ಕರ್ನಾಟಕ ವಿಧಾನ ಸಭಾ ಚುನಾವಣೆ ಬಳಿಕ ನಡೆದ ಬೆಳವಣಿಗೆಗಳಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಕೆಲವು ಮುಖಂಡರನ್ನು ಕಾಂಗ್ರೆಸ್ ಶಿಸ್ತುಕ್ರಮ ಸಮಿತಿ ದಿನಾಂಕ 08-06-2023 ರಂದು ಪಕ್ಷ ವಿರೋಧಿ ಚಟುವಟಿಕೆಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಮರುಆದೇಶ ಮಾಡಿ ಉಚ್ಛಾಟಿತರಾಗಿರುವ ಶ್ರೀ ಉಷಾ ಅಂಚನ್, ಶ್ರೀಮತಿ ಆಶಾ ಲಕ್ಷ್ಮಣ್, ಗುಂಡ್ಯ, ಪ್ರವೀಣ್ ಕೆಡಂಜಿ, ರವಿ ರುದ್ರಪಾದ, ಶೋಬೀತ್ ಸುಬ್ರಮಣ್ಯ, ಕ್ಸೇವಿರ್ ಬೇಬಿ, ಸುಧೀರ್ ದೇವಾಡಿಗ, ಮಹೇಶ್ ಭಟ್, ಕರಿಕಳ, ಸಚಿನ್ ರಾಜ್ ಶೆಟ್ಟಿ, ಭವಾನಿ ಶಂಕರ್ ಕಲ್ಮಡ್ಕ, ಗೋಕುಲ್ ದಾಸ್, ರಾಮಕೃಷ್ಣ ಕೆಂಜಾಳ, ಚೇತನ್ ಕಜೆಗದ್ದೆ, ಶಶಿಧರ್ ಮಾಸ್ಟರ್, ಜೈನುದ್ದೀನ್ ಆತೂರು, ಆನಂದ್ ಬೆಳ್ಳಾರೆ ಮತ್ತು ಫೈಜಲ್ ಕಡಬ ಇವರನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೃಷ್ಣಪ್ಪ ಜಿ. ರಾಮಕುಂಜ, ಜಿಲ್ಲಾಧ್ಯಕ್ಷರಾದ ಕೆ.ಹರೀಶ್ ಕುಮಾರ್ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಶ್ರೀಮತಿ ಮಮತ ಡಿ.ಎಸ್. ಗಟ್ಟಿ ಇವರ ಮನವಿಯ ಮೇರೆಗೆ ಕೆಪಿಸಿಸಿ ಅಧಕ್ಷರಾದ ಡಿ.ಕೆ. ಶಿವಕುಮಾರ್ ರವರ ಅನುಮೋದನೆಯೊಂದಿಗೆ ಈ ಮೇಲ್ಕಂಡವರ ಮೇಲಿರುವ ಉಚ್ಚಾಟಣಾ ಆದೇಶವನ್ನು ರದ್ದುಗೊಳಿಸಲಾಗಿದೆ. ಹಾಗೂ ವೆಂಕಪ್ಪ ಗೌಡರ ಮೇಲಿರುವ ಪಕ್ಷ ವಿರೋಧಿ ಚಟುವಟಿಕೆಯ ಅಪಾದನೆಯನ್ನು ಕೈಬಿಡಲಾಗಿದೆ ಎಂದು ಕೆಪಿಸಿಸಿ ಶಿಸ್ತುಕ್ರಮ ಸಮಿತಿಯ ಅಧ್ಯಕ್ಷ ಕೆ.ರೆಹಮಾನ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Saturday
- November 23rd, 2024