Ad Widget

ಹೈ ಸೆಕ್ಯುರಿಟಿ ನಂಬರ್‌ಪ್ಲೇಟ್ (HSRP)ಅಳವಡಿಕೆಗೆ ಕಾಲಾವಕಾಶ ನೀಡಿದ ಸಾರಿಗೆ ಇಲಾಖೆ – 3 ತಿಂಗಳು ವಿಸ್ತರಣೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆ ಮೇರೆಗೆ 2019ರ ಏಪ್ರಿಲ್‌ಗಿಂತ ಮುಂಚೆ ನೋಂದಣಿಯಾದ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟರ್ ಪ್ಲೇಟ್ (ಎಚ್ ಎಸ್‌ಆರ್‌ಪಿ) ಅಳವಡಿಕೆ ಗಡುವನ್ನು 2024ರ ಫೆ. 17ರವರೆಗೆ ವಿಸ್ತರಿಸಿ ಸಾರಿಗೆ ಇಲಾಖೆ ಆದೇಶಿಸಿದೆ.

ವಾಹನಗಳ ಸುರಕ್ಷತೆ ದೃಷ್ಟಿಯಿಂದಾಗಿ 2019ರ ಏಪ್ರಿಲ್‌ಗಿಂತ ಮುಂಚೆ ನೋಂದಣಿ ಯಾಗಿರುವ ಎಲ್ಲ ವಾಹನಗಳು ಎಚ್‌ಎಸ್ ಆರ್‌ಪಿ ಅಳವಡಿಸುವಂತೆ ಸಾರಿಗೆ ಇಲಾಖೆ ಆದೇಶಿಸಿತ್ತು. ಅದರಂತೆ ರಾಜ್ಯದಲ್ಲಿರುವ ಎರಡು ಕೋಟಿ ವಾಹನಗಳಿಗೆ ಎಚ್‌.ಎಸ್‌ ಆರ್‌ಪಿ ಅಳವಡಿಕೆಗೆ ನ. 17 ಅಂತಿಮ ಗಡುವಾಗಿಸಲಾಗಿತ್ತು. ಆದರೆ, ಎರಡು ಕೋಟಿ ವಾಹನಗಳ ಪೈಕಿ ಈವರೆಗೆ 60 ಸಾವಿರ ವಾಹನಗಳಷ್ಟೇ ಎಚ್‌ಎಸ್‌ಆರ್‌ಪಿ ಅಳವಡಿ ಸಿಕೊಂಡಿವೆ. ಅದರ ಜತೆಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಕುರಿತಂತೆ ಹೈಕೋರ್ಟ್‌ನಲ್ಲಿ ಪ್ರಕರಣವೂ ದಾಖಲಾಗಿದೆ. ಈ ಎಲ್ಲ ಈ ಕಾರಣಗಳಿಂದಾಗಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವನ್ನು ನ. 17ರಿಂದ 2024ರ ಫೆ. 17ರವರೆಗೆ ವಿಸ್ತರಿಸಲಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!