ಬಜಾಜ್ ಕಂಪೆನಿಯ ಪಲ್ಸರ್ ಎನ್ 150 ವಿನೂತನ ಶೈಲಿ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ತಯಾರಿಸಿದ್ದು, ಸುಳ್ಯದಲ್ಲಿ ಇಂದು ಬಿಡುಗಡೆಗೊಂಡಿತು. ನೂತನ ಬೈಕನ್ನು ಸುಳ್ಯ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಂಗಳೂರಿನ ಸುಪ್ರೀಮ್ ಬಜಾಜ್ ನ ಸೀನಿಯರ್ ಸೇಲ್ಸ್ ಮ್ಯಾನೇಜರ್ ಯೋಗೀಶ್, ಸೇಲ್ಸ್ ಮ್ಯಾನೇಜರ್ ವಾಸುದೇವ, ಸುಳ್ಯದ ಬಜಾಜ್ ಶೋರೂಂ ವೆಹಿಕಲ್ ಇಂಡಿಯಾದ ಮಾಲಕರಾದ ರಮನಾಥ್ ಕಾನತ್ತಿಲ, ಗ್ರಾ.ಪಂ.ಗಳ ಪಿಡಿಓ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ದ್ವಿಚಕ್ರ ವಾಹನ 3 ಬಣ್ಣಗಳಲ್ಲಿದ್ದು, 150 ಸಿಸಿ, 14.5 PS Power, LED projector headlamp, monoshock suspesion ಸೌಲಭ್ಯ ಹೊಂದಿದ್ದು, ರೂ 1.17 ಲಕ್ಷ ಶೋರೂಂ ಬೆಲೆ ಹೊಂದಿದೆ.