Ad Widget

ನಾಳೆ (ನ. 22) ಸುಳ್ಯ ತಾಲೂಕಿನಾದ್ಯಂತ ಅಂಗನವಾಡಿ ಬಂದ್

ವಿವಿಧ ಬೇಡಿಕೆಗೆ ಆಗ್ರಹಿಸಿ ಸುಳ್ಯ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ನಾಳೆ ನ. 22 ರಂದು ಸುಳ್ಯ ತಾಲೂಕಿನಲ್ಲಿ ಅಂಗನವಾಡಿ ಬಂದ್ ಗೆ ಕರೆ ನೀಡಿದೆ. ಹಲವು ವರ್ಷಗಳಿಂದ ನಾವು ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಆದರೂ ಇನ್ನೂ ಯಾವುದೇ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಹೀಗಾಗಿ ಅಂಗನವಾಡಿ ಬಂದ್ ಮಾಡುತ್ತಿದ್ದೇವೆ ಎಂದು ದ.ಕ....

ಸುಳ್ಯ ತಾಲೂಕು ಮಟ್ಟದ ಕ್ರೀಡಾ ಕೂಟ ಯಶಸ್ವಿ ಆಯೋಜನೆ , ಧನ್ಯತಾ ಸಮಾರಂಭ .

ಸುಳ್ಯ ತಾಲ್ಲೂಕು ಕ್ರೀಡಾ ಕೂಟವನ್ನು ಯಶಸ್ವಿ ಯಾಗಿ ನಡೆಸಿದ ಸಂತ ಜೋಸೆಫ್ ಶಾಲೆ ಯ ವತಿಯಿಂದ ಸಹಕಾರ ನೀಡಿದ ವಿವಿಧ ಸಮಿತಿ ಸದಸ್ಯರಿಗೆ, ಪೋಷಕರಿಗೆ, ಶಿಕ್ಷಕರಿಗೆ ಹಾಗೂ ಶಾಲಾ ಸಿಬ್ಬಂದಿಗಳಿಗೆ ಕ್ರತಜ್ಞತ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಫಾ ವಿಕ್ಟರ್ ಡಿ ಸೋಜ ವಹಿಸಿ ಸಹಕರಿಸಿದ ಸರ್ವರಿಗೂ ಕ್ರತಜ್ಞತೆ ಅರ್ಪಿಸಿದರು.ವೇದಿಕೆಯಲ್ಲಿ...
Ad Widget

ಇಂದಿರಾ ಕ್ಯಾಂಟೀನ್ ನಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆ – ಸಿಹಿ ತಿಂಡಿ ವಿತರಣೆ.

ಸುಳ್ಯ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯದ ಇಂದಿರಾ ಕ್ಯಾಂಟೀನ್ ನಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವು ಹಾಗೂ ಸಿಹಿ ತಿಂಡಿ ವಿತರಣೆ ಗೀತಾ ಕೋಲ್ಚಾರು ಅಧ್ಯಕ್ಷತೆಯಲ್ಲಿ ನಡೆಯಿತು. ದೇಶದ ಮೊದಲ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆಯನ್ನು ಸುಳ್ಯದಲ್ಲಿನ ಇಂದಿರಾ ಕ್ಯಾಂಟೀನ್ ನಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್...

ಮರ್ಕಂಜ : ಮಿನುಂಗೂರು ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಮನವಿ ಪತ್ರ ಬಿಡುಗಡೆ

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಗೊಳ್ಳಲಿದ್ದು ಆ ಪ್ರಯುಕ್ತ ಮನವಿ ಪತ್ರ ಬಿಡುಗಡೆಯು ಇಂದು ಕ್ಷೇತ್ರದಲ್ಲಿ ಕ್ಷೇತ್ರದ ತಂತ್ರಿಗಳಾದ ದೇಲಂಪಾಡಿ ಪದ್ಮನಾಭ ತಂತ್ರಿಗಳು ಬಿಡುಗಡೆಗೊಳಿಸಿದರು. ಗೋವಿಂದ ಅಳವುಪಾರೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಜೀರ್ಣೋದ್ಧಾರ ಸಮಿತಿ...

ಸುಳ್ಯ ಅಕ್ರಮ ಮರಳು ಗಣಿಗಾರಿಕೆ – ಖಡಕ್ ಅಧಿಕಾರಿಯ ಕಣ್ಣು ತಪ್ಪಿಸಿ ಸಾಗಾಟ – ಗಣಿ ಇಲಾಖೆ ದಿಢೀರ್ ದಾಳಿ ?

ಕರಾವಳಿ ಜಿಲ್ಲೆಯಾದ್ಯಂತ ಇದೀಗ ಮರಳು ಗಣನೀಯವಾಗಿ ಇಳಿಕೆಯಾಗಿದ್ದು ಸುಳ್ಯದಲ್ಲಿ ಖಡಕ್ ಅಧಿಕಾರಿ ಆಗಮನ ಬೆನ್ನಲ್ಲೆ ಎಲ್ಲಾ ಅಕ್ರಮ ಮರಳು ಮಾರಾಟಗಾರರು ಗಪ್ ಚುಪ್ ಆಗಿದ್ದಾರೆ ಆದರೆ ಬೆರಳೆಣಿಕೆಯ ಕೆಲವರು ಮಾತ್ರ ಯಾರದೋ ಕೃಪಾ ಕಟಾಕ್ಷದೊಂದಿಗೆ ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದದನ್ನು ಪೋಲಿಸ್ ಹಾಗೂ ಗಣಿ ಇಲಾಖೆಯು ಫೈನ್ ಹಾಕಿದ ಪ್ರಸಂಗ ಬೆಳಕಿಗೆ ಬಂದಿದೆ. ಎಲ್ಲೆಲ್ಲಿ ನಡೆಯುತ್ತಿದೆ...

ಕಾಂಚೋಡು ಮಂಜುನಾಥ ದೇವರು ಮತ್ತು ಅಣ್ಣಪ್ಪ ಸ್ವಾಮಿಯಲ್ಲಿ ಸೌಜನ್ಯ ಸಾವಿಗೆ ನ್ಯಾಯ ಒದಗಿಸಲು ಪ್ರಾರ್ಥನೆ

ಐತಿಹಾಸಿಕ ಹಿನ್ನೆಲೆಯುಳ್ಳ ಕಾಂಚೋಡು ಮಂಜುನಾಥ ದೇವರಲ್ಲಿ ಸೌಜನ್ಯ ಸಾವಿಗೆ ನ್ಯಾಯ ಒದಗಿಸುವ ಸಲುವಾಗಿ ಸೌಜನ್ಯ ಕುಟುಂಬ , ಮಹೇಶ್ ತಿಮರೋಡಿ , ದೇವಾಲಯದ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಮಾಡಲಾಗಿದೆ. ಕಾಂಚೋಡು ಮಂಜುನಾಥ ದೇವಾಲಯಕ್ಕೆ ಪುರಾತನ ಹಿನ್ನೆಲೆಯಿದ್ದು , ಇಲ್ಲಿಯೂ ಧರ್ಮಸ್ಥಳ ದೇವಾಲಯದ ರೀತಿಯಲ್ಲೆ ದೇವರನ್ನು ದೈವಗಳ‌ ಆರಾಧನೆ ನಡೆಯುತ್ತಿದ್ದು, ಇಲ್ಲಿ ಕೂಡ ಅಣ್ಣಪ್ಪ ಸ್ವಾಮಿಯ ಬೆಟ್ಟ...

ಕಲ್ಪನಾ ವೈ ರಾಷ್ಟ್ರೀಯ ಭಾವೈಕ್ಯತೆ ಶಿಬಿರಕ್ಕೆ ಆಯ್ಕೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕಿ , ಕಲ್ಪನಾ ವೈ ದ್ವಿತೀಯ ಬಿಎ ಇವರು ದಿನಾಂಕ 22 .11 .2023 ರಿಂದ 28.11.2023 ರ ವರೆಗೆ ಕರ್ನಾಟಕ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರ , ಕೂಡಿಬಾಗ್ ಕಾರವಾರ ಇಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ...

ಹರಿಹರ ಪಲ್ಲತ್ತಡ್ಕ : ತೇಜಕುಮಾರ್ ಕಜ್ಜೋಡಿ ನಿಧನ

ಹರಿಹರ ಪಲ್ಲತ್ತಡ್ಕ ಗ್ರಾಮದ ತೇಜಕುಮಾರ್ ಕಜ್ಜೋಡಿ ಅವರು ತೀವ್ರ ಅನಾರೋಗ್ಯದಿಂದ ನ.20 ರಂದು ರಾತ್ರಿ 11:50 ರ ಸುಮಾರಿಗೆ ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು.ಮೃತರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ತಾರಾಮತಿ ಕಜ್ಜೋಡಿ, ಪುತ್ರರಾದ ಪ್ರಜ್ವಲ್ ಕಜ್ಜೋಡಿ, ಉಜ್ವಲ್ ಕಜ್ಜೋಡಿ ಹಾಗೂ ಸಹೋದರರಾದ ನೇಮಿರಾಜ ಕಜ್ಜೋಡಿ, ದೇವಿದಾಸ್ ಕಜ್ಜೋಡಿ, ಉಮೇಶ್ ಕಜ್ಜೋಡಿ, ಸಹೋದರಿಯರಾದ ವಿಶಾಲಾಕ್ಷಿ ಬಾಬ್ಲುಬೆಟ್ಟು,...
error: Content is protected !!