Ad Widget

ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಒಂದೊಂದು ನಾಮಪತ್ರ ಸಲ್ಲಿಕೆ_ ಆಯ್ಕೆ ಬಹುತೇಕ ಫಿಕ್ಸ್

ಪೆರುವಾಜೆ ಗ್ರಾಮ ಪಂಚಾಯತ್ ನಲ್ಲಿ ಇಂದು ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು ಅಧ್ಯಕ್ಷರ ಹುದ್ದೆಗೆ ಪದ್ಮನಾಭ ಪೂಜಾರಿ ಹಾಗೂ ಉಪಾಧ್ಯಕ್ಷರ ಹುದ್ದೆಗೆ ಶಾಹಿನ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಮುಕ್ತಾಯ ಗೊಂಡಿದ್ದು ನಾಮಪತ್ರ ಸಲ್ಲಿಸಿದ ಈ ಈರ್ವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ..

ಕೊಲ್ಲಮೊಗ್ರ ಬೆಂಡೋಡಿ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆಗಾಗಿ ಮನವಿ

ಹರಿಹರಪಲತಡ್ಕ ಹಾಗೂ ಕೊಲ್ಲಮೊಗ್ರು ಗ್ರಾಮಗಳ ಗಡಿಭಾಗವಾದ ಬೆಂಡೋಡಿ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇತ್ತೀಚೆಗೆ ಸುರಿದ ಮಳೆಗೆ ಸೇತುವೆ ಸಂಪರ್ಕ ಸೇರಿ ರಸ್ತೆಯೆಲ್ಲ ಸಂಪೂರ್ಣ ಕೆಟ್ಟು ಹೋಗಿದ್ದು ಜನ ಸಂಚಾರ ವಾಹನ ಸಂಚಾರ ತೀರಾ ದುಸ್ತರವಾಗಿದೆ. ಈ ರಸ್ತೆ ಸುಮಾರು ಎರಡು ಕಿಲೋ ಮೀಟರ್ ದೂರ ಕೊಲ್ಲಮೊಗ್ರದಿಂದ ಬೆಂಡೋಡಿಯೋವರೆಗೆ ಸರಕಾರ ವಿಶೇಷ ಅನುದಾನ ಮಂಜೂರು...
Ad Widget

ಪ್ರತಿಷ್ಠೆಯ ಕಣವಾಗಿರುವ ದೇವಚಳ್ಳ – ಗೊಂದಲಕ್ಕೆ ಸಿಲುಕಿರುವ ಕೆಲ ಸದಸ್ಯರು – ರಾಜೀನಾಮೆಯ ಪ್ರಸ್ತಾಪ

ದೇವಚಳ್ಳ ಗ್ರಾಮ ಪಂಚಾಯತ್ ಪ್ರತಿಷ್ಠೆಯ ಕಣವಾಗಿದ್ದು ಬಣ ರಾಜಕೀಯ ಮತ್ತೆ ಗರಿಗೆದರಿದೆ. ಕೆಲ ಸದಸ್ಯರು ಗೊಂದಲದಲ್ಲಿ ರಾಜೀನಾಮೆ ಮಾತುಗಳು ಕೇಳಿ ಬರುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಸುಲೋಚನ ದೇವ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲೀಲಾವತಿ ಡಿ. ನಾಮಪತ್ರ ಸಲ್ಲಿಸಿದ್ದಾರೆ. ಆದರೇ ಶೈಲೇಶ್ ವಿರುದ್ಧವಿರುವ ಬಣ ಮಾತ್ರ ಅಧ್ಯಕ್ಷ ಸ್ಥಾನ ಪ್ರೇಮಲತಾ ಕೇರ ಅವರಿಗೆ ಕೊಡಬೇಕು ಎಂದು ಬೇಡಿಕೆ...

ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ ನಿಚ್ಚಳ

ಅಜ್ಜಾವರ ಗ್ರಾಮ ಪಂಚಾಯತ್ ನಲ್ಲಿ ಇಂದು ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು ಅಧ್ಯಕ್ಷರ ಹುದ್ದೆಗೆ ಬೇಬಿ ಕಲ್ತಡ್ಕ ಹಾಗೂ ಉಪಾಧ್ಯಕ್ಷರ ಹುದ್ದೆಗೆ ಜಯರಾಮ ನಾಮಪತ್ರ ಸಲ್ಲಿಸಿದ್ದು ನಾಮಪತ್ರ ಪ್ರಕ್ರಿಯೆ ಮುಕ್ತಾಯ ಗೊಂಡಿದ್ದು ಇಲ್ಲಿ ಕಾಂಗ್ರೆಸ್ ಬೆಂಬಲಿತರೆ ಹೆಚ್ಚಿದ್ದು ಮಾತುಕತೆಯ ಮೂಲಕ ಬೇಬಿ ಕಲ್ತಡ್ಕ ಮತ್ತು ಜಯರಾಮ ಇವರಿಗೆ ಒಂದು ವರ್ಷ ಹಾಗೂ ದೇವಕಿ ಮೇನಾಲ ಮತ್ತು ಅಬ್ದುಲ್ಲ...

ಸಂಪಾಜೆ ಪಂಚಾಯತ್ ನಲ್ಲಿ ಅಧ್ಯಕ್ಷ ಪದವಿಗೆ ಹಾಗೂ ಉಪಾಧ್ಯಕ್ಷರ ಹುದ್ದೆಗೆ ಕಾಂಗ್ರೆಸ್ ನಿಂದಲೇ ಎರೆಡೆರಡು ನಾಮಪತ್ರ ಸಲ್ಲಿಕೆ

ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಇದೀಗ ಭಾರಿ ಕುತೂಹಲ ಮೂಡಿಸಿದೆ. ಕಳೆದ ಕೆಲವು ವರ್ಷಗಳಿಂದ ಅಧ್ಯಕ್ಷತೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಭಾರೀ ರಾಜಕೀಯ ಬೆಳವಣಿಗೆಗೆ ವೇದಿಕೆಯಾಗಿದ್ದ ಸಂಪಾಜೆ ಗ್ರಾಮ ಪಂಚಾಯತ್‌ನಲ್ಲಿ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯೂ ಕಗ್ಗಂಟಾಗಿ ಪರಣಮಿಸಿದೆ .ಕಾಂಗ್ರೇಸ್ ಬೆಂಬಲಿತ ಸುಮತಿ ಶಕ್ತಿವೇಲು ಹಾಗೂ ವಿಮಲಾ ಪ್ರಸಾದ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ....

ಅಧಿಕಾರಿಗಳು ಚುನಾವಣಾ ಕರ್ತವ್ಯ ಹಿನ್ನಲೆಯಲ್ಲಿ ಗೈರು, ದೊಡ್ಡೇರಿ ಶಾಲಾ ಅನುಧಾನಕ್ಕೆ ಸ್ಪಷ್ಟನೆ ನೀಡಿದ ಗ್ರಾಮ ಪಂಚಾಯತ್.

8/08/23 ರಂದು ಜರುಗಿದ 22-23 ನೇ ವರ್ಷದ ಪ್ರಥಮ ಗ್ರಾಮಸಭೆಯು ದೊಡ್ಡೇರಿ ಶಾಲೆಯ ಅನುದಾನ ಮತ್ತು ಕೆಲ ಇಲಾಖಾಧಿಕಾರಿಗಳ ಗೈರು ಹಾಜರಿಯಾದ ಹಿನ್ನಲೆಯಲ್ಲಿ ಗ್ರಾಮ ಸಭೆಯನ್ನು ಮುಂದೂಡಲಾಗಿದ್ದು. ದೊಡ್ಡೇರಿ ಶಾಲೆಗೆ ಅನುದಾನವು ಆರ್ಥಿಕ ವರ್ಷ ಅಂತ್ಯದ ಸಂದರ್ಭದಲ್ಲಿ ಮಾಜಿ ಸಚಿವರಾದ ಎಸ್ ಅಂಗಾರರವರ ಆದೇಶದನ್ವಯ ಮಳೆ ಹಾನಿ ಪರಿಹಾರದಲ್ಲಿ ನನ್ನ ಮನವಿಗೆ ಸ್ಪಂದಿಸಿ 7 ಲಕ್ಷ...

ಕಂಡದ ಗೌಜಿ ಕಾರ್ಯಕ್ರಮ ನಡೆದ ಗದ್ದೆಯಲ್ಲಿ ಭತ್ತದ ನಾಟಿ – ಗದ್ದೆಗಿಳಿದು ನಾಟಿ ಮಾಡಿ ವಿದ್ಯಾರ್ಥಿಗಳು

ಗ್ರಾಮ ಪಂಚಾಯತ್ ಅಜ್ಜಾವರ, ಪ್ರತಾಪ ಯುವಕ ಮಂಡಲ ಅಜ್ಜಾವರ, ಚೈತ್ರ ಯುವತಿ ಮಂಡಲ ಅಜ್ಜಾವರ, ಸರಕಾರಿ ಪ್ರೌಢಶಾಲೆ ಅಜ್ಜಾವರ, ಜೇಸಿಐ ಸುಳ್ಯ ಪಯಸ್ವಿನಿ ಸುಳ್ಯ , ಓಂ ಫ್ರೆಂಡ್ಸ್ ಅಜ್ಜಾವರ ಇದರ ಜಂಟಿ ಆಶ್ರಯದಲ್ಲಿ  ಹಡೀಲು ಬಿದ್ದಿರುವ ಗದ್ದೆಯಲ್ಲಿ ಯಾಂತ್ರಿಕೃತ  ಭತ್ತದ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಅಜ್ಜಾವರದ ವಿಷ್ಣುಮೂರ್ತಿ ಒತ್ತೆಕೋಲ ಗದ್ದೆಯಲ್ಲಿ ನಡೆಯಿತು. ಸುಮಾರು 1.05...

ಪಂಜ: ಸ್ಕೌಟ್ ಗೈಡ್ ಪಟಾಲಂ ನಾಯಕರ ಶಿಬಿರ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವತಿಯಿಂದ ಶಾಲಾ ಶಿಕ್ಷಣ ಇಲಾಖೆ, ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ ಸಹಯೋಗದಲ್ಲಿ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸ್ಕೌಟ್ ಗೈಡ್ ದಳಗಳ ಪಟಾಲಂ ನಾಯಕರ ಎರಡು ದಿನಗಳ ತರಬೇತಿ ಶಿಬಿರವು ಆಗಸ್ಟ್ 04 ಮತ್ತು 05ರಂದು...

ಐವರ್ನಾಡು ಗ್ರಾ.ಪಂ. ಅಧ್ಯಕ್ಷರಾಗಿ ಲೀಲಾವತಿ ಕುತ್ಯಾಡಿ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಕೀಲಾಡಿ ಅವಿರೋಧ ಆಯ್ಕೆ

ಐವರ್ನಾಡು ಗ್ರಾಮ ಪಂಚಾಯತು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಆ.08 ರಂದು ನಡೆದಿದ್ದು ಅಧ್ಯಕ್ಷರಾಗಿ ಶ್ರೀಮತಿ ಲೀಲಾವತಿ ಕುತ್ಯಾಡಿ ಹಾಗೂ ಉಪಾಧ್ಯಕ್ಷರಾಗಿ ಬಾಲಕೃಷ್ಣ ಕೀಲಾಡಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದು ಪ್ರಸ್ತುತ ಅಧ್ಯಕ್ಷರಾಗಿರುವ ಬಾಲಕೃಷ್ಣ ಕೀಲಾಡಿ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ಸುಳ್ಯ ವಲಯಾರಣ್ಯಾಧಿಕಾರಿ ಗಿರೀಶ್ ಆರ್ .ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.ಗ್ರಾಮ ಪಂಚಾಯತ್ ಅಭಿವೃದ್ಧಿ...

ಮುರುಳ್ಯ ಗ್ರಾ.ಪಂ. ಅಧ್ಯಕ್ಷರಾಗಿ ವನಿತಾ ಸುವರ್ಣ, ಉಪಾಧ್ಯಕ್ಷರಾಗಿ ಕು. ಜಾನಕಿ ಮುರುಳ್ಯ ಅವಿರೋಧ ಆಯ್ಕೆ

ಮುರುಳ್ಯ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ವನಿತಾ ಸುವರ್ಣ, ಉಪಾಧ್ಯಕ್ಷರಾಗಿ ಕು. ಜಾನಕಿ ಮುರುಳ್ಯ ಅವಿರೋಧ ಆಯ್ಕೆಯಾಗಿದ್ದಾರೆ. ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ವನಿತಾ ಸುವರ್ಣರು ಈ ಬಾರಿ ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷತೆಗೆ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಜಾನಕಿ ಮುರುಳ್ಯ ನಾಮಪತ್ರ ಸಲ್ಲಿಸಿದ್ದು, ಇಬ್ಬರೂ ಅವಿರೋಧ ಆಯ್ಕೆಯಾದರು.ಚುನಾವಣಾಧಿಕಾಧಿಕಾರಿಯಾಗಿ ಪಂಜ ವಲಯಾರಣ್ಯಾಧಿಕಾರಿ ಮಂಜುನಾಥ್ ಆಗಮಿಸಿದ್ದರು.
Loading posts...

All posts loaded

No more posts

error: Content is protected !!