ಇಂಗು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಆ್ಯಂಟಿ – ಇನ್‌ಪ್ಲಮೇಟರಿ, ಆ್ಯಂಟ್ ವೈರಲ್ ಹಾಗೂ ಆ್ಯಂಟಿ ಬಯೋಟಿಕ್ ಗುಣಗಳು ಇಂಗು ಹೊಂದಿದೆ. ಅಸ್ತಮಾ, ಶೀತ, ಉಬ್ಬಸ, ದಮ್ಮು ಹಾಗೂ ಇನ್ನಿತರ ಶ್ವಾಸಕೋಶ ಸಂಬAಧಿತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಇಂಗು ಬಹಳ ಸಹಕಾರಿಯಾಗಿದೆ. ಮುಟ್ಟಿನನೋವು, ಅಧಿಕ ರಕ್ತಸ್ರಾವ ಹಾಗೂ ಅನಿಯಮಿತ ಋತುಸ್ರಾವ ತಡೆಗೆ ಇಂಗು ಅನುಕೂಲವಾಗಿದೆ. ತಲೆನೋವು, ಮೈಗ್ರೇನ್ ನಿವಾರಣೆಗೆ ಇಂಗು ಸಹಾಯ ಮಾಡುತ್ತದೆ. ಉರಿಯೂತವನ್ನು ತಡೆಯುತ್ತದೆ. ಇದರಿಂದ ರಕ್ತಸಂಚಾರ ಸರಿಯಾಗಿ ಆಗುವುದು. ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಇಂಗು ಸಹಕಾರಿಯಾಗಿದೆ. ಇದು ನರವ್ಯೂಹವನ್ನು ಉದ್ದೀಪನಗೊಳಿಸುತ್ತದೆ. ಅನೇಕ ಮಾನಸಿಕ, ನರವ್ಯೂಹ ಸಂಬಂಧಿಸಿದ ತೊಂದರೆಗಳಿಗೆ ಇಂಗನ್ನು ಔಷಧಿಯಾಗಿ ಬಳಸಬಹುದಾಗಿದೆ. ಇಂಗು ಒಳ್ಳೆಯ ಆ್ಯಂಟಿ- ಅಕ್ಸಿಡೆಂಟ್ ಆಗಿದ್ದು ದೇಹದಲ್ಲಿ ಫ್ರೀ ರ‍್ಯಾಡಿಕಲ್ ತಯಾರಾಗುವುದನ್ನು ತಡೆಯುತ್ತದೆ. ಅಲ್ಲದೆ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಒಂದು ಲೋಟ ಮಜ್ಜಿಗೆಗೆ ಇಂಗು ಹಾಕಿ ಕುಡಿಯುವುದರಿಂದ ತಕ್ಷಣಕ್ಕೆ ಹೊಟ್ಟೆನೋವು ಕಡಿಮೆಯಾಗುತ್ತದೆ. ಅಲ್ಲದೇ ಇನ್ನಿತರ ಉದರ ಸಂಬಂಧಿಸಿದ ಸಮಸ್ಯೆ ಕ್ರಿಮಿಬಾಧೆ ಎಲ್ಲಕ್ಕೂ ಸಹಕಾರಿ
- Thursday
- November 21st, 2024