Ad Widget

ಐವರ್ನಾಡು : ಮೀನು ಕೃಷಿಕರಿಗೆ ಸಿಹಿನೀರು ಮುತ್ತು ಕೃಷಿ ತರಬೇತಿ

ಐವರ್ನಾಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮೀನು ಕೃಷಿಕರಿಗೆ ಸಿಹಿನೀರು ಮುತ್ತು ಕೃಷಿ ತರಬೇತಿ ಕಾರ್ಯಕ್ರಮ ಆ.7 ರಂದು ನಡೆಯಿತು. ಶಾಸಕಿ ಕು. ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ, ಪಿಡಿಓ ಶ್ಯಾಮಪ್ರಸಾದ್ ಉಪಸ್ಥಿತರಿದ್ದರು. ತರಬೇತುದಾರರಾಗಿ ಡಾ. ಸುಪ್ರೀತಾ ಬಿ ಯು ಮತ್ತು ಮೀನುಗಾರಿಕೆ ಕಾಲೇಜಿನ ಸಹಾಯಕ...

ಸುಬ್ರಹ್ಮಣ್ಯ : ಇನ್ನರ್ ವ್ಹೀಲ್ ಕ್ಲಬ್ ಪದಗ್ರಹಣ

ಸುಬ್ರಹ್ಮಣ್ಯ ರೋಟರಿ ಕ್ಲಬ್ ಪ್ರಾಯೋಜಿತ ಇನ್ನರ್ ವ್ಹೀಲ್  ಕ್ಲಬ್ ನ ಪದಗ್ರಹಣ ಸಮಾರಂಭವು ಜುಲೈ 22ರಂದು ಇಂಜಾಡಿಯ ಮಹಮ್ಮಾಯ ರೆಸಿಡೆನ್ಸಿ ಸಭಾಂಗಣದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷ ಮಾಲಪ್ಪ ವಹಿಸಿದ್ದರು. ಇನ್ನರ್ ವ್ಹೀಲ್ ಕ್ಲಬ್ 2022 23ನೇ ಸಾಲಿನಲ್ಲಿ ನಡೆಸಿದ ವಿವಿಧ ಕಾರ್ಯಕ್ರಮಗಳ ವರದಿಯನ್ನು ಕಾರ್ಯದರ್ಶಿ ಸೌಮ್ಯ ದಿನೇಶ್ ವಾಚಿಸಿದರು ಅಧ್ಯಕ್ಷೆ ಸರೋಜಾ ಮೈಲಪ್ಪ  ರವರು...
Ad Widget

ಹಸಿಕಸ ಒಣಕಸ ವಿಂಗಡಿಸದೇ ನೇರವಾಗಿ ತ್ಯಾಜ್ಯ ವಿಲೇವಾರಿ ಘಟಕ್ಕೆ ಸಾಗಣೆ – ಕಲ್ಚರ್ಪೆ ನಿವಾಸಿಗಳಿಂದ ಲಾರಿ ತಡೆದು ಪ್ರತಿಭಟನೆ – ಸ್ಥಳಕ್ಕೆ ಶಾಸಕಿ ಕು. ಭಾಗೀರಥಿ ಮುರುಳ್ಯ ಭೇಟಿ – ಭರವಸೆ

ನಗರ ಪಂಚಾಯತ್ ಅಧ್ಯಕ್ಷರ ಅವಧಿ ಮುಗಿದ ದಿನದಿಂದ ಸುಳ್ಯದ ಕಲ್ಚರ್ಪೆಯಲ್ಲಿ ಕಸದ ಸಮಸ್ಯೆ ಪುನಾರವರ್ತನೆಯಾಗಿದ್ದು ಜನ ಲಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಆ.7 ರಂದು ವರದಿಯಾಗಿದೆ. ಸ್ಥಳಕ್ಕೆ ಶಾಸಕಿ ಕು.ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಕೆಲ ದಿನಗಳಿಂದ ಕಸದ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಕಸದ ರಾಶಿ...

ವಿದ್ಯುತ್ ಬಳಕೆದಾರರಿಗೆ ಯಾವುದೇ ಸಮಸ್ಯೆ ಆಗದಂತೆ ಮುತುವರ್ಜಿ ವಹಿಸಬೇಕು : ಶಾಸಕಿ ಭಾಗೀರಥಿ ಸೂಚನೆ

ವಿದ್ಯುತ್ ಸಂಪರ್ಕದಲ್ಲಿ ವಿದ್ಯುತ್ ಬಳಕೆದಾರರಿಗೆ ಯಾವುದೇ ಸಮಸ್ಯೆ ಆಗಬಾರದು  ಆಗಬಾರದೆಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ‌ ನಡೆದ  ಮೆಸ್ಕಾಂ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿದ್ಯುತ್ ಸಮಸ್ಯೆಗಳನ್ನು ತಕ್ಷಣ ಸರಿಪಡಿಸಿಕೊಡುವಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಗ್ರಾಮಸ್ಥರು ವಿದ್ಯುತ್ ಸಮಸ್ಯೆಗಳ ಬಗ್ಗೆ...

ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಡಾ. ಕುರುಂಜಿ ವೆಂಕಟ್ರಮಣ ಗೌಡರ ಪುಣ್ಯಸ್ಮರಣೆ

ಆಧುನಿಕ ಸುಳ್ಯದ ನಿರ್ಮಾತೃ, ಶಿಕ್ಷಣ ಬ್ರಹ್ಮ, ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ದಿ. ಡಾ. ಕುರುಂಜಿ ವೆಂಕಟ್ರಮಣ ಗೌಡರ 10ನೇ ವರ್ಷದ ಪುಣ್ಯ ತಿಥಿಯ ಪ್ರಯುಕ್ತ ನುಡಿನಮನ ಕಾರ್ಯಕ್ರಮವು ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆ.7 ರಂದು ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ. ಡಾ. ಕುರುಂಜಿ ವೆಂಕಟ್ರಮಣ ಗೌಡರ ತತ್ವ...

ಸಂಪಾಜೆ : ಮೂಲಭೂತ ಸೌಕರ್ಯಕ್ಕೆ ಪ್ಲಾಟಿಂಗ್ ಸಮಸ್ಯೆ ಅಡಚಣೆಯಾಗಿದ್ದು ಶೀಘ್ರ ಇತ್ಯರ್ಥಕ್ಕೆ ಹಿತರಕ್ಷಣಾ ವೇದಿಕೆ ಒತ್ತಾಯ

ಸಂಪಾಜೆ ಮೂಲ‌ ಭೂತ ಸೌಕರ್ಯ, ಪ್ಲಾಟಿಂಗ್, ಕನ್ವರ್ಷನ್, ನೈನ್ ಲೆವೆನ್, ಸಾವರ್ಜನಿಕ ಸ್ಮಶಾನ , ಅಡಿಕೆ ಹಳದಿ ರೋಗ, ಕೃಷಿ ಕೂಲಿ ಕಾರ್ಮಿಕ ಸಮಸ್ಯೆಗೆಗಳು ಕಣ್ಣಿಗೆ ಕಂಡರೂ ಇಲಾಖಾಧಿಕಾರಿಗಳು ಸ್ಪಂದನೆ ನೀಡುವುದಿಲ್ಲ ಎಂದು ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಕೆ.ಪಿ .ಜಾನಿ ಹೇಳಿದರು. ಅವರು ಆ.7 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ...

ಪೂದೆ ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನೆ : ಅಧ್ಯಕ್ಷರಾಗಿ ಶ್ರೀನಾಥ್ ಬಾಳಿಲ, ಪ್ರಧಾನ ಕಾರ್ಯದರ್ಶಿಯಾಗಿ ಅನೂಪ್ ಬಿಳಿಮಲೆ

ಮುರುಳ್ಳ ಗ್ರಾಮದ ಪೂದೆ ಶ್ರೀ ಮಹಾವಿಷ್ಣು ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು, ಜೀರ್ಣೋದ್ದಾರ ಸಮಿತಿ ಇತ್ತೀಚೆಗೆ ರಚನೆಗೊಂಡಿತು. ಅಧ್ಯಕ್ಷರಾಗಿ ಶ್ರೀನಾಥ ಬಾಳಿಲ, ಪ್ರಧಾನ ಕಾರ್ಯದರ್ಶಿಯಾಗಿ ಅನೂಪು ಬಿಳಿಮಲೆ, ಜೊತೆ ಕಾರ್ಯದರ್ಶಿಯಾಗಿ ಕೀರ್ತನ್ ಕಳತ್ತಜೆ, ಕೋಶಾಧಿಕಾರಿಯಾಗಿ ಭುವನೇಶ್ವರ ಪೂದೆ ಆಯ್ಕೆಯಾದರು. Keerthan ಗೌರವಾಧ್ಯಕ್ಷರಾಗಿ ಪಿ.ಜಿ.ಎಸ್. ಎನ್.ಪ್ರಸಾದ್, ಪದ್ಮನಾಭ ರೈ ಎಂಜೀರು, ಉಪಾಧ್ಯಕ್ಷರುಗಳಾಗಿ ಕೃಷ್ಣಪ್ಪ ಗೌಡ ಪೂದೆ, ಮೇದಪ್ಪ ಮಾನ್ಯಡ್ಕ, ರಾಮಕೃಷ್ಣ...

ಕಲ್ಲುಗುಂಡಿ : ಸುನ್ನೀ ಸೆಂಟರ್ ಉದ್ಘಾಟನೆ

  ಕಲ್ಲುಗುಂಡಿ : ಎಸ್ಸೆಸ್ಸೆಫ್, ಎಸ್ ವೈ ಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ ಸುನ್ನೀ ದಅವಾ ವಿಂಗ್ ಕಲ್ಲುಗುಂಡಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ ಸೆಂಟರ್ ಕಾರ್ಯಾಚರಣೆಯ ವಿಶಾಲತೆಗಾಗಿ ಸಂಗಂ ಬಿಲ್ಡಿಂಗ್ ಗೆ ಸ್ಥಳಾಂತರಗೊಂಡು ದಿನಾಂಕ 05-08-2023 ಶನಿವಾರ ದಂದು ನೂರುಸ್ಸಾದಾತ್ ಸಯ್ಯಿದ್ ಬಾಯಾರ್ ತಂಙಳ್ ರವರ ಹಸ್ತದಿಂದ ಉದ್ಘಾಟನೆಗೊಂಡಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಸಯ್ಯಿದ್...

ಎನ್ಎಂಸಿಯಲ್ಲಿ ಡಾ.ಕುರುಂಜಿ ವೆಂಕಟರಮಣ ಗೌಡರ ಪುಣ್ಯಸ್ಮರಣೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿಸುಳ್ಯದ ಆಧುನಿಕ ಶಿಲ್ಪಿ, ಶಿಕ್ಷಣ ಕ್ರಾಂತಿಯ ಹರಿಕಾರ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ನ ಸ್ಥಾಪಕಾಧ್ಯಕ್ಷರಾದ ದಿವಂಗತ ಡಾಕ್ಟರ್ ಕುರುಂಜಿ ವೆಂಕಟರಮಣ ಗೌಡರ ಹತ್ತನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ದಿವಂಗತ ಕುರುಂಜಿ ವೆಂಕಟರಮಣ ಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕೆವಿಜಿ...

ದೇವ ಗೆಳೆಯರ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಮುಕುಂದ ಹಿರಿಯಡ್ಕ, ಕಾರ್ಯದರ್ಶಿಯಾಗಿ ಜಯಂತ ದೇವ

ದೇವ ಗೆಳೆಯರ ಬಳಗದ ವಿಶೇಷ ಸಭೆ ಆ.6 ರಂದು ನಡೆದು, ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಯೋಗೀಶ್ ದೇವ, ಅಧ್ಯಕ್ಷರಾಗಿ ಮುಕುಂದ ಹಿರಿಯಡ್ಕ, ಉಪಾಧ್ಯಕ್ಷರಾಗಿ ಚೇತನ್ ಪಡ್ಪು, ಕಾರ್ಯದರ್ಶಿಯಾಗಿ ಜಯಂತ ದೇವ, ಜತೆ ಕಾರ್ಯದರ್ಶಿಯಾಗಿ ಸವಿತ್ ದೇವ, ಕೋಶಾಧಿಕಾರಿಯಾಗಿ ಮಹೇಶ್ ಪಾಲೆಪ್ಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಶರತ್ ಕುಮಾರ್ ದೇವ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಕ್ಷಿತ್...
Loading posts...

All posts loaded

No more posts

error: Content is protected !!