರುತ್ತದೆ.
ಹೃದಯರಕ್ತನಾಳದ ಕಾಯಿಲೆಗೆ ಕಾರಣವಾಗುವ ಪ್ರಮುಖ ಅಪಾಯಕಾರಿ ಅಂಶಗಳನ್ನು ಮಾರ್ಪಾಡಿಸಬಹುದು ಮತ್ತು ಮಾರ್ಪಾಡಿಸಲಾಗದ ಎಂದು ವರ್ಗೀಕರಿಸಲಾಗಿದೆ. ಮಾರ್ಪಾಡಿಸಲಾಗದ ಅಪಾಯಕಾರಿ ಅಂಶಗಳೆಂದರೆ ವಯಸ್ಸು, ಲಿಂಗ, ಆನುವಂಶೀಯ ಗುಣಗಳು ಅಥವಾ ಕುಟುಂಬದ ಇತಿಹಾಸ. ಮಾರ್ಪಾಡಿಸಬಹುದು ಅಪಾಯಕಾರಿ ಅಂಶಗಳಲ್ಲಿ ಅಧಿಕ ರಕ್ತದೊತ್ತಡ, ಡಯಾಬಿಟಿಸ್ ಮೆಲ್ಲಿಟಸ್ ಸಿಗರೇಟ್ ಸೇವನೆ, ಅಧಿಕ ಕೊಲೆಸ್ಟ್ರಾಲ್, ಬೊಜ್ಜು, ಜಡ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಸೇರಿವೆ.
ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ನಾರಿನಾಂಶ ಹೆಚ್ಚಿರುವ ಮತ್ತು ಕಡಿಮೆ ಕೊಬ್ಬನ್ನು ಒಳಗೊಂಡಿರುವ ಆಹಾರಗಳು, ತರಕಾರಿಗಳು ಮತ್ತು ಹಣ್ಣುಗಳು, ಬೀನ್ಸ್, ಮೀನು, ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳು, ಧಾನ್ಯಗಳು, ಆಲಿವ್ ಎಣ್ಣೆಯಂತಹ ಆರೋಗ್ಯಕರ ಕೊಬ್ಬುಗಳು ನಮ್ಮ ದೈನಂದಿನ ಸೇವನೆಯ ಪ್ರಮುಖ ಭಾಗವಾಗಿರಬೇಕು. ನಾವು ಉಪ್ಪು, ಸಕ್ಕರೆ, ಆಲ್ಕೋಹಾಲ್, ಕೆಂಪು ಮಾಂಸ, ಪರ‍್ಣ ಕೊಬ್ಬಿನ ಹಾಲಿನ ಉತ್ಪನ್ನಗಳು ಮತ್ತು ಕರಿದ ಆಹಾರಗಳ ಸೇವನೆಯನ್ನು ಮಿತಿಗೊಳಿಸಬೇಕು. ಯುವಕರಲ್ಲಿ ಹೃದಯಾಘಾತಕ್ಕೆ ಪ್ರಮುಖ ಅಪಾಯಕಾರಿ ಅಂಶವೆಂದರೆ ಸಿಗರೇಟ್ ಸೇವನೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಅಪಧಮನಿಗಳಲ್ಲಿ ಕೊಬ್ಬಿನ ಶೇಖರಣೆಯನ್ನು ಉತ್ತೇಜಿಸುವ ಉರಿಯೂತವನ್ನು ಹೆಚ್ಚಿಸುತ್ತದೆ. ನಿಷ್ಕ್ರಿಯ ಧೂಮಪಾನ ಕೂಡ ಅಪಾಯಕಾರಿ.
ಹೃದಯಾಘಾತಕ್ಕೆ ತುತ್ತಾಗುವ ಹೆಚ್ಚಿನವರು ಧೂಮಪಾನಿಗಳಾಗಿರುತ್ತಾರೆ. ಧೂಮಪಾನ ತ್ಯಜಿಸಿದ ತಕ್ಷಣ ಹೃದ್ರೋಗದ ಅಪಾಯವು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ಧೂಮಪಾನವನ್ನು ತ್ಯಜಿಸಿದ ಒಂದು ರ‍್ಷದ ನಂತರ ಅದು 50% ಕಡಿಮೆಯಾಗುತ್ತದೆ. ದೈಹಿಕ ಚಟುವಟಿಕೆಯ ಕೊರತೆಯು ಮತ್ತೊಂದು ಅಪಾಯಕಾರಿ ಅಂಶವಾಗಿದೆ; ನಿಯಮಿತ ದೈಹಿಕ ಚಟುವಟಿಕೆಯು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಮರ‍್ಗಸೂಚಿಗಳ ಪ್ರಕಾರ ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮ ಮಾಡಬೇಕು. ಜಾಗಿಂಗ್, ಅಥವಾ ೭೫ ನಿಮಿಷಗಳ ತೀವ್ರವಾದ ಏರೋಬಿಕ್ ವ್ಯಾಯಾಮ ಮತ್ತು ಎರಡು ಅಥವಾ ಹೆಚ್ಚು ಅವಧಿಯ ಬಲ ರ‍್ಧನೆ ವ್ಯಾಯಾಮಗಳು ಸಹಕಾರಿ.
ನೀವು ಪ್ರಾರಂಭದಿಂದಲೇ ಹೃದಯದ ಆರೋಗ್ಯ ಕಾಳಜಿ ತೆಗೆದುಕೊಂಡು ದೈಹಿಕ ಚಟುವಟಿಕೆಗಳನ್ನು ಪ್ರಾರಂಭಿಸಿದರೆ, 40ವರ್ಷ ಗಳ ನಂತರ ಹೆಚ್ಚಿನ ತೀವ್ರತೆಯ ಚಟುವಟಿಕೆಗಳ ಅಗತ್ಯ ಬರುವುದಿಲ್ಲ. ಆರೋಗ್ಯಕರ ತೂಕ ಮತ್ತು ಬಿಎಂಐ(ಬಾಡಿ ಇಂಡೆಕ್ಸ್) ಅನ್ನು ಕಾಪಾಡಿಕೊಳ್ಳುವುದು ಅತ್ಯುತ್ತಮ ವಿಧಾನವಾಗಿದೆ. ಭಾರತೀಯರಿಗೆ 23 ಕ್ಕಿಂತ ಕಡಿಮೆ ಬಿಎಂಐ ಅನ್ನು ಶಿಫಾರಸು ಮಾಡಲಾಗಿದೆ. ಮಹಿಳೆಯರಿಗೆ ಸೊಂಟದ ಸುತ್ತಳತೆ 102 ಸೆಂ.ಮೀ ಮತ್ತು 89 ಸೆಂ.ಮೀ ಗಿಂತ ಕಡಿಮೆಯಿರುವಂತೆ ಹೊಟ್ಟೆಯ ಕೊಬ್ಬನ್ನು ಕರಗಿಸಲು ಶಿಫಾರಸು ಮಾಡಲಾಗಿದೆ.
ನಿದ್ರಾಹೀನತೆ, ನಿದ್ದೆಯ ಕಾಯಿಲೆಗಳು ಮುಂತಾದ ನಿದ್ರಾಹೀನತೆಗಳು ಹೃದ್ರೋಗ, ಬಿಪಿ, ಮಧುಮೇಹಕ್ಕೆ ಕಾರಣವಾಗುತ್ತವೆ. ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರೆ ಸಾಕು. ಮಾನಸಿಕ ಒತ್ತಡವನ್ನು ನರ‍್ವಹಿಸುವುದು ಬಹಳ ಮುಖ್ಯ, ಒತ್ತಡವು ಹೃದಯಕ್ಕೆ ಹಾನಿಕಾರಕವಾದ ಕರ‍್ಟಿಸೋಲ್ ಮತ್ತು ಇತರ ಹರ‍್ಮೋನುಗಳನ್ನು ಹೆಚ್ಚಿಸುತ್ತದೆ. ಯೋಗ, ವಿಶ್ರಾಂತಿ ವ್ಯಾಯಾಮಗಳು ಮತ್ತು ಧ್ಯಾನದಂತಹ ದೈಹಿಕ ಚಟುವಟಿಕೆಗಳು ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಮಧುಮೇಹ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ಗಾಗಿ ನಿಯಮಿತವಾದ ಆರೋಗ್ಯ ತಪಾಸಣೆಯು ಈ ಅಪಾಯಕಾರಿ ಅಂಶಗಳ ಆರಂಭಿಕ ರೋಗನರ‍್ಣಯ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಹೃದ್ರೋಗ ಕಾಣಿಸಿಕೊಂಡ ನಂತರ ಅದನ್ನು ಹೆಚ್ಚಾಗಿ ಬದಲಾಯಿಸಲಾಗದು ಆದರೆ ನಿಯಂತ್ರಿಸಬಹುದು. ಆದ್ದರಿಂದ ಹೃದ್ರೋಗದ ಬೆಳವಣಿಗೆಯನ್ನು ತಡೆಗಟ್ಟಲು ಮೇಲೆ ವಿವರಿಸಿದ ಕ್ರಮಗಳನ್ನು ಚಿಕ್ಕ ವಯಸ್ಸಿನಲ್ಲೇ ಪ್ರಾರಂಭಿಸಬೇಕು ಮತ್ತು ಇದು ನಿರಂತರ ಪ್ರಯತ್ನವಾಗಿರಬೇಕು. ಈ ಕ್ರಮಗಳು ಅಧಿಕ ರಕ್ತದೊತ್ತಡ, ಮಧುಮೇಹ, ಪರ‍್ಶ್ವವಾಯು ಮತ್ತು ಅನೇಕ ಮಾನಸಿಕ ಅಸ್ವಸ್ಥತೆಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಕಡಿಮೆ ಮಾಡುತ್ತವೆ.