ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೇವಮ್ಮ ಸಭಾ ಭವನದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ -50 ರ ಪ್ರಯುಕ್ತ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಸಮಾರಂಭವು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ, ಯಶಸ್ವಿಯಾಗಿ ನೆರವೇರಿತು. ಪೋಲಿಸ್ ಠಾಣೆ ಸುಳ್ಯ ಇದರ ಠಾಣಾಧಿಕಾರಿ, ಸಾಹಿತಿಗಳಾದ ಶ್ರೀ ಈರಯ್ಯ ದುಂತೂರು ಅವರು ಕಾರ್ಯಕ್ರಮ ಉದ್ಘಾಟಿಸಿದರು. ಖ್ಯಾತ ವಕೀಲರು ಮತ್ತು ನಗರ ಪಂಚಾಯತ್ ಸದಸ್ಯರಾದ ಶ್ರೀ ಎಂ ವೆಂಕಪ್ಪಗೌಡರು ಸಭಾಧ್ಯಕ್ಷತೆಯನ್ನು ವಹಿಸಿ ಕನ್ನಡ ನಾಡು ನುಡಿಯ ಮಹತ್ವವನ್ನು ವಿವರಿಸಿದರು. ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಪ್ರಗತಿಪರ ಕೃಷಿಕರು, ಸಾಹಿತಿಗಳೂ ಆದ ಶ್ರೀ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅವರು ಸಮಾರಂಭದ ಆರಂಭದಲ್ಲಿ ಮತ್ತು ಸಮಾರೋಪದಲ್ಲಿ ತಮ್ಮ ಸಾಹಿತ್ಯದ ಹಲವು ಕವನಗಳ ವಾಚನದ ಜೊತೆ ಭಾಷಣ ಮಾಡಿ ಶುಭ ಹಾರೈಸಿದರು. ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಶ್ರೀ ಹಾ.ಮ. ಸತೀಶ್ ಬೆಂಗಳೂರು ಅವರು ಎಲ್ಲರ ಕವನಗಳನ್ನು ವಿಮರ್ಶೆಸಿ ಸಾಹಿತ್ಯದ ವಿವಿಧ ಮಜಲುಗಳನ್ನು ಪರಿಚಯಿಸಿದರು. ಚೈತನ್ಯ ಸೇವಾಶ್ರಮದ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತೀ ಸ್ವಾಮಿಯವರು ಘನ ಉಪಸ್ಥಿತರಾಗಿ ಆಶೀರ್ವಚನ ನೀಡಿದರು. ನಂತರ ಸ್ವಾಮೀಜಿಯವರ 198 ನೇ ಧಾರ್ಮಿಕ ಸಾಹಿತ್ಯ ಕೃತಿಯನ್ನು ಬಿಡುಗಡೆ ಮಾಡಲಾಯಿತು. ವಿಶೇಷ ಸಾಧನೆ ಮಾಡಿದ ರೋಟರಿ ಶಾಲೆಯ ಕನ್ನಡ ಉಪನ್ಯಾಸಕರಾದ ಶ್ರೀಮತಿ ಚಂದ್ರಕಲಾ ಡಿ ನಂಗಾರು ಅವರಿಗೆ ಚಂದನ ರಾಜ್ಯೋತ್ಸವ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಾಹಿತ್ಯ ಸಂಭ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮರ್ಥನಿಧಿಯ ಶ್ರೀ ಹರಿಪ್ರಸಾದ್ ನಿಡಿಂಜಿ, ಕವಿ ಅನಾರ್ಕಲಿ ಸಲೀಂ, ಕವಯಿತ್ರಿ ಪೂರ್ಣಿಮಾ ತೋಟಪ್ಪಾಡಿ, ಗಾಯಕ ಶಶಿಧರ್ ಮಾವಿನಕಟ್ಟೆ, ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸನ್ಮಾನ ಪಡೆದ ಶ್ರೀ ಕೆ ಟಿ ವಿಶ್ವನಾಥ್ ಅವರಿಗೆ 2023 ನೆ ಸಾಲಿನ ಚಂದನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ ನಂಗಾರು ಅವರು ಎಲ್ಲಾ ಸಾಧಕರನ್ನು ಗೌರವಿಸಿದರು.ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಭೀಮರಾವ್ ವಾಷ್ಠರ್ ರವರು ಪ್ರಾಸ್ತಾವಿವಾಗಿ ಮಾತನಾಡಿದರು. ನಂತರ ಬೆಂಗಳೂರಿನ ಹಿರಿಯ ಸಾಹಿತಿ ಶ್ರೀ ಹಾ ಮ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯೋತ್ಸವ ಕವಿಗೋಷ್ಠಿಯಲ್ಲಿ 50 ಕ್ಕೂ ಹೆಚ್ಚು ಜನ ಕವಿಗಳು ಕವನ ವಾಚನ ಮಾಡಿದರು. ಕವಿತೆ ಹಾಗೂ ಸಾಹಿತ್ಯದ ಬಗ್ಗೆ ಮಾತನಾಡಿದ ಕವಿಗೋಷ್ಠಿಯ ಅಧ್ಯಕ್ಷರು ‘ಸಾಧ್ಯವಾದಷ್ಟು ಎಲ್ಲರೂ ಛಂದೋಬದ್ಧ ಕವನಗಳನ್ನು ರಚಿಸುವಂಥವರಾಗಬೇಕು’ ಎಂದು ಅಭಿಪ್ರಾಯ ಪಟ್ಟರು. ಅದೃಷ್ಟವಂತ ಕವಿಯಾಗಿ ವಿಂದ್ಯಾ ಎಸ್ ರೈ ಅವರನ್ನು ಸನ್ಮಾನಿಸಲಾಯಿತು. ಶಶಿಧರ ಮಾವಿನಕಟ್ಟೆ ಆಶಯ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅನುರಾಧ ಶಿವಪ್ರಕಾಶ್ ಸ್ವಾಗತಿಸಿದರು. ಅನುಜನಾರ್ಧನ ನೆಟ್ಟಾರು ಧನ್ಯವಾದ ಸಮರ್ಪಣೆ ಗೈದರು. ಪ್ರಮೀಳಾರಾಜ್ ಐವರ್ನಾಡು ಮತ್ತು ಅನುರಾಧಾ ಶಿವಪ್ರಕಾಶ್ ಹಾಗೂ ಪೂರ್ಣಿಮಾ ತೋಟಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
- Thursday
- November 21st, 2024