Ad Widget

ಸುಳ್ಯ ರಾಘವೇಂದ್ರ ಮಠದಲ್ಲಿ 352 ನೇ ವರ್ಷದ ರಾಯರ ಆರಾಧನಾ ಮಹೋತ್ಸವ ಗರ್ಭಗುಡಿ ಬಾಗಿಲಿಗೆ ಹಿತ್ತಾಳೆ ಕವಚ ಸಮರ್ಪಣೆ

ಸೆ.1 ರಂದು ಸುಳ್ಯ ರಾಘವೇಂದ್ರ ಮಠದಲ್ಲಿ 352 ನೇ ವರ್ಷದ ರಾಯರ ಆರಾಧನಾ ಮಹೋತ್ಸವಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ರಾಯರ 352 ನೇ ವರ್ಷದ ಆರಾಧನಾ ಮಹೋತ್ಸವವು ಸೆ.1 ರಂದು ನಡೆಯಲಿದೆ ಎಂದು ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೃಂದಾವನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ...

ಅಜ್ಜಾವರ: ಚಂದ್ರಯಾನ- 3 ರಲ್ಲಿ ಕಾರ್ಯ ನಿರ್ವಹಿಸಿದ ಮಾನಸರಿಗೆ ಸನ್ಮಾನ

ಚಂದ್ರಯಾನ- 3 ರಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಮಾನಸ ಅವರನ್ನು ಸರಕಾರಿ ಪ್ರೌಢಶಾಲೆ ಅಜ್ಜಾವರ,ಚೈತ್ರ ಯುವತಿ ಮಂಡಲ(ರಿ) ಅಜ್ಜಾವರ , ಪ್ರತಾಪ ಯುವಕ ಮಂಡಲ ( ರಿ ) ಅಜ್ಜಾವರ, ಹಿರಿಯ ಪ್ರಾಥಮಿಕ ಶಾಲೆ ಅಡ್ಪoಗಾಯ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ್ಯೋಪಾಧ್ಯರಾದ ಗೋಪಿನಾಥ್ ಮೆಟ್ಟಿನಡ್ಕ, ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ್, ಚೈತ್ರ...
Ad Widget

ಗುತ್ತಿಗಾರು: ಅಮರ ಯೋಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಬಹುಮಾನ

7ನೇ ವರ್ಷದ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ -2023 ನಲ್ಲಿ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ಬಹುಮಾನ ಪಡೆದ ವಿದ್ಯಾರ್ಥಿಗಳು.ಆಗಸ್ಟ್ 5ರಂದು ಆನ್ಲೈನ್ ಮುಕೇನ ನಡೆದ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಅಮರ ಯೋಗ ಕೇಂದ್ರದ ವಿದ್ಯಾರ್ಥಿಗಳಾದ ಹವಿಕ್ಷಾ....

ನೆಲ್ಯಾಡಿ ಉಪ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಪುನಾರಂಭಕ್ಕೆ ಡಿ.ಯಂ ಶಾರಿಖ್ ರಿಂದ ಮನವಿ

ನೆಲ್ಯಾಡಿ ಉಪ ಅಂಚೆ ಕಚೇರಿಯಲ್ಲಿ ಆಧಾರ್ ಗೆ ಸಂಬಂಧಿಸಿದ ಸೇವೆ ಸಿಗುತ್ತಿತ್ತು. ನೆಲ್ಯಾಡಿ, ಕೌಕ್ರಾಡಿ, ಗೊಳಿತೊಟ್ಟು, ಕೊಜಾಲು, ಶಿರಾಡಿ ಮತ್ತು ಶಿಶಿಲ ಇತ್ಯಾದಿಗಳ ಗ್ರಾಮಸ್ಥರು ಇಲ್ಲಿ ಸೇವೆ ಪಡೆಯುತ್ತಿದ್ದರು. ಆದರೆ ಇತ್ತೀಚಿಗೆ ತಾಂತ್ರಿಕ ಸಮಸ್ಯೆಯಿಂದಾಗಿ ಆಧಾರ್ ಸೇವೆ ಮೊಟಕು ಗೊಂಡಿರುವುದರಿಂದ ಸ್ಥಳೀಯ ನಿವಾಸಿಗಳು ಉಪ್ಪಿನಂಗಡಿ, ಕಡಬಕ್ಕೆ ಅಲೆದಾಡುವಂತಾಗಿದೆ. ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ...

ಹರಿಹರ ಪಲ್ಲತ್ತಡ್ಕ : ಲಯನ್ಸ್ ಕ್ಲಬ್ ನಿಂದ ಅಂಗನವಾಡಿಗೆ ಕುರ್ಚಿಗಳ ಕೊಡುಗೆ

ಹರಿಹರ ಪಲ್ಲತ್ತಡ್ಕ ಅಂಗನವಾಡಿಗೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಆ.24 ರಂದು ಕುರ್ಚಿಗಳನ್ನು ಕೊಡುಗೆ ನೀಡಲಾಯಿತು.ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲ| ರಾಮಚಂದ್ರ ಪಳಂಗಾಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲ| ರೇಗನ್ ಶೆಟ್ಟಿಯಡ್ಕ, ಲ| ವಿಷ್ಣುಪ್ರಸಾದ್ ಪಾತಿಕಲ್ಲು, ಲ| ಹಿಮ್ಮತ್.ಕೆ.ಸಿ ಕಿರಿಭಾಗ ಇವರುಗಳು ಕುರ್ಚಿಗಳ ಪ್ರಾಯೋಜಕರಾಗಿದ್ದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಂಗನವಾಡಿ ಶಿಕ್ಷಕರಾದ...

ಮೇನಾಲ : ವರಮಹಾಲಕ್ಷ್ಮಿ ಪೂಜೆ ಹಾಗೂ ಸನ್ಮಾನ

ಅಜ್ಜಾವರ ಗ್ರಾಮದ ಮೇನಾಲ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ವಿಷ್ಣು ಗೇಮ್ಸ್ ಕ್ಲಬ್ ಮೇನಾಲ ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿ ಮೇನಾಲ ಇದರ ವತಿಯಿಂದ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಜರುಗಿತು. ಹಿಂದುಗಳು ಒಗ್ಗಟ್ಟಾಗಿ ಪೂಜೆ ಪುನಸ್ಕಾರದಲ್ಲಿ ಭಾಗಿಯಾಗಿ ಹಿಂದು ಸಮಾಜವನ್ನು ಮತ್ತಷ್ಟು ಬಲಿಷ್ಟವಾಗಿ ನಿರ್ಮಿಸಬೇಕು ಎಂದು ಧಾರ್ಮಿಕ ಉಪನ್ಯಾಸ ದಲ್ಲಿ ನಳಿನಾಕ್ಷಿ...

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಭಕ್ತಿಗೀತೆ ರಸಮಂಜರಿ

ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರಕ್ಷಾ ಬಂಧನದ ಪ್ರಯುಕ್ತ ಗಾಯಕ ಎಚ್ಚ್. ಭೀಮರಾವ್ ವಾಷ್ಠರ್ ನೇತೃತ್ವದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಭಕ್ತಿಗೀತೆ ರಸಮಂಜರಿ ಕಾರ್ಯಕ್ರಮವು2 ಗಂಟೆಗಳಿಗೂ ಹೆಚ್ಚು ಕಾಲ ನೆರವೇರಿತು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರಾದ ಬಿ ಕೆ ಉಮಾದೇವಿ ಉದ್ಘಾಟಿಸಿದರು.ಈ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ...

ಕದಿಕಡ್ಕ ಅಂಗನವಾಡಿ ಕೇಂದ್ರದ ವತಿಯಿಂದ ಅಗ್ನಿವೀರ್ ಕಿಶೋರ್ ಶೇಷನಡ್ಕ ಹಾಗೂ ಗ್ರಾ.ಪಂ. ನೂತನ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅವರಿಗೆ ಸನ್ಮಾನ

ಜಾಲ್ಸೂರು ಗ್ರಾಮದ ಶೇಷನಡ್ಕದ ಕೃಷ್ಣ ನಾಯ್ಕ ಹಾಗೂ ಶ್ರೀಮತಿ ಪ್ರೇಮ ದಂಪತಿಯ ಪುತ್ರ ಅಗ್ನಿವೀರ್ ತರಬೇತಿ ಪೂರ್ತಿಗೊಳಿಸಿ, ಊರಿಗೆ ಆಗಮಿಸಿರುವ ಕಿಶೋರ್ ಹಾಗೂ ಜಾಲ್ಸೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರಿಗೆ ಕದಿಕಡ್ಕ ಅಂಗನವಾಡಿ ಕೇಂದ್ರ ಹಾಗೂ ಅಂಗನವಾಡಿ ಬಾಲವಿಕಾಸ ಸಮಿತಿಯ ವತಿಯಿಂದ ಆ.25ರಂದು ಸನ್ಮಾನಿಸಿ, ಗೌರವಿಸಲಾಯಿತು. ಗ್ರಾ.ಪಂ.‌ನೂತನ ಅಧ್ಯಕ್ಷೆ...

ಪೇರಾಲು ಅಂಬ್ರೋಟಿ: ಸಾರ್ವಜನಿಕ ವರ ಮಹಾಲಕ್ಷ್ಮಿ ಪೂಜೆ

ಮಂಡೆಕೋಲು ಗ್ರಾಮದ ಪೇರಾಲು- ಅಂಬ್ರೋಟಿಯ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮತ್ತು ಶ್ರೀರಾಮ ಭಜನಾ ಮಂದಿರದ ವತಿಯಿಂದ ಆ. 25ರಂದು ಪೇರಾಲು ಅಂಬ್ರೋಟಿ ಶ್ರೀರಾಮ ಸಭಾಭವನದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಜರಗಿತು. ಪುರೋಹಿತ ಮೂರೂರು ಗಣೇಶ್ ಭಟ್ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮದಲ್ಲಿ ದೇವಿಗೆ ಸಾಮೂಹಿಕ ಕುಂಕುಮಾರ್ಚನೆ ಮಹಾಪೂಜೆ ನಡೆಯಿತು. ರಕ್ಷಾಬಂಧನದ ಬಳಿಕ...

ಅರಂತೋಡು : ಸಾರ್ವಜನಿಕ ಶ್ರೀ ಗಣೇಶೋತ್ಸವ ಆಮಂತ್ರಣ ಬಿಡುಗಡೆ

ಶ್ರೀ ದುರ್ಗಾ ಫ್ರೆಂಡ್ಸ್ ಅರಂತೋಡು ಇದರ ಆಶ್ರಯದಲ್ಲಿ ಸೆ. 10 ರಂದು ತೋಟಂಪಾಡಿ ಶ್ರೀ ಉಳ್ಳಾಕುಳು ದೈವಸ್ಥಾನ ಅರಂತೋಡು ಇಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಪೂಜಾ ಕಾರ್ಯಕ್ರಮ ನೆರವೇರಿತು. ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಮಲ್ಲಡ್ಕ ರವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಶುಭ...
Loading posts...

All posts loaded

No more posts

error: Content is protected !!