Ad Widget

ಸಂಪಾಜೆ: ಹೊಟೇಲ್‌ ಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಪೊಲೀಸ್ ಆಗಮಿಸುತ್ತಿದ್ದಂತೆ ಕಳ್ಳರು ಪರಾರಿ

ಇತ್ತೀಚೆಗೆ ಸುಳ್ಯ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ,ಇದೀಗ ಸುಳ್ಯ ತಾಲೂಕಿನ ಸಂಪಾಜೆಯಲ್ಲೂ ತಡರಾತ್ರಿ ಹೊಟೇಲ್‌ವೊಂದಕ್ಕೆ ಕಳ್ಳರು ನುಗ್ಗಿರುವ ಘಟನೆ ವರದಿಯಾಗಿದೆ. ಸಂಪಾಜೆ ಚೆಕ್ ಪೋಸ್ಟ್ ಬಳಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಚೆಕ್ ಪೋಸ್ಟ್ ಬಳಿ ಇರುವ ಹೊಟೇಲ್ ಸ್ವಾಗತ್ ಗೆ ಕಳ್ಳರು ನುಗ್ಗಿ ಕೈಚಳಕ ತೋರಲು ಪ್ರಯತ್ನ ಪಟ್ಟಿದ್ದಾರೆ. ಹೊಟೇಲ್ ಮಾಲೀಕ ಚೆನ್ನಪ್ಪ...

ಪೆರುವಾಜೆ : ದಲಿತ ನಿಂದನೆ ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ

ಪೆರುವಾಜೆ ಗ್ರಾಮ ಪಂಚಾಯತ್ ರಸ್ತೆ ಗೆ ಮಣ್ಣು ಹಾಕಿರುವ ದಾಮೋದರ ನಾಯ್ಕ ಅವರು ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ವಿರುದ್ಧ ನೀಡಿರುವ ದಲಿತ ನಿಂದನೆ ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ತಿಳಿದುಬಂದಿದೆ.ನನ್ನ ಬಗ್ಗೆ ಸುಳ್ಳು ಆರೋಪ ನೀಡಿರುವ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡುವುದು ಅನಿವಾರ್ಯ. ಅನಗತ್ಯವಾಗಿ ಕಿರುಕುಳ ನೀಡಿ, ವಾಟ್ಸ್ ಆ್ಯಪ್...
Ad Widget

ಬಾಬಣ್ಣ ರೈ ಗುರುಸ್ವಾಮಿ ಪೇರಾಲು ಗುತ್ತು ವಿಧಿವಶ

ಮಂಡೆಕೋಲು ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಮತ್ತು ಹಿರಿಯ ಕಾರ್ಯಕರ್ತರಾದ ಪೇರಾಲು ಗುತ್ತು ಬಾಬಣ್ಣ ರೈ ಯವರು ಇಂದು ಮುಂಜಾನೆ ದೈವಾಧೀನರಾಗಿದ್ದಾರೆ. ಅವರು ಅಪಾರ ಸಂಖ್ಯೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಗುರುಸ್ವಾಮಿಯಾಗಿ ಮಾರ್ಗದರ್ಶನ ನೀಡಿದ್ದರು. ಮೃತರು ನಾಲ್ಕು ಪುತ್ರರು ಹಾಗೂ ಓರ್ವ ಪುತ್ರಿ ಸೇರಿ ಅಪಾರ ಸಂಖ್ಯೆಯಲ್ಲಿ ಶಿಷ್ಯರನ್ನು ಅಗಲಿದ್ದಾರೆ ಮೃತರ ಅಂತಿಮ ದರ್ಶನ ಅವರ ಸ್ವಗೃಹದಲ್ಲಿ...

ಅರಂತೋಡು : ಬಿಯರ್ ಬಾಟ್ಲಿ ಸಾಗಿಸುತ್ತಿದ್ದ ಲಾರಿ ಪಲ್ಟಿ

ಅರಂತೋಡು ಸಮೀಪದ ತಿರುವಿನಲ್ಲಿ ಖಾಲಿ ಬಿಯರ್ ಬಾಟ್ಲಿ ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ಕಳೆದ ರಾತ್ರಿ ವರದಿಯಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಯೇನೆಕಲ್ಲು : ಕಾರ್ಗಿಲ್ ದಿನಾಚರಣೆ

ಸರಕಾರಿ ಪ್ರೌಢಶಾಲೆ ಯೇನೆಕಲ್ಲು ಇಲ್ಲಿ ಜು.26 ರಂದು ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಕಾರ್ಗಿಲ್ ದಿನಾಚರಣೆ ನಡೆಯಿತು.ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲ| ರಾಮಚಂದ್ರ ಪಳಂಗಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಫಿಲಿಪ್ ಪಿ.ಟಿ, ಡಿ.ಆರ್ ರಾಧಾಕೃಷ್ಣ, ತೇಜಕುಮಾರ್ ಕೊಂದಾಳ ಇವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯೋಪಾಧ್ಯಾಯರು...

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆ ಒತ್ತಾಯಿಸಿ ಬ್ಯಾನರ್ ಅಳವಡಿಕೆ

ಧರ್ಮಸ್ಥಳದಲ್ಲಿ ನಡೆದಂತ ಸೌಜನ್ಯಾಳ ಅತ್ಯಾಚಾರ ಕೊಲೆ ಖಂಡಿಸಿ ಈ ಪ್ರಕರಣವನ್ನು ಮರುತನಿಕೆ ಮಾಡಬೇಕೆಂದು ಮತ್ತು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಒತ್ತಾಯಿಸಿ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನಾಗ ಪಟ್ಟಣ ಅಂಬೇಡ್ಕರ್ ರಕ್ಷಣಾ ವೇದಿಕೆ ನಾಗ ಪಟ್ಟಣ ಘಟಕದ ವತಿಯಿಂದ ನಾಗ ಪಟ್ಟಣದಲ್ಲಿ ಜುಲೈ 3 ರಂದು ಬ್ಯಾನರ್ ಅಳವಡಿಸಿದೆ.

ಮಣಿಪುರ ಘಟನೆ ಖಂಡಿಸಿ ರಾಜ್ಯ ಕ್ರಿಶ್ಚಿಯನ್ ಅಸೋಸಿಯೇಷನ್ ವತಿಯಿಂದ ಸುಳ್ಯದಲ್ಲಿ ಮೌನ ಮೆರವಣಿಗೆ – ಪ್ರತಿಭಟನಾ ಸಭೆ

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಸೋಸಿಯೇಷನ್ ಸುಳ್ಯ ತಾಲೂಕು ಸಮಿತಿಯ ನೇತೃತ್ವದಲ್ಲಿ ಸುಳ್ಯ ತಾಲೂಕಿನ ಎಲ್ಲಾ ಚರ್ಚ್‌ಗಳ ಹಾಗೂ ಸಂಘಟನೆಗಳ ಸಹಕಾರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆ ನಡೆಯಿತು. ಸುಳ್ಯ ಬಸ್ ನಿಲ್ದಾಣದಿಂದ ತಾಲೂಕು ಕಚೇರಿ ತನಕ ಪ್ರತಿಭಟನಾ ಸೂಚಕವಾಗಿ ಮೌನ...

ಸುಬ್ರಹ್ಮಣ್ಯ ಮಂಗಳೂರು ಪ್ರಯಾಣಿಕರ ರೈಲು ಪ್ರಾರಂಭಕ್ಕೆ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ನಳಿನ್ ಮನವಿ

ರೈಲ್ವೆ ಇಲಾಖೆಗೆ ಸಂಬಂಧಿಸಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ರೈಲ್ವೇ ಸಚಿವ Ashwini Vaishnaw ಅವರಿಗೆ ಮನವಿ ಸಲ್ಲಿಸಿದರು ಅದರಲ್ಲಿ ಮುಖ್ಯವಾಗಿ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಾಣ ಬೆಂಗಳೂರು – ಮಂಗಳೂರು ರೈಲ್ವೆ ಲೈನ್ ಮೇಲ್ದರ್ಜೆಗೆ ಮತ್ತು ವಿದ್ಯುದೀಕರಣ. ಮಂಗಳೂರಿನಿಂದ ವಾರಣಾಸಿ,...

ಕಳಂಜದ ಮಸೂದ್ ಕೊಲೆ ಪ್ರಕರಣ- ಓರ್ವ ಆರೋಪಿಗೆ ಷರತ್ತು ಬದ್ಧ ಜಾಮೀನು

ಕಳಂಜದ ಮಸೂದ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳ ಪೈಕಿ ಓರ್ವ ಆರೋಪಿಯಾಗಿರುವ ಭಾಸ್ಕರ್ ಕೆ.ಎಂ.ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿರುವುದಾಗಿ ತಿಳಿದುಬಂದಿದೆ. 2022 ಜು.19ರಂದು ಕಳಂಜದಲ್ಲಿ 8 ಮಂದಿ ಯುವಕರ ತಂಡ ಮಸೂದ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಮಸೂದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 8...

ಅಜ್ಜಾವರ : ಪತ್ನಿಯ ಕೊಲೆಗೆ ಯತ್ನ – ಆರೋಪಿಗೆ ನ್ಯಾಯಾಂಗ ಬಂಧನ

ಅಜ್ಜಾವರ ಗ್ರಾಮದ ಮೇನಾಲ ಇರಂತಮಜಲು ಎಂಬಲ್ಲಿನ ಅಬ್ದುಲ್ ನವಾಝ್ ಎಂಬ ಯುವಕ ಮೂರು ವರ್ಷಗಳ ಹಿಂದೆ ರಿಹಾ ಫಾತಿಮ ಎಂಬುವವರನ್ನು ಮದುವೆಯಾಗಿದ್ದರು. ಇತ್ತೀಚೆಗೆ ದಾಂಪತ್ಯದಲ್ಲಿ ವೈಮನಸ್ಸು ಉಂಟಾಗಿ ಪತಿ ತನಗೆ ಕಿರುಕುಳ ನೀಡುತ್ತಿದ್ದು,ಇದೀಗ ಕೊಲೆಗೆ ಯತ್ನಿಸಿದ್ದಾರೆಂದು ಗಂಡನ ವಿರುದ್ಧ ಮಹಿಳೆ ಪೋಲೀಸರಿಗೆ ದೂರು ನೀಡಿದ ಘಟನೆ ಆ.2 ರಂದು ವರದಿಯಾಗಿದೆ. ಮಹಿಳೆ ನೀಡಿದ ದೂರಿನಲ್ಲಿ ವರದಕ್ಷಿಣೆ...
Loading posts...

All posts loaded

No more posts

error: Content is protected !!