
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಯಾಗಿರುವ ನಾವೂರು ನಿವಾಸಿ ಇಬ್ರಾಹಿಂ ಶಾ ನಾವೂರುನನ್ನು 15ನೇ ಆರೋಪಿಯಾಗಿ ಪೊಲೀಸರು ಬಂಧಿಸಿದ್ದರು. ಸುಳ್ಯದಲ್ಲಿ ಈತನ ತಂಗಿಯ ಮದುವೆ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳ ಜಾಮೀನು ದೊರೆತಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಈತ ಮೈಸೂರಿನ ಜೈಲಿನಲ್ಲಿದ್ದು ಜಾಮೀನು ಅವಧಿ ಮುಗಿದ ಬಳಿಕ ಮತ್ತೆ ಜೈಲು ಸೇರಬೇಕಿದೆ.2022 ಜುಲೈ 26ರಂದು ಬೆಳ್ಳಾರೆಯಲ್ಲಿ ತನ್ನ ಚಿಕನ್ ಶಾಪ್ ಎದುರೇ ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರ್‌ರವರನ್ನು ಕೊಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ ಐಎ (ರಾಷ್ಟ್ರೀಯ ತನಿಖಾ ದಳ) ಹಲವರನ್ನು ಬಂಧಿಸಿತ್ತು. ಈಗಲೂ ಕೆಲವು ಆರೋಪಿಗಳಿಗಾಗಿ ಎನ್ ಐಎ ಶೋಧ ನಡೆಸುತ್ತಿದೆ.