
ಸುಳ್ಯದಲ್ಲಿ ನವರಾತ್ರಿ ಅಂಗವಾಗಿ ಸುಳ್ಯದ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಸ್ಥಾಪಿಸಲಾದ ದೇವಿ ಶಾರದೆಯ ಆರಾಧನೆ ಮುಗಿದು ಇಂದು ಭವ್ಯವಾದ ಶೋಭಾಯಾತ್ರೆಗೆ ಸಜ್ಜುಗೊಂಡಿತ್ತು. ಸಂಜೆ ಗಂಟೆ 4 ರಿಂದ ಆರಂಭಗೊಂಡ ಶೋಭಯಾತ್ರೆ ಮಳೆಯಿಂದಾಗಿ ಭಕ್ತಾರಿಗೆ ನಿರಾಸೆಯುಂಟು ಮಾಡಿತು. ಭಾರಿ ಮಳೆಯಿಂದಾಗಿ ಭಜನಾ ತಂಡಗಳು, ಚಂಡೆ, ನಾಸಿಕ್ ಮೇಳ, ಟ್ಯಾಬ್ಲೋ ಸೇರಿದಂತೆ ಇತರೆ ಎಲ್ಲಾ ವೈವಿಧ್ಯಮಯ ಶೋಭಾಯಾತ್ರೆಗೆ ಚಂದ್ರ ಗ್ರಹಣ ವಕ್ರದೃಷ್ಟಿ ಬೀರಿದ್ದು, ಮಳೆಗೆ ರಸ್ತೆಯ ಪಕ್ಕದಲ್ಲಿ ಜನತೆ ಆಶ್ರಯ ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಯಿತು. ಮಳೆಗೆ ವಿದ್ಯುತ್ ಕೂಡ ಕೈಕೊಟ್ಟಿದ್ದರಿಂದ ಕತ್ತಲಾಗಿ ಭವ್ಯವಾದ ಮೆರವಣಿಗೆ ಭಕ್ತಾಧಿಗಳಿಗೆ ನಿರಾಸೆಯನ್ನುಂಟುಮಾಡಿತು. ಇದೀಗ ಮತ್ತೆ ಮೆರವಣಿಗೆ ಹೊರಟಿರುವುದಾಗಿ ತಿಳಿದುಬಂದಿದೆ.