
ಕ್ರೈಸ್ತ ಅಲ್ಪಸಂಖ್ಯಾತರ ವಿವಿದ್ದೊದೇಶ ಸಹಕಾರಿ ಸಂಘ ಇದರ ಕ್ರಿಸ್ಮಸ್ ಹಾಗೂ ಹೊಸವರ್ಷದ ಕೊಡುಗೆಯಾಗಿ ನಿರಖು ಠೇವಣಿ ಅಭಿಯಾನ ಉದ್ಘಾಟನೆ ನಡೆಯಿತು. ಸುಳ್ಯದಲ್ಲಿ ಪ್ರಧಾನ ಕಛೇರಿ ಹೊಂದಿರುವ ಈ ಸಹಕಾರಿ ಸಂಘವು ಕಡಬ ಶಾಖೆಯಲ್ಲಿ ಅಭಿಯಾನ ಉದ್ಘಾಟನೆ ನೆರವೇರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರಾದ ಜೆ.ಪಿ.ಎಮ್ ಚೆರಿಯಾನ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಬಿಟ್ಟಿ ನೆಡುನೀಲಂ ವಹಿಸಿ, ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಾಲಕೃಷ್ಣ ಬಲ್ಲೇರಿ, ಚಿಂತಕ ಹಾಗೂ ವಾಣಿಜ್ಯೋದ್ಯಮ ಲಕ್ಷ್ಮೀಶ ಗಬಲಡ್ಕ, ಪ್ರವಾಸಿ ಉದ್ಯಮಿ ಚಾಕೋ ಎಮ್.ಪಿ, ಉದ್ಯಮಿ ಬೋಸ್ಮೊ ಕೋರ್ಮಾಡಂ, ಕಡಬ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸೈಮನ್ ಉಪಸ್ಥಿತರಿದ್ದರು. ಕ್ರಿಸ್ಮಸ್ ಹಾಗೂ ಹೊಸವರ್ಷದ ಕೊಡುಗೆಯಾಗಿ ಒಂದು ವರ್ಷಕ್ಕೆ ಸಾಮಾನ್ಯರಿಗೆ 10.5%, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ, ನಿವೃತ್ತ ಹಾಗೂ ಹಾಲಿ ಸರಕಾರಿ ನೌಕರರಿಗೆ, ಮಾಜಿ ಹಾಗೂ ಹಾಲಿ ಸೈನಿಕರಿಗೆ 11%, ಎರಡು ವರ್ಷಗಳ ಹಾಗೂ ಮೇಲ್ಪಟ್ಟ 11% ಸಾಮಾನ್ಯರಿಗೆ ಉಳಿದ ಹಾಗೆ 11.50%, ಬಡ್ಡಿದರದಲ್ಲಿ ಡಿ.1ರಿಂದ 2024 ಜನವರಿ 1ರ ತನಕ ನಿರಖು ಠೇವಣಿ ಸಂಗ್ರಹಿಸುವುದೆಂದು ಸಂಘದ ಅಧ್ಯಕ್ಷರು ತಿಳಿಸಿದರು. ಸಹಕಾರಿ ಸಂಘದ ಉಪಾಧ್ಯಕ್ಷ ಜಾನ್ ವಿಲಿಯಂ ಲಾಸದ್ರೋ, ಪ್ರದಾನ ಕಚೇರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಡಳಿತ ಸದಸ್ಯರು ಹಾಗೂ ಹಿತೈಷಿಗಳು ಪಾಲ್ಗೊಂಡರು. ಶಾಖಾ ವ್ಯವಸ್ಥಾಪಕ ಮೋನಪ್ಪ ಗೌಡ ವಂದಿಸಿದರು. ಕು| ಡೈಸಿ, ಕು| ವಂದಿತಾ ಕಾರ್ಯಕ್ರಮ ನಿರೂಪಿಸಿದರು.